ಥಿಯೇಟರ್‌ಗಳಿಗೆ ಹುಂಡಿ ಹಣ, ನಾನು ಬಾತ್ರೂಮ್ ಆಕ್ಟರ್! Vishwa Comedy Actor Podcast

Sandalwood: ಬ್ಯಾಂಕ್ ಬ್ಯಾಲೆನ್ಸ್ ಹೇಗೆ ಏರಿಕೆ, ಇಳಿಕೆ ಆಗುತ್ತದೆಯೋ, ಅದೇ ರೀತಿ ಜೀವನದಲ್ಲೂ ಬ್ಯಾಲೆನ್ಸ್ ಮಾಡಬೇಕಾಗುತ್ತದೆ ಅಂತಾರೆ ಹಾಸ್ಯ ಕಲಾವಿದ ವಿಶ್ವ ಅವರು.

ವಿಶ್ವ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ.ಇಲ್ಲಿನ ಶ್ರೀನಗರದಲ್ಲಿ ವಿಶ್ವ ಅವರು ಜನಿಸಿದ್ದು, ಅಜ್ಜಿಯ ಮನೆ ಚಾಮರಾಜಪೇಟೆ. ತ್ಯಾಗರಾಜನಗರದಲ್ಲಿ ತಂದೆಯ ತಾಯಿ ಮನೆ. ಹೀಗೆ ಬೆಂಗಳೂರಿನಲ್ಲೇ ವಿಶ್ವ ಅವರ ಜೀವನ ಶುರುವಾಗಿದ್ದು. ವಿಶ್ವ ಅವರ ತಂದೆಯ ಮೂಲ ಕುಣಿಗಲ್. ತಾಯಿ ಮಾಗಡಿಯವರು. ಹಾಗಾಗಿ ವಿಶ್ವ ಅವರು ಮೂಲತಃ ತುಮಕೂರಿನವರು.

ಇವರು ಚಿಕ್ಕವರಿದ್ದಾಗಲೇ, ಸಿನಿಮಾದಲ್ಲಿ ಸಖತ್ ಇಂಟ್ರೆಸ್ಟ್ ಇದ್ದವರು. ಹಾಗಾಗಿ ಶಾಲೆಗೆ ಹೋಗಿ, ಅಲ್ಲಿ ಚಕ್ಕರ್ ಹಾಕಿ, ಮನೆಯಲ್ಲಿದ್ದ ಹುಂಡಿ ಹಣದಿಂದ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುತ್ತಿದ್ದರಂತೆ. ಅದನ್ನೇ ತಮಾಷೆಯಾಗಿ ತರಂಗ ವಿಶ್ವ ಅವರು ನಮ್ಮ ಮನೆಯ ಹುಂಡಿ ಹಣವನ್ನೇ ನಾವು ಸಿನಿಮಾ ಥಿಯೇಟರ್, ಟೆಂಟ್‌ಗಳಲ್ಲಿ ಆಗಲೇ ಇನ್ವೆಸ್ಟ್ ಮಾಡಿದ್ವಿ ಅಂತಾರೆ.

ಇದು ಹಾಸ್ಯ ಎನ್ನಿಸಿದರೂ, ತರಂಗ ವಿಶ್ವ ಅವರು ಹೇಳೋದೇನಂದ್ರೆ, ನಾನು ಥಿಯೇಟರ್‌ಗೆ ಹೋಗದಿದ್ದರೆ, ಎಷ್ಟೋ ವಿಷಯಗಳನ್ನು ಕಲಿಯಲು ಆಗುತ್ತಿರಲಿಲ್ಲ. ಎಲ್ಲ ಭಾಷೆಯ ಸಿನಿಮಾಗಳನ್ನು ನೋಡಿ, ಅದರಿಂದ ನಟನೆಯನ್ನು ನಾನು ಆಗಲೇ ಕಲಿತಿದ್ದೆ ಅಂತಾರೆ ವಿಶ್ವ. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.

About The Author