ಬೆಂಗಳೂರು: ಇಂದು ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆ, ಬೆಂಗಳೂರಿನ ಕೃಷ್ಣ ದೇವಾಲಯ ಮತ್ತು ಮಠಗಳಲ್ಲಿ ಸಂಭ್ರಮ ಸಡಗರದಿಂದ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು. ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೊರಿನಾ ಹಿನ್ನೆಲೆ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನಿರ್ಭಂಧಿಸಲಾಗಿದೆ. ಇಂದು ನಾಳೆ ಇಸ್ಕಾನ್ ಕೃಷ್ಣಜನ್ಮಾಷ್ಟಮಿ ಪೂಜೆ ಆನ್ಲೈನಲ್ಲಿ ವೀಕ್ಷಣೆ ಅವಕಾಶ ನೀಡಲಾಗಿದೆ.

ಸ್ವಾಗತಂ ಕೃಷ್ಣ ಲೈವ್ ಎಂಬ ಶೀರ್ಷಿಕೆ ಯಡಿ ಇಸ್ಕಾನ್ ಸಾಮಾಜಿಕ ಜಾಲತಾಣ ಮೂಲಕ ಕಾರ್ಯಕ್ರಮ ಪ್ರಸಾರವಾಗಲಿದ್ದು, ಇಂದು ನಾಳೆ ವಿವಿಧ ಕಾರ್ಯಕ್ರಮ ನಡೆಯಲಿವೆ. ಮನೆಯಲ್ಲಿ ಕುಳಿತುಕೊಂಡು ಭಕ್ತರು ದೀಪೋತ್ಸವ, ಅಭಿಷೇಕ, ಪಂಚಗವ್ಯ ವೀಕ್ಷಣೆ ಮಾಡಬಹುದಾಗಿದೆ.
ಪ್ರತಿ ವರ್ಷ ಕೃಷ್ಣಜನ್ಮಾಷ್ಟಮಿ ದಿನದಂದು ಲಕ್ಷಾಂತರ ಜನ ಇಸ್ಕಾನ್ ಗೆ ಭೇಟಿ ನೀಡುತ್ತಿದ್ರು. ಆದರೆ ಈ ಭಾರಿ ಇಸ್ಕಾನ್ ನಲ್ಲಿ ಭಕ್ತರ ಆಗಮನಕ್ಕೆ ಬ್ರೇಕ್ ಹಾಕಲಾಗಿದೆ. ಇಸ್ಕಾನ್ನಲ್ಲಿ ಮಹಾಪೂಜೆ,ಅರ್ಘ್ಯ ಪ್ರಧಾನ, ತೆಪ್ಪೋತ್ಸವ ,ಕೃಷ್ಣನಿಗೆ ಅಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಯಲಿವೆ.
ಈ ಬಾರಿ ಜನ್ಮಾಷ್ಟಮಿ ದಿನ ಬೆರಳೆಣಿಕೆಯಷ್ಟು ಭಕ್ತರು ಮತ್ತು ದೇವಾಲಯದ ಸಿಬ್ಬಂದಿ ಮಾತ್ರ ಉಪಸ್ಥಿತರಿದ್ದಾರೆ. ಹೂವಿನಿಂದ ಅಲಂಕೃತವಾದ ರಾಧಾಕೃಷ್ಣರ ಮೂರ್ತಿಯನ್ನು ತೆಪ್ಪದಲ್ಲಿ ಕೂರಿಸಿ ಕಲ್ಯಾಣಿಯ ಸುತ್ತಲೂ ಉತ್ಸವ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಇಸ್ಕಾನ್ ದೇವಾಲಯದ ಮುಖ್ಯ ಸಂಪರ್ಕಾಧಿಕಾರಿ ನವೀನ ನೀರದ ದಾಸ, 36 ವರ್ಷದಿಂದ ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮದಿನವನ್ನಾ ಆಚರಣೆ ಮಾಡುತ್ತಿದ್ವೀ. ಮೊದಲ ಬಾರಿಗೆ ಆನ್ ಲೈನ್ ನಲ್ಲಿ ಕೃಷ್ಣ ಜನ್ಮಾಷ್ಟಮಿ ಅಚರಣೆ ಮಾಡುತ್ತಿದ್ದೇವೆ. ಇಲ್ಲಿ ಜನ್ಮಾಷ್ಟಮಿ ಮಾಡುತ್ತಿದ್ದಾಗ ಬೆಂಗಳೂರಿನ ಭಕ್ತರು ಮಾತ್ರ ಪಾಲ್ಗೊಳ್ಳುತ್ತಿದ್ರು. ಈ ಬಾರಿ ದೇಶ ವಿದೇಶದ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ. ಅಭಿಷೇಕದ ನಂತರ ವಿಶೇಷ ಕಾರ್ಯಕ್ರಮಗಳು ಆನ್ ಲೈನ್ ಮೂಲಕ ನಡೆಯುತ್ತದೆ ಎಂದಿದ್ದಾರೆ.
Priyanka, Karnataka tv, Bangalore

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




