Tuesday, October 14, 2025

Latest Posts

ಅಯ್ಯಯೋ ಬೆಳಗ್ಗೆ ಹೆಂಡ್ತಿ : ಕತ್ತಲಾದ್ರೆ ಕಚ್ಚೋ ಹಾವು!

- Advertisement -

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದ ವಿಚಿತ್ರ ಘಟನೆ ಅಧಿಕಾರಿಗಳನ್ನು ಅಚ್ಚರಿಗೊಳಿಸಿದೆ. ಸಾಮಾನ್ಯವಾಗಿ ಈ ಜಿಲ್ಲೆಯಲ್ಲಿ ಸಮಾಧಾನ್‌ ದಿವಸ್‌ ಕಾರ್ಯಕ್ರಮದ ವೇಳೆ ನಿವಾಸಿಗಳು ವಿದ್ಯುತ್, ರಸ್ತೆ ಹಾಗೂ ಪಡಿತರ ಚೀಟಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಆದರೆ ಮಹಮೂದಾಬಾದ್‌ ಪ್ರದೇಶದ ಲೋಧ್ಸಾ ಗ್ರಾಮದ ನಿವಾಸಿ ಮೆರಾಜ್‌ ಈ ಬಾರಿ ವಿಚಿತ್ರ ಕೌಟುಂಬಿಕ ವಿಷಯವನ್ನು ಮನಗಂಡಿದ್ದಾರೆ.

ಮೆರಾಜ್‌ ಅಧಿಕಾರಿಗಳಿಗೆ ಹೇಳಿದಂತೆ, ಅವರ ಪತ್ನಿ ನಸೀಮುನ್‌ ರಾತ್ರಿಯಲ್ಲಿ ಹಾವು ಹೋಲಿಸುತ್ತಾಳೆ ಮತ್ತು ಅವನನ್ನು ಕಚ್ಚಲು ಓಡಾಡಿಸುತ್ತಾಳೆ. ಮೆರಾಜ್‌ ಒಮ್ಮೆ ಅಥವಾ ಎರಡು ಬಾರಿ ಅಲ್ಲ, ಬಹಳ ಬಾರಿ ತನ್ನ ಪ್ರಾಣಕ್ಕೆ ಹಾನಿ ತರುವ ರೀತಿಯಲ್ಲಿ ತನ್ನನ್ನು ತೊಡಗಿಸಿರುವುದಾಗಿ ಆರೋಪಿಸಿದ್ದಾರೆ. ನಾನು ಮಲಗಿರುವಾಗ ಯಾವುದೇ ಸಮಯದಲ್ಲಿ ನನ್ನನ್ನು ಕೊಲ್ಲಬಹುದು ಎಂದು ಆತ ಹೇಳಿದ್ದಾರೆ.

ಈ ವಿಚಿತ್ರ ವಿಷಯ ಕೇಳಿ ಅಧಿಕಾರಿಗಳು ಆಘಾತಗೊಂಡಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬಳಕೆದಾರರು ವಿವಿಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಪತ್ನಿ ನಾಗಮಣಿ ಇಟ್ಟಿರಬೇಕು ಎಂದು ಕಾಮೆಂಟ್ ಮಾಡಿದ್ದು, ಕೆಲವರು ಮೆರಾಜ್ ಕೂಡ ಹಾವು ಆಗಿ ಎಂದು ಉತ್ತರ ನೀಡಿದ್ದಾರೆ.

ಜಿಲ್ಲಾಧಿಕಾರಿಗಳು ತಕ್ಷಣ ತನಿಖೆಗೆ ಆದೇಶ ನೀಡಿ, ಉಪವಿಭಾಗಾಧಿಕಾರಿ ಮತ್ತು ಪೊಲೀಸರಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಮಾನಸಿಕ ಕಿರುಕುಳದ ಸಂಭವ್ಯ ಪ್ರಕರಣವೆಂದು ಪರಿಗಣಿಸಿ ವಿಚಾರಣೆ ಆರಂಭಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss