Tuesday, September 23, 2025

Latest Posts

ಫರ್ಹಾನ್ ʼರೈಫಲ್ʼ ಸೆಲೆಬ್ರೆಷನ್ ಗಿಲ್-ಅಭಿಷೇಕ್ ರಿಂದ ಪಾಕಿಸ್ತಾನಿಗಳ ಮಾನಹರಾಜು !

- Advertisement -

ಏಷ್ಯಾ ಕಪ್ 2025ರ ಸೂಪರ್ 4 ಹಂತದ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದವು. ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ತನ್ನ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡಿತು. ಸೈಮ್ ಅಯೂಬ್ ಬದಲಿಗೆ ಸಾಹಿಬ್ಜಾದಾ ಫರ್ಹಾನ್ ಅವರೊಂದಿಗೆ ಫಖರ್ ಜಮಾನ್ ಅವರನ್ನು ಓಪನರ್ ಆಗಿ ಕಳುಹಿಸಿತು. ಆರಂಭದಲ್ಲೇ ಪಾಕ್ ಬ್ಯಾಟರ್ಗಳು ಎಡವಿದ್ದರೂ ಭಾರತೀಯ ಫೀಲ್ಡರ್ಗಳ ಕಳಪೆ ಪ್ರದರ್ಶನದಿಂದ ಬಚಾವ್ ಆದರು. ಈ ಪೈಕಿ ಫರ್ಹಾನ್ ತಮಗೆ ಸಿಕ್ಕ ಲೈಫ್ಲೈನ್ಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡರು.

ಸಾಹಿಬ್ಜಾದಾ ಫರ್ಹಾನ್ 45 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್ಗಳೊಂದಿಗೆ 58 ರನ್ ಗಳಿಸಿದರು. ಇದೀಗ ಇವರು ಅರ್ಧಶತಕ ಗಳಿಸಿದ ನಂತರ ಸಂಭ್ರಮಾಚರಣೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವಿವಾದ ಹುಟ್ಟುಹಾಕಿದೆ. ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿದ ತಕ್ಷಣ ತಮ್ಮ ಬ್ಯಾಟ್ ಅನ್ನು ರೈಫಲ್ ರೀತಿಯಲ್ಲಿ ಹಿಡಿದು ಫೈರ್ ಮಾಡುವಂತೆ ಸಂಭ್ರಮಾಚರಣೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.

ಸಾಹಿಬ್ಜಾದಾ ಫರ್ಹಾನ್ ಈ ರೀತಿ ಸಂಭ್ರಮಾಚರಣೆ ಮಾಡಿದ್ದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಎಕ್ಸ್ ಬಳಕೆದಾರರೊಬ್ಬರು ಈ ಬಗ್ಗೆ ಬರೆದುಕೊಂಡಿದ್ದು, ಪಾಕಿಸ್ತಾನಿ ಮನಸ್ಥಿತಿಯನ್ನು ಪಾಕಿಸ್ತಾನಿ ಕ್ರಿಕೆಟಿಗರು ತೋರಿಸಿದ್ದಾರೆ. ಇವರು ಹುಟ್ಟು ಭಯೋತ್ಪಾದಕರು. ಜೀವನದಲ್ಲಿ ಒಂದೇ ಒಂದು ಗುರಿ – ಭಾರತೀಯರ ಮೇಲೆ ಗುಂಡು ಹಾರಿಸುವುದು. ಬ್ಲಡಿ ಈಡಿಯಟ್ಸ್! ಇದೇ ರೀತಿಯ ದ್ವೇಷಪೂರಿತ ಮನಸ್ಥಿತಿ, ಪ್ರಚೋದಿಸಿದರೆ ಯಾರೂ ಅವರಿಗೆ ಕರುಣೆ ತೋರಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ಪಾಕಿಸ್ತಾನವನ್ನು ಆರು ವಿಕೆಟ್ಗಳಿಂದ ಸೋಲಿಸಿ ಜಯಗಳಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಭಾರತಕ್ಕೆ 172 ರನ್ಗಳ ಗುರಿಯನ್ನು ನಿಗದಿಪಡಿಸಿತು. ಟೀಮ್ ಇಂಡಿಯಾ 18.5 ಓವರ್ಗಳಲ್ಲಿ ಆರು ವಿಕೆಟ್ಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು. ಅಭಿಷೇಕ್ ಶರ್ಮಾ 74 ರನ್ಗಳಿಸಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಇನ್ನು ಪಾಕಿಸ್ತಾನವನ್ನು ಸೋಲಿಸಿದ ನಂತರ, ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಮ್ಮ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಲಕ್ಷಾಂತರ ಪಾಕಿಸ್ತಾನಿಗಳು ಇದರಿಂದ ಸಿಟ್ಟಾಗಿರುವುದು ಖಚಿತ. ಅಭಿಷೇಕ್ ಶರ್ಮಾ ತಮ್ಮ ಮತ್ತು ಟೀಮ್ ಇಂಡಿಯಾದ ಗೆಲುವಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ನೀವು ಮಾತನಾಡಿ, ಮತ್ತು ನಾವು ಗೆಲ್ಲುತ್ತೇವೆ ಎಂದು ಬರೆದಿದ್ದಾರೆ. ಅತ್ತ ಗಿಲ್ ಇದೇ ರೀತಿಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವರು ಕೂಡ ಪಂದ್ಯದ ಫೋಟೋಗಳನ್ನು ಹಂಚಿಕೊಂಡು, ಆಟವು ಮಾತನಾಡುತ್ತದೆ, ಪದಗಳಲ್ಲ…ಎಂದು ಬರೆದಿದ್ದಾರೆ. ಈ ಮೂಲಕ ಪಾಕಿಸ್ತಾನಗಳ ಮಾನಹರಾಜು ಮಾಡಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss