Mysuru News: ಇಂದು ಪ್ರಥಮ ಆಷಾಢ ಶುಕ್ರವಾರವಾಗಿದ್ದು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬ್ರಾಹ್ಮಿ ಮುಹೂರ್ತದಿಂದಲೇ, ಭಕ್ತರು ದೇವಿಯ ದರ್ಶನಕ್ಕಾಗಿ ದೇವಸ್ಥಾನಕ್ಕೆ ಆಗಮಿಸಿದ್ದರು. ಇಂದು ದೇವಿ ನಾಗಲಕ್ಷ್ಮೀ ಅಲಂಕಾರದಲ್ಲಿದ್ದಳು. ಇದೇ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ದೇವಿಗೆ ನೀರಿ ನೀಡಿ, ಹರಕೆ ಸಲ್ಲಿಸಿದ್ದಾರೆ.
ಈ ಹಿಂದೆ ಸಿಎಂ ಆಗಲು ಡಿ.ಕೆ.ಶಿವಕುಮಾರ್ ಹಲವು ದೇವರುಗಳನ್ನು ಪೂಜಿಸಿದ್ದರು. ಹೋಮ ಹವನ ಇತ್ಯಾದಿ ಮಾಡಿದ್ದರು. ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಹೀಗೆ ಹಲವು ಧಾರ್ಮಿಕ ಕಾರ್ಯಗಳನ್ನು ಮಾಡಿದ ಬಳಿಕ, ಡಿಸಿಎಂ ಆಗಿದ್ದ ಡಿಕೆಶಿ ಸಿಎಂ ಆದರು.
ಅದೇ ರೀತಿ ಅವರ ಪತ್ನಿ ಉಷಾ ಕೂಡ ಪತಿ ಸಿಎಂ ಆಗಲಿ ಎಂದು ಹರಕೆ ಹೇಳಿದ್ದರು. ಇಂದು ಮೈಸೂರು ಚಾಮುಂಡೇಶ್ವರಿಗೆ ಸೀರೆ ನೀಡಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಆ ಹರಕೆ ತೀರಿಸಿದ್ದಾರೆ. ಅರ್ಚಕರು ಉಷಾ ಶಿವಕುಮಾರ್ ನೀಡಿದ ಸೀರೆಯನ್ನು ದೇವರಿಗೆ ಉಡಿಸಿ, ಪೂಜೆ ಸಲ್ಲಿಸಿದರು.



