ಕುಟುಂಬದ ಕಲಹ ಬಿಂಬಿಸುವ ಗೃಹ ಭಂಗ.. ವೈಜ್ಞಾನಿಕತೆಯ ಗಗನ ವಿವರಿಸುವ ಯಾನ… ಸನಾತನ ಅಡಿಪಾಯದ ಆವರಣ… ಹಿಮಾಲಯಕ್ಕೆ ಕರದೈದರು ಸನ್ಯಾಸತ್ವ ಬೇಡ ಎನೀಸೊ ನರಾಕರಣ.. ಹೀಗೆ ಎಸ್ ಎಲ್ ಭೈರಪ್ಪರ ಒಂದೊಂದು ಕಾದಂಬರಿ ವಸ್ತುವು… ವಿಭಿನ್ನ ವಿಶಿಷ್ಟ…
ಎಸ್ ಎಲ್ ಬೈರಪ್ಪ ಕನ್ನಡ ಸಾಹಿತ್ಯ ಲೋಕದ ವಿಭಿನ್ನ ವಿಶಿಷ್ಟ ಪ್ರಯೋಗಾತ್ಮಕ ಲೇಖಕ.. ಬೈರಪ್ಪನವರ ಲೇಖನಗಳಲ್ಲಿ ನೈಜತೆಯೇ ಕಾದಂಬರಿಗಳ ಆಧಾರವಾಗಿತ್ತು. ಹಾಸನ ಜಿಲ್ಲೆ, ಸಂತೆ ಶಿವಾರದಲ್ಲಿ ಹುಟ್ಟಿದವರು. ಬಾಲ್ಯದಲ್ಲಿ ಸಿನಿಮಾ ಟೋರಿಂಗ್ ಟಾಕೀಸ್ ಗಳಲ್ಲಿ ಗೇಟ್ ಕೀಪರ್ ಆಗಿ, ಹೋಟೆಲ್ ಗಳಲ್ಲಿ ಮಣಿಯಾಗಿ, ಜೀವನ ಜೀವನ ನಡೆಸಿದ್ರು.ಕಾಲೇಜ್ ಅವಧಿಯಲ್ಲಿ ಭೀಮ ಕಾಯ ಎಂಬ ಕಾದಂಬರಿ ಬರೆದು ಅಲ್ಲೇ ತಮ್ಮ ಸಾಹಿತ್ಯ ಪ್ರೇಮವನ್ನು ಮರೆದವರು. ಅಪ್ಪ ಉಡಾಫೆ. ಆದರೂ ಅಮ್ಮ ಜ್ಞಾನವಂತೆ. ಹೀಗಾಗಿ, ಬಾಲ್ಯದಲ್ಲಿ ಸಾಹಿತ್ಯದಲ್ಲಿ ಒಲವು ಬಂದಿತ್ತು.
ಕೇವಲ ಕಾಲ್ಪನಿಕ ಕಥೆಗಳಿಗಷ್ಟೇ ಸೀಮಿತವಾಗದೆ, ಆವರಣ ದಾಟುವ ಮೂಲಕ ಸಾಹಿತ್ಯ ಕೃಷಿ ಮಾಡಿದವರು ಬೈರಪ್ಪ. ಯಾನ ದಲ್ಲಿ ಗಗನ ಯಾನದ ಬಗ್ಗೆ, ಗೃಹಭಂಗದಲ್ಲಿ ಕುಟುಂಬದ ಬಗ್ಗೆ.. ಆವರಣದಲ್ಲಿ ಸನಾತನ ಧರ್ಮದ ಬಗ್ಗೆ.. ನೆಲೆಯಲ್ಲಿ ಇತಿಹಾಸದ ಬಗ್ಗೆ… ನಿರಾಕರಣದಲ್ಲಿ ಸನ್ಯಾಸಿ ಯಾಗುವ ಬಗ್ಗೆ .. ಹೀಗೆ ಪ್ರತಿ ಕಾದಂಬರಿಯಲ್ಲೂ ಬೇರೆ ಬೇರೆ ವಿಚಾರಗಳನ್ನ ಎತ್ತಿಟ್ಟುಕೊಂಡು ಕಾದಂಬರಿ ರಚಿಸಿದವರು.
ಸನಾತನ ಧರ್ಮದ ಮೌಲ್ಯಗಳನ್ನೇ ತಮ್ಮ ಕಾದಂಬರಿಗಳಲ್ಲಿ ಹೆಚ್ಚಾಗಿ ಪ್ರಯೋಗಿಸುತ್ತಿದ್ದರು. ಇದು ಪ್ರಗತಿಪರ ಲೇಖಕರಿಗೆ ಇಷ್ಟವಾಗುತ್ತಿರಲಿಲ್ಲ ಹಾಗಾಗಿ ಭೈರಪ್ಪನವರನ್ನು ಪ್ರತ್ಯೇಕವಾಗಿ ಇಟ್ಟಿದ್ದರು. ಭೈರಪ್ಪ ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಪ್ರದೇಶಕ್ಕೆ ಭಾಷೆಯೊಂದರಿಂದ ಭಾರತದ ಹಲವು ಭಾಷೆಗಳಿಗೆ ಮತ್ತು ಇಂಗ್ಲಿಷ್ ಭಾಷೆಗೆ ಅನುವಾದ ಗೊಂಡ ಲೇಖಕರ ಪುಸ್ತಕದಲ್ಲಿ ಭೈರಪ್ಪನವರೇ ಅಗ್ರಗಣ್ಯರು. ಇವರ ಪುಸ್ತಕಗಳು ಮರಾಠಿ, ಹಿಂದಿ, ಒರಿಯ, ಪಂಜಾಬಿ, ತೆಲುಗು,ತಮಿಳು, ಮಲಯಾಳಂ ಹೀಗೆ ಹಲವು ಭಾಷೆಗಳಿಗೆ ಅನುವಾದ ಗೊಂಡಿವೆ.
ಆಡುಭಾಷೆಗೂ ಸೈ ವೈಜ್ಞಾನಿಕ ಭಾಷೆಗೂ ಸೈ ಎನ್ನುವ ಮೂಲಕ ಸಾಹಿತ್ಯ ಕೃಷಿ ಮಾಡಿದವರು. ಭಾರತೀಯ ತತ್ವಶಾಸ್ತ್ರದ ಆಧಾರವೆ ಇವರ ಸಾಹಿತ್ಯದ ಮೂಲವಾಗಿತ್ತು. ಗ್ರಹಣ ಕಾದಂಬರಿಯಲ್ಲಿ ಸೂರ್ಯಗ್ರಹಣ ಚಂದ್ರಗ್ರಹಣದಂತೆ ಬುದ್ದಿಗೂ ಗ್ರಹಣ ಬರುತ್ತದೆ ಅನ್ನೋ ಮೂಲಕ ಫಿಲಾಸಫಿಕಲ್ ರೈಟರ್ ಎನಿಸಿಕೊಂಡಿದ್ದರು..
ಸಾಹಿತ್ಯದಲ್ಲಿ ಇಷ್ಟೆಲ್ಲಾ ಸೇವೆ ಸಲ್ಲಿಸಿದ್ದ ಬೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿಲ್ಲ. ಪದ್ಮಭೂಷಣ, ಸಾಹಿತ್ಯ ಸಮ್ಮಾನ್ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಸಾಹಿತ್ಯದಿಂದ ಬಂದ ಹಣದಲ್ಲಿ ತಮ್ಮ ಹುಟ್ಟೂರಿನ ಕೆರೆ ಹೂಳೆತ್ತಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ…ಒಟ್ಟಿನಲ್ಲಿ ಓದುಗರ ಸಾಕ್ಷಿಪ್ರಜ್ಞೆಯಂತೆಯಿಂದ ಭೈರಪ್ಪನವರ ಬರವಣಿಗೆ ಇಲ್ಲದೆ ಕನ್ನಡ ಸಾಹಿತ್ಯ ಲೋಕ ಅನಾಥವಾಗಿದೆ…




