Monday, October 6, 2025

Latest Posts

ಕೋಲಾರ BPL ಫಲಾನುಭವಿಗಳಿಗೆ ಬಿ‌ಗ್‌ ಶಾಕ್!

- Advertisement -

ಕೋಲಾರ ಜಿಲ್ಲೆಯಲ್ಲಿ ಸಾವಿರಾರು ಪಡಿತರ ಕಾರ್ಡ್‌ಗಳು, ರದ್ದಾಗುವ ಆತಂಕ ಎದುರಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿಗದಿಪಡಿಸಿದ ಮಾನದಂಡ ಮೀರಿರುವ, 20 ಸಾವಿರ ಬಿಪಿಎಲ್‌ ಕಾರ್ಡ್‌ಗಳು ಜಿಲ್ಲೆಯಲ್ಲಿ ಪತ್ತೆಯಾಗಿವ. ಈ ಎಲ್ಲಾ ಕಾರ್ಡ್‌ಗಳು, ಶೀಘ್ರವೇ ಕಾರ್ಡ್‌ಗಳು ರದ್ದಾಗುವ ಸಾಧ್ಯತೆಗಳಿವೆ.

ಕಾನೂನು ಬಾಹಿರವಾಗಿ ಪಡೆದುಕೊಂಡಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಹಿಂತಿರುಗಿಸುವಂತೆ, ಸಾಕಷ್ಟು ಬಾರಿ ಅವಕಾಶ ನೀಡಲಾಗಿತ್ತು. ಹೆಚ್ಚಿನ ಸಂಖ್ಯೆಯ ನಾಗರಿಕರು ಬಿಪಿಎಲ್‌ ಕಾರ್ಡ್‌ ಹಿಂತಿರುಗಿಸಲು ಮುಂದಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ ಸದ್ದಿಲ್ಲದೆ ಕಾರ್ಯಾಚರಣೆ ಆರಂಭಿಸಿರುವ ಆಹಾರ ಇಲಾಖೆ, ಅರ್ಹತೆಯಿಲ್ಲದ ಕಾರ್ಡ್‌ಗಳ ರದ್ದು ಮಾಡಲು ಮುಂದಾಗಿದೆ.

ಇನ್ನು ಕರ್ನಾಟಕದಲ್ಲಿ 7.76 ಲಕ್ಷ ಅನುಮಾನಾಸ್ಪದ ಪಡಿತರ ಚೀಟಿಗಳಿರುವ ಬಗ್ಗೆ, ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ತಕ್ಷಣವೇ ಅನರ್ಹ ಪಡಿತರ ಕಾರ್ಡ್‌ ರದ್ದು ಮಾಡಲು ಸೂಚಿಸಿತ್ತು. ಬಳಿಕ ರಾಜ್ಯ ಆಹಾರ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ, ಸಾವಿರಾರು ಅನರ್ಹ ಕಾರ್ಡ್‌ಗಳು ಪತ್ತೆಯಾಗಿವೆ.

ಮಾನದಂಡಗಳ ಅನ್ವಯ 1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು, ಬಿಪಿಎಲ್‌ ಪಡಿತರ ಚೀಟಿ ಹೊಂದಲು ಅನರ್ಹರಾಗಿರುತ್ತಾರೆ. ಜತೆಗೆ ಕುಟುಂಬದಲ್ಲಿ ಯಾರಾದರೂ ಒಬ್ಬರು, ಆದಾಯ ತೆರಿಗೆ ಪಾವತಿದಾರರು, ಕಂಪನಿಗಳಲ್ಲಿ ನಿರ್ದೇಶಕರು, 4 ಚಕ್ರಗಳ ವಾಹನ ಹೊಂದಿರುವವರು, ವಾರ್ಷಿಕ 25 ಲಕ್ಷಕ್ಕಿಂತಲೂ ಹೆಚ್ಚಿನ ಜಿಎಸ್‌ಟಿ ವಹಿವಾಟು ನಡೆಸುವಂವರು, ಬಿಪಿಎಲ್‌ ಕಾರ್ಡ್‌ ಪಡೆಯಲು ಅನರ್ಹರಾಗಿರುತ್ತಾರೆ.

ಇನ್ನು, ಅನರ್ಹ ಬಿಪಿಎಲ್‌ ಕಾರ್ಡ್‌ಗಳ ರದ್ದತಿಗೆ ಮುಂದಾಗಿರುವ ಆಹಾರ ಇಲಾಖೆ, ಕೋಲಾರ ಜಿಲ್ಲೆಯಲ್ಲಿರುವ ಆಹಾರ ನಿರೀಕ್ಷಕರಿಗೆ ಟಾರ್ಗೆಟ್‌ ನೀಡಿದೆ. ಮಾಸಿಕ 1,200 ಅನರ್ಹ ಕಾರ್ಡ್‌ಗಳನ್ನ, ರದ್ದುಗೊಳಿಸುವ ಗುರಿಯನ್ನು ನೀಡಿದೆ. ಒಂದೆಡೆ ಸ್ಥಳೀಯ ರಾಜಕೀಯ ನಾಯಕರು ಕಾರ್ಡ್‌ ರದ್ದುಗೊಳಿಸದಂತೆ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ ಅನರ್ಹ ಕಾರ್ಡ್‌ಗಳ ರದ್ದತಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಬಿಪಿಎಲ್‌ ಕಾರ್ಡ್‌ಗಳ ರದ್ದು ವಿಚಾರ, ಅಧಿಕಾರಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.

- Advertisement -

Latest Posts

Don't Miss