ರಾಜ್ಯದಲ್ಲಿರುವ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು, ಈಗ ಸ್ವಯಂ ಉದ್ಯೋಗಿಗಳಾಗಿದ್ದಾರೆ. ಪ್ರತಿ ತಿಂಗಳು ಗೃಹಲಕ್ಷ್ಮೀಯಿಂದ ಬಂದ ಹಣವನ್ನು ಕೂಡಿಟ್ಟು, ಬಂಡವಾಳ ಮಾಡಿಕೊಂಡು ವ್ಯಾಪಾರ ಶುರು ಮಾಡಿದ್ದಾರೆ. ಮಹಿಳಾ ದಸರಾದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳ ಮಳಿಗೆಗಳು, ಎಲ್ಲರ ಗಮನ ಸೆಳೆದಿವೆ.
ತಿಂಡಿ ತಿನಿಸುಗಳ ಮಳಿಗೆ, ಬ್ಯಾಂಗಲ್ಸ್ ಸ್ಟೋರ್ ಹಾಗೂ ಬಟ್ಟೆ ಮಳಿಗೆ ತೆರೆದಿದ್ದು, ಸ್ವಯಂ ಉದ್ಯೋಗಿಗಳಾಗಿ ಫಲಾನುಭವಿಗಳು ಬದಲಾಗಿದ್ದಾರೆ. ವರಲಕ್ಷ್ಮಿ ಸ್ತ್ರೀ ಶಕ್ತಿ ಸಂಘದ ಮೂಲಕ ಮಳಿಗೆಯನ್ನು ಪಡೆದಿರುವ ಎಚ್.ಡಿ. ಕೋಟೆಯ ಸಿಂಧು, ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಆರು ತಿಂಗಳು ಕೂಡಿಟ್ಟಿದ್ರಂತೆ. 12 ಸಾವಿರ ರೂ.ಗಳಿಂದಲೇ ಸ್ಯಾಂಡ್‌ವಿಚ್ ಕಾರ್ನರ್ ಹೆಸರಲ್ಲಿ, ಕುರುಕಲು ತಿಂಡಿ ತಿನಿಸುಗಳ ಮಳಿಗೆ ತೆರೆದಿದ್ದಾರೆ.
ಎಚ್.ಡಿ.ಕೋಟೆಯ ದೃಷ್ಟಿ ವಿಶೇಷಚೇತನೆ ಶೃತಿ, ಗೃಹಲಕ್ಷ್ಮಿಹಣದಿಂದ ಫ್ಯಾನ್ಸಿ ವಸ್ತುಗಳನ್ನು ತಂದು ವ್ಯಾಪಾರ ಮಾಡುತ್ತಿದ್ದಾರೆ. ಎಚ್.ಡಿ.ಕೋಟೆಯ 60 ಮಂದಿ ಹಾಡಿ ಹೆಣ್ಣುಮಕ್ಕಳು ಸಂಘಟಿತರಾಗಿ, ಪ್ರಕೃತಿ ಗಿರಿಜನ ಮಹಿಳಾ ಒಕ್ಕೂಟ ರಚಿಸಿಕೊಂಡಿದ್ದಾರೆ. ರಾಗಿಯಿಂದ ತಯಾರಿಸಿದ ಉತ್ಪನ್ನಗಳನ್ನು, ಮಹಿಳಾ ದಸರಾದಲ್ಲಿ ಮಾರಾಟಕ್ಕೆ ಇರಿಸಿದ್ದಾರೆ. ರಾಗಿ ಹುರಿಹಿಟ್ಟು, ರಾಗಿ ಮುರುಕು, ರಾಗಿ ಮಿಕ್ಸ್‌ಚರ್, ಹೀಗೆ ರಾಗಿಯಿಂದ ತಯಾರಿಸಿದ ನಾನಾ ಉತ್ಪನ್ನಗಳು ನೆರೆದಿದ್ದಾರೆ. ಇನ್ನು, ಮೈಸೂರಿನ ವಿಜಯ ನಗರ ನಿವಾಸಿ ಗಗನ, ಗೃಹಲಕ್ಷ್ಮಿಯ ಹಣವನ್ನು ಉಳಿಸಿ ಬಟ್ಟೆ ಅಂಗಡಿ ತೆರೆದಿದ್ದಾರೆ.
ಒಟ್ನಲ್ಲಿ ಗೃಹಲಕ್ಷ್ಮೀ ಯೋಜನೆಯಿಂದಾಗಿ, ಸಾವಿರಾರು ಹೆಣ್ಮಕ್ಕಳು ಸ್ವಾವಲಂಬಿಗಳಾಗಿದ್ದಾರೆ. ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.