Spiritual: ನಾವು ಭಾರತೀಯ ಮಿಡಲ್ ಕ್ಲಾಸ್ ಜನರು ಹಣ ಖರ್ಚು ಮಾಡದಿರಲು ಎಲ್ಲೆಲ್ಲಿ ಸಾಧ್ಯ ಎಂದು ನೋಡುತ್ತೇವೆ. ಇದೇ ಬುದ್ಧಿ ನಮಗೆ ಜೀವನ ಮಾಡಲೂ ಕಲಿಸಿದೆ ಅನ್ನೋದು ಸತ್ಯ. ಆದರೆ ನೀವೇನಾದರೂ ಬೇರೆ ವಸ್ತ್ರ ತರುವ ಬದಲು, ಇರುವ ಹಳೇ ವಸ್ತ್ರದಲ್ಲೇ ಮನೆ ಕ್ಲೀನ್ ಮಾಡೋಣ ಅಂದ್ರೆ, ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಎಂದಿಗೂ ಆಗುವುದಿಲ್ಲ. ಹಾಗಾದ್ರೆ ನಾವು ಹಳೇ ವಸ್ತ್ರವನ್ನು ಬಳಸಲೇ ಬಾರದಾ..? ಬಳಸೋದಾದರೂ ಹೇಗೆ ಬಳಸಬೇಕು..? ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ನಾವು ಹಳೆಯ ವಸ್ತ್ರಗಳನ್ನು ಮನೆ ಕ್ಲೀನ್ ಮಾಡಲು ಬಳಸಿದರೆ, ನಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ. ನೆಮ್ಮದಿಯೂ ಕಡಿಮೆಯಾಗುತ್ತದೆ. ಲಕ್ ಕೂಡ ಕಡಿಮೆಯಾಗುತ್ತದೆ. ಹಾಗಾಗಿ ನಾವು ಹಳೆ ವಸ್ತ್ರಗಳಿಂದ ಮನೆ ಕ್ಲೀನ್ ಮಾಡಬಾರದು.
ಯಾವ ಮನೆಯಲ್ಲಿ ಹಳೆ ವಸ್ತ್ರವನ್ನು ಹೆಚ್ಚು ಬಳಸುತ್ತಾರೋ, ಅಂಥ ಮನೆಯಲ್ಲಿ ಲಕ್ಷ್ಮೀ ದೇವಿ ಹೆಚ್ಚು ಕಾಲ ನೆಲೆಸುವುದಿಲ್ಲ. ಬಂದ ದುಡ್ಡು ಹಾಗೆ ಹೋಗುತ್ತದೆ. ಖರ್ಚು ಹೆಚ್ಚಾಗುತ್ತದೆ. ರಾಹುವಿನ ಆಶೀರ್ವಾದ ಕೂಡ ಸಿಗುವುದಿಲ್ಲ. ಹಾಗಾಗಿ ನೀವು ಮನೆ ಕ್ಲೀನ್ ಮಾಡಲು ಉತ್ತಮವಾದ ವಸ್ತ್ರವನ್ನೇ ಬಳಸಿ.
ಇನ್ನು ನೀವು ನಿಮ್ಮ ವಸ್ತ್ರವನ್ನು ಮನೆ ಕ್ಲೀನ್ ಮಾಡಲು ಬಳಸಿದರೆ, ಅಥವಾ ದಾನ ಮಾಡಿದರೆ, ನಿಮ್ಮಲ್ಲಿನ ಸಕಾರಾತ್ಮಕ ಶಕ್ತಿ ಕಡಿಮೆಯಾಗಿ, ನಕಾರಾತ್ಮಕ ಗುಣ ಹೆಚ್ಚಾಗುತ್ತದೆ. ಅಲ್ಲದೇ, ನಿಮ್ಮಲ್ಲಿ ಮಾನಸಿಕ ನೆಮ್ಮದಿ ಕಡಿಮೆಯಾಗುತ್ತದೆ. ಹಾಗಾಗಿ ನಿಮ್ಮ ಹಳೆ ಉಡುಪುಗಳನ್ನು ಹಾಗೆ ದಾನ ಮಾಡಬಾರದು.
ಹಳೆ ವಸ್ತ್ರಗಳನ್ನೇ ನಿಮ್ಮ ಮನೆ ಕ್ಲೀನ್ ಮಾಡಲು ಬಳಸಲೇಬೇಕು ಅಥವಾ ದಾನ ಮಾಡಬೇಕು ಎಂದರೆ, ನೀವು ಆ ವಸ್ತ್ರಗಳನ್ನು ಉಪ್ಪು ನೀರಿನಲ್ಲಿ ವಾಶ್ ಮಾಡಬೇಕು. ಆಗ ನಿಮ್ಮಲ್ಲಿನ ಸಕಾರಾತ್ಮಕ ಶಕ್ತಿ ಕಳೆದುಹೋಗುವುದಿಲ್ಲ.