Tumakuru: ತುಮಕೂರು: ತುಮಕೂರಿನ ಮದುಗಿರಿ ತಾಲ್ಲೂಕಿನ ಪೊಲೇನಹಳ್ಳಿಯಲ್ಲಿ ದಲಿತ ವ್ಯಕ್ತಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ಹಾಗೂ ಪ್ರಗತಿಪರ ಸಂಘಟನೆ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆದಿದ್ದು, ಈ ಹತ್ಯೆಗೆ ಕಾರಣರಾದವರನ್ನು ಇನ್ನೂ ಬಂಧಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಿದ್ದೇನು..?
ತುಮಕೂರಿನ ಮದುಗಿರಿ ತಾಲ್ಲೂಕಿನ ಪೊಲೇನಹಳ್ಳಿಯಲ್ಲಿ ಈ ಹತ್ಯೆ ನಡೆದಿತ್ತು. ದಲಿತ ವ್ಯಕ್ತಿ ಆನಂದ್ ಎಂಬಾತನ್ನ ಬೊಲೆರೋ ವಾಹನದಿಂದ ಡಿಕ್ಕಿ ಹೊಡೆದು ಕೊಲೆಗೈದಿದ್ದರು. ಹತ್ಯೆ ಮಾಡಿರುವ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ. ಆದರೆ ಈ ಹತ್ಯೆಗೆ ಕಾರಣರಾದವರನ್ನು ಬಂಧಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಲ್ಲದೇ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.




