Health Tips: ಜಿಮ್ ಟ್ರೇನರ್ ಅಂಜನ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಹಲವು ಫಿಟ್‌ನೆಸ್ ಟಿಪ್ಸ್ ನೀಡಿದ್ದಾರೆ. 1 ತಿಂಗಳಲ್ಲೇ ನಾನು ಸಣ್ಣ ಆಗ್ತೀನಿ ಅಂತಾ ಹೋಗುವವರಿಗೆ ಕಿವಿ ಮಾತು ಹೇಳಿದ್ದಾರೆ.
ಅಂಜನ್ ಅವರು ಹೇಳುವ ಪ್ರಕಾರ 1 ದೇಹವನ್ನು ಸರಿಯಾದ ಶೇಪಿಗೆ ತರಲು 1 ವರ್ಷವಾದರೂ ಬೇಕು. 1 ಸೈಜ್ ಮಾಡಬೇಕು, 2 ಕ್ವಾಲಿಟಿ ಮಾಡಬೇಕು ನಂತರ ಕಟಿಂಗ್ ಮಾಡಬೇಕು. ಆಗ ಪರಿಪೂರ್ಣವಾದ ಆಕಾರ ಬರುತ್ತದೆ. ಅಥವಾ ಪೂರ್ತಿ ಸಣ್ಣ ಆಗಿ, ನಂತರ ಆರೋಗ್ಯಕರ ಆಹಾರ, ಸಪ್ಲಿಮೆಂಟ್ಸ್ ಬಳಸಿ, ದೇಹವನ್ನು ಫಿಟ್ ಮಾಡಬೇಕು. ಹೀಗಾಗಬೇಕು ಅಂದ್ರೆ 3 ತಿಂಗಳಿನಿಂದ 1 ವರ್ಷ ಬೇಕಾಗುತ್ತದೆ ಅಂತಾರೆ ಅಂಜನ್.
ಅಲ್ಲದೇ ಹಾಗಾಗಬೇಕು ಅಂದ್ರೆ ನಾವು ಸರಿಯಾದ ಸಮಯಕ್ಕೆ, ಆರೋಗ್ಯಕರವಾದ ಆಹಾರವನ್ನು ಸೇವಿಸಲೇಬೇಕು. ಸಮಯ ಮೀರದೇ ಆಹಾರ ಸೇವಿಸಿ, ಸರಿಯಾದ ರೀತಿಯಲ್ಲಿ ವರ್ಕೌಟ್ ಮಾಡಿದರೆ, ನಾವು ಫಿಟ್ ಆಗಿರಬಹುದು ಅಂತಾರೆ ಅಂಜನ್.
1 ದಿನಕ್ಕೆ 6 ಬಾರಿ ಆಹಾರ ಸೇವನೆ ಮಾಡಬೇಕು. ಡ್ರೈಫ್ರೂಟ್ಸ್, ಎಗ್, ಫ್ರೂಟ್ಸ್, ಓಟ್ಸ್ ಹೀಗೆ 2 ಗಂಟೆಗೆ 1 ಸಲ ಸ್ವಲ್ಪ ಸ್ವಲ್ಪ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಎಲ್ಲರಿಗೂ ಯಾವುದು ಆರೋಗ್ಯಕ್ಕೆ ಉತ್ತಮ ಮತ್ತು ಉತ್ತಮವಲ್ಲ ಅನ್ನೋದು ತಿಳಿದಿದೆ. ಆದರೆ ಯಾವ ಸಮಯದಲ್ಲಿ ಯಾವ ಆಹಾರ ಸೇವಿಸಬೇಕು ಅಂತ ಮಾತ್ರ ತಿಳಿದಿಲ್ಲ ಅಂತಾರೆ ಅಂಜನ್.
ವರ್ಕೌಟ್ ಮಾಡುವ ಮುನ್ನ ಕೆಲವರು ಜ್ಯೂಸ್ ಸೇವಿಸುತ್ತಾರೆ. ಆದರೆ ಹಾಗೆ ಮಾಡಬಾರದು. ವ್ಯಾಯಾಮಕ್ಕೂ ಮುನ್ನ 1 ಹಣ್ಣು ಸೇವಿಸಬೇಕು. ಇನ್ನು ನೀವು ತೂಕ ಇಳಿಸಬೇಕು ಅಂದ್ರೆ ಆರೆಂಜ್, ನಿಂಬೆಹಣ್ಣು, ಮೂಸಂಬಿ ಜ್ಯೂಸ್ ಕುಡಿಯಬೇಕು. ದೇಹದ ತೂಕ ಹೆಚ್ಚಿಸಬೇಕು ಅಂದ್ರೆ, ಬಟರ್ ಫ್ರೂಟ್, ಬಾಳೆಹಣ್ಣು, ಚಿಕ್ಕು ಇದೆಲ್ಲ ಜ್ಯೂಸ್, ಮಿಲ್ಕ್ ಶೇಕ್ ಸೇವಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




