Political News: ಬಿಹಾರ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಎಐ ವೀಡಿಯೋವನ್ನು ಹರಿಬಿಟ್ಟಿದ್ದು, ಈ ಎಐ ವೀಡಿಯೋದಲ್ಲಿ ಪ್ರಧಾನಿ ಮೋದಿ, ಇಂದಿನ ವೋಟ್ ಕದ್ದಿದ್ದಾಯ್‌ತು. ಈಗ ಹೋಗಿ ಮಲಗುತ್ತೇನೆ ಎಂದು ಹೇಳುತ್ತಾರೆ. ಆಗ ಅವರ ಕನಸ್ಸಿನಲ್ಲಿ ಅವರ ತಾಯಿ ಬಂದು, ಮಗನೇ ನೀನು ನನ್ನನ್ನು ನೋಟ್ ಬ್ಯಾನ್ ಮಾಡಿ, ಅದೆಷ್ಟು ಸಮಯ ಲೈನ್‌ನಲ್ಲಿ ನಿಲ್ಲುವ ಹಾಗೆ ಮಾಡಿದೆ..? ಅದಾದ ಬಳಿಕ ನನ್ನ ಸೇವೆ ಮಾಡುವ ಹಾಗೆ ರೀಲ್ಸ್ ಮಾಡಿದೆ. ಇದೀಗ ಬಿಹಾರದಲ್ಲಿ ನನ್ನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಿ. ಇನ್ನೆಷ್ಟು ತುಚ್ಛನಾಗುತ್ತಿ..? ಎಂದು ಪ್ರಶ್ನಿಸುತ್ತಾರೆ.
ಈ ವೀಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದು, ಅತ್ಯಂತ ನೀಚ ಹಾಗೂ ನಾಚಿಕೆಗೇಡಿನ ವಿಷಯ! ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯನ್ನು AI ಆಧಾರಿತ ವೀಡಿಯೊ ಮೂಲಕ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಪಹಾಸ್ಯ ಮಾಡುವ ಮೂಲಕ ನೀಚ ಹಾಗೂ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.
ಇದು ರಾಜಕೀಯವಲ್ಲ – ಇದು ಹೊಲಸು. ರಾಹುಲ್ ಗಾಂಧಿಯವರ ವಿಫಲ ನಾಯಕತ್ವದಲ್ಲಿ, ಕಾಂಗ್ರೆಸ್ ದ್ವೇಷದ ರಾಜಕಾರಣ, ತುಚ್ಚ ರಾಜಕಾರಣ ಮಾಡಲು ಹೊರಟಿದೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ದೃಷ್ಟಿಕೋನವಿಲ್ಲ, ಮೌಲ್ಯಗಳಿಲ್ಲ ಹಾಗೂ ಘನತೆಯೂ ಇಲ್ಲ.
ಪ್ರಧಾನಿಗಳ ದಿವಂಗತ ತಾಯಿಯನ್ನು ರಾಜಕಾರಣಕ್ಕೆ ಎಳೆದು ಪುನರಾವರ್ತಿತ ಅಪರಾಧ ಮಾಡುತ್ತಿರುವುದು ಕೇವಲ ಅವಮಾನವಲ್ಲ, ಇದು ಅಪರಾಧ. ಕಾಂಗ್ರೆಸ್ ಪಕ್ಷದ ಕೀಳು ಮಟ್ಟದ, ಹಳಸಿರುವ ಮನಸ್ಥಿತಿ. ಅಧಿಕಾರದ ದುರಾಸೆಗಾಗಿ ಇಷ್ಟು ಕೆಟ್ಟದಾಗಿ ಹೆಜ್ಜೆಯಿಡಬಹುದು ಎಂಬುದರ ಕೈಗನ್ನಡಿಯಾಗಿದೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
साहब के सपनों में आईं "माँ"
देखिए रोचक संवाद 👇 pic.twitter.com/aA4mKGa67m
— Bihar Congress (@INCBihar) September 10, 2025