ಗ್ರೇಟರ್ ಬೆಂಗಳೂರು ಕಾನ್ಸೆಪ್ಟ್ ಹಿನ್ನೆಲೆ: 2 ಪೊಲೀಸ್ ಕಮಿಷನರೇಟ್‌ಗೆ ಚಿಂತನೆ: ಡಾ.ಜಿ.ಪರಮೇಶ್ವರ್

Tumakuru: ತುಮಕೂರು: ತುಮಕೂರಿನಲ್ಲಿ ಪಾಲಿಕೆ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿರುವ ಗೃಹಸಚಿವ ಜಿ.ಪರಮೇಶ್ವರ್, ವಿಸ್ತರಣೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದೇವೆ. 14 ಪಂಚಾಯತಿಗಳು ಮಹಾನಗರ ಪಾಲಿಕೆ ಒಳಗಡೆ ಬರಬೇಕೆಂಬ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ತೀರ್ಮಾನ ಮಾಡಬೇಕು ಎಂದಿದ್ದಾರೆ.

ಬೆಂಗಳೂರು ಡಬ್ಬಲ್ ಕಮಿಷನರೇಟ್‌ ವಿಚಾರ ಬಗ್ಗೆ ಪ್ರತಿಕ್ರಿಯಿಸಿರುವ ಗೃಹಸಚಿವರು,  ಈಗಾಗ್ಲೇ ಬೆಂಗಳೂರು ಕಾರ್ಪೋರೇಷನ್ ಅನ್ನು ಐದು ಕಾರ್ಪೋರೇಷನ್ ಆಗಿ ಮಾಡಿದ್ದೇವೆ. ಗ್ರೇಟರ್ ಬೆಂಗಳೂರು ಕಾನ್ಸೆಪ್ಟ್ ನಲ್ಲಿ ಮಾಡಿದ್ದೇವೆ. ಅದರ ಹಿನ್ನೆಲೆಯಲ್ಲಿ ಎರಡು ಪೊಲೀಸ್ ಕಮಿಷನರೇಟ್ ಆಗ್ಬೇಕು ಅಂತ ಚಿಂತನೆ ನಡೆದಿದೆ. ಅದರ ಸಾಧಕ‌ಬಾಧಕಗಳನ್ನು, ಅದಕ್ಕೆ ಬೇಕಾದ ಸಿಬ್ಬಂದಿಗಳನ್ನ, ಖರ್ಚು ವೆಚ್ಚಗಳನ್ನ ಎಲ್ಲಾವನ್ನು ಅಧ್ಯಯನ ಮಾಡುತ್ತಿದ್ದೇವೆ. ಅದು ನಂತರ ಸರ್ಕಾರ ಕ್ಯಾಬಿನೇಟ್ ತೀರ್ಮಾನ ಮಾಡುತ್ತೆ.

ಪೊಲೀಸ್ ನೇಮಕಾತಿ ವಯಸ್ಸು ಹೆಚ್ಚುಗೆ ಮಾಡುತ್ತೇವೆ. ಬೇರೆ ಬೇರೆ ರಾಜ್ಯಗಳ ಮಾಹಿತಿ ತರಿಸಿಕೊಂಡಿದ್ದೇನೆ. ಸಬ್ ಇನ್ಸೆಪೆಕ್ಟರ್ಗಳಿಗೆ ಏನು ಇರಬೇಕು, ಕಾನ್ಸ್ಟೇಬಲ್‌ಗಳಿಗೆ ಏನು ಇರ್ಬೇಕು ಅಂತ ಸದ್ಯದಲ್ಲೇ ತೀರ್ಮಾನ ಮಾಡ್ತೇವೆ. ಪ್ರಸ್ತಾವನೆ ಗೆ ಅನುಮತಿ ಕೊಟ್ಟಿದ್ದೇನೆ. ಅದನ್ನ ಕ್ಯಾಬಿನೆಟ್ ತೆಗೆದುಕೊಂಡು ಹೋಗಿ, ಸಿ ಅಂಡ್ ಆರ್ ರೂಲ್‌ಗಳು ಏನಿದೆ ಅದನ್ನ ಮೂಮೆಂಟ್ ಮಾಡ್ಬೇಕಾಗುತ್ತೆ. ಪ್ರೋಸಸ್ ಮಾಡಿ, ಅದನ್ನ ಅನೌನ್ಸ್ ಮಾಡ್ತೀವಿ ಎಂದು ಗೃಹಸಚಿವರು ಹೇಳಿದ್ದಾರೆ.

ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡ್ರೆ, ರಾಜ್ಯ ಪೊಲೀಸರ ಸಂಬಂಳ‌ ಕಡಿಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ಆ ರೀತಿ ಇಲ್ಲ, ಮೊದ್ಲು ಇತ್ತು ಹಾಗೇ, ನಾನೇ ಹಿಂದೆ ಕಮಿಷನ್ ಮಾಡಿ ಇಡೀ ದೇಶದಲ್ಲಿ ಎಲ್ಲಾ ರಾಜ್ಯಗಳ ಸಂಬಂಳ ಏನ್ ಕೊಡ್ತಾರೆ. ಭತ್ಯೆ ಏನ್ ಕೊಡ್ತಾರೆ, ಅವೆಲ್ಲಾವನ್ನು ತರಿಸಿಕೊಂಡು, ನಾನು ಔರಾದ್ಕರ್ ಅಂತ ನಮ್ಮ‌ ಎಡಿಜಿಪಿ ನೇತೃತ್ವದಲ್ಲಿ ಔರಾದ್ಕರ್ ಕಮಿಷನ್ ಮಾಡಿದ್ವಿ. ಔರಾದ್ಕರ್ ಕಮಿಟಿ‌ ರೆಕಮೆಂಡೇಷನ್ ಕೊಟ್ಟಿದ್ದಾರೆ. ಅನೇಕ ರೆಕಮೆಂಡೇಷನ್ ಗಳನ್ನು ಈಗಾಗ್ಲೇ ಅನುಷ್ಟಾನ ಮಾಡಿದ್ದೇವೆ. ಸಂಬಳ‌ ಹೆಚ್ಚಳ‌ ಮಾಡಿದ್ದೇವೆ. ಮುಂದೆ 7th ಪೇ ಕಮಿಷನ್, 8th ಕಮಿಷನ್ ಆಧಾರದ ಮೇಲೆ ತೀರ್ಮಾನ ಆಗುತ್ತೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

About The Author