Dharwad News: ಧಾರವಾಡ: ಕೆಲ ದಿನಗಳ ಹಿಂದೆ ಧಾರವಾಡದ ಯುವ ಕಾಂಗ್ರೆಸ್ ಮುಖಂಡ ಫೈರೋಜ್ ಪಠಾಣ್ ಹತ್ಯೆ ನಡೆದಿತ್ತು. ಇಂದು ಫೈರೋಜ್ ಮನೆಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಭೇಟಿ ನೀಡಿ, ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಮಂಜುನಾಥ ಗೌಡಗೆ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಕೂಡಾ ಸಾಥ್ ನೀಡಿದ್ದಾರೆ.
ಇದೇ ವೇಳೆ ಫೈರೋಜ್ ಮನೆಯವರು ಹಂತಕರಿಗೆ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ. ಬಳಿಕ ಮಾಧ್ಯಮದವರ ಜತೆ ಮಾತನಾಡಿರುವ ಮಂಜುನಾಥ್ ಗೌಡ, ಇಂತಹ ಕೊಲೆಯನ್ನ ನಾವು ಸಹಿಸೋದಿಲ್ಲ. ಪೈರೋಜ್ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ಪರಿಹಾರವೂ ಕೊಡಿಸುತ್ತೇವೆ. ಅವರ ಕುಟುಂಬದ ಜೊತೆಗೆ ಸದಾ ಇರುತ್ತೇವೆ. ಪೊಲೀಸ್ ತನಿಖೆ ಸರಿಯಾದ ರೀತಿಯಲ್ಲಿ ನಡೆಸುವಂತೆ ಒತ್ತಾಯಿಸುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಮುಖಂಡರೇ ಇದ್ದರೂ ಅವರ ಮೇಲೆ ಕ್ರಮ ಕೈಗ`ಳ್ಳಲಾಗತ್ತೆ. ಜೊತೆಗೆ ಇದ್ದವರೇ ಕೊಲೆ ಮಾಡೋದು ಸರಿಯಲ್ಲ. ಕೊಲೆಯಾದ ದಿನವೇ ಕೆಲವರ ಮೇಲೆ ಕ್ರಮ ಆಗಿದೆ. ಈ ರೀತಿಯಲ್ಲಿ ಪಕ್ಷದಲ್ಲಿನ ಬೆಳವಣಿಗೆ ಬೇಸರ ತಂದಿದೆ. ತಾವೂ ಬೆಳೆಯೋದಕ್ಕೆ ಇನ್ನೊಬ್ಬರ ಕೊಲೆ ಸರಿಯಲ್ಲ. ಸರಿಯಾದ ರೀತಿಯಲ್ಲಿ ಪೊಲೀಸರು ತನಿಖೆ ಮಾಡ್ತಾರೆ. ನಮ್ಮ ಪಕ್ಷದವರೇ ಇದ್ದರೂ ಅವರ ಮೇಲೆ ಕ್ರಮ ಕೈಗ“ಂಡು, ಅವರ ಕುಟುಂಬದ ಜೊತೆಗೆ ಇದ್ದು ಪೈರೋಜ್ ಸ್ಥಾನ ತುಂಬುತ್ತೇವೆ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.




