ಚಿಕ್ಕಬಳ್ಳಾಪುರದಲ್ಲಿ ಕನ್ನಡಿಗರ ಮನ ಗೆದ್ದಆಂಧ್ರ DCM ಪವನ್ ಕಲ್ಯಾಣ್!

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಭಾಗವಹಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದ ಈ ಕಾರ್ಯಕ್ರಮ ನಡೆದಿದೆ. ಪವನ್ ಕಲ್ಯಾಣ್ ಅವರನ್ನ ನೋಡಲು ಕಿಕ್ಕೇರಿದು ಜನ ತುಂಬಿದ್ರು. ಅವರನ್ನ ಕಣ್ತುಂಬಿ ಕೊಳ್ಳೊಕೆ ಜನ ಓಡೋಡಿ ಬರ್ತಿದ್ರು.

ಆಂಧ್ರ ಡಿಸಿಎಂ ವೇದಿಕೆ ಮೇಲೇರುತ್ತಿದ್ದಂತೆ ಓಜಿ, ಓಜಿ ಘೋಷಣೆ ಮುಗಿಲು ಮುಟ್ಟಿತ್ತು. ಇವು ದೃಶ್ಯಗಳಲ್ಲಿ ಗಮನ ಸೆಳೆದಿವೆ. ಇನ್ನು ವೇದಿಕೆಯಲ್ಲಿ ಪವನ್ ಕಲ್ಯಾಣ್ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಜನರ ಮನ ಗೆದ್ದರು. ಅವರು ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಕುವೆಂಪು ಅವರನ್ನ ನೆನೆದು, ಕನ್ನಡ ಸಂಸ್ಕೃತಿಗೆ ಗೌರವ ಸಲ್ಲಿಸಿದರು.

ಪವನ್ ಕಲ್ಯಾಣ್ ತಮ್ಮ ಭಾಷಣದಲ್ಲಿ, ಗೋಪಾಲಗೌಡರ ಹೋರಾಟ ಹಾಗೂ ಜನಸೇನಾ ಪಕ್ಷದ ಸಿದ್ದಾಂತಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ರಾಜಕೀಯಕ್ಕೆ ಬಂದೆ ಎಂಬುದಕ್ಕೆ ಯುವಜನತೆ, ರೈತರು ಹಾಗೂ ಪರಿಸರದ ಬಗ್ಗೆ ಕಾಳಜಿಯೇ ಕಾರಣ. ನಾನು ಸೋಲುತ್ತಿದ್ದಾಗ ಗೋಪಾಲಗೌಡರು ನನಗೆ ಶಕ್ತಿ ತುಂಬಿದರು ಎಂದು ಹೇಳಿದರು. ಆಂಧ್ರ ಮತ್ತು ಕರ್ನಾಟಕದ ಬಾಂಧವ್ಯವನ್ನು ಪವನ್ ಕಲ್ಯಾಣ್ ಪ್ರಶಂಸಿಸಿದ್ದಾರೆ.

ಎರಡೂ ರಾಜ್ಯಗಳ ನಡುವೆ ಕಲಾ–ಸಂಸ್ಕೃತಿ, ಶಿಕ್ಷಣ ಹಾಗೂ ಪರಿಸರ ಕ್ಷೇತ್ರಗಳಲ್ಲಿ ಉತ್ತಮ ಸಂಬಂಧವಿದೆ ಎಂದರು. ನಾವು ಎಲ್ಲರೂ ಭಾರತ ಮಾತೆಯ ಮಕ್ಕಳು. ಬೇರ್ಪಡದೇ, ಏಕತೆಯಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದ್ದಾರೆ. ಆಂಧ್ರ ಪ್ರದೇಶಕ್ಕೆ ಕರ್ನಾಟಕ ಮೇಲೆ ತುಂಬಾ ಪ್ರೀತಿ ಇದೆ. ಜೈ ಹಿಂದ್, ಜೈ ಕರ್ನಾಟಕ ಮಾತೆ ಎಂಬ ಘೋಷಣೆಯೊಂದಿಗೆ ಭಾಷಣ ಮುಗಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author