- Advertisement -
Tumakuru: ತುಮಕೂರು: ತುಮಕೂರಿನ ಮರ್ಕೋನಹಳ್ಳಿ ಡ್ಯಾಂನಲ್ಲಿ 6 ಮಂದಿ ಜಲಸಮಾಧಿಯಾಗಿದ್ದಾರೆ. ತುಮಕೂರು ನಗರದ ಬಿಜಿ ಪಾಳ್ಯ ಮೂಲದ 6 ಜನ ಮೃತರಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನು ನಾಲ್ವರ ಮೃತದೇಹವನ್ನು ಹುಡುಕಲಾಗುತ್ತಿದೆ.
ಸಾಜಿಯಾ, ಅರ್ಬಿನ್ ಮೃತದೇಹಗಳು ಪತ್ತೆಯಾಗಿದ್ದು, ತಬಾಸುಮ್(45), ಶಬಾನ(44),ಮಿಫ್ರಾ(4),ಮಹಿಬ್(1) ಕಣ್ಮರೆಯಾಗಿದ್ದಾರೆ. ಇವರ ಜೊತೆಗಿದ್ದ ನವಾಜ್ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.
ಇವರೆಲ್ಲ ಕುಣಿಗಲ್ ತಾಲ್ಲೂಕಿನ ಮಾಗಡಿಪಾಳ್ಯ ಗ್ರಾಮಕ್ಕೆ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಹಾಗಾಗಿ ತಿರುಗಾಡಲೆಂದು ಮರ್ಕೋನಹಳ್ಳಿ ಜಲಾಶಯದ ಹಿನ್ನೀರಿನ ಕಾಲುವೆಗೆ ಬಂದಿದ್ದರು. ಈ ವೇಳೆ ರಭಸವಾಗಿ ಹರಿಯುತ್ತಿದ್ದ ನೀರಿಗೆ ಇಳಿದಿದ್ದರು. ಈ ವೇಳೆ ದುರಂತ ಸಂಭವಿಸಿ, ಓರ್ವ ಬದುಕಿದ್ದು ಎಲ್ಲರೂ ಕೊಚ್ಚಿ ಹೋಗಿದ್ದಾರೆ.
- Advertisement -