ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಸೆಪ್ಟೆಂಬರ್ 25 ರಂದು ಭಯಾನಕ ಘಟನೆ ನಡೆದಿದೆ. 5,588 ಮೀಟರ್ ಎತ್ತರದ ನಾಮಾ ಶಿಖರವನ್ನು ಹತ್ತುವಾಗ ಹಾಂಗ್ ಎಂಬ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಸೆಲ್ಫಿ ತೆಗೆಯಲು ಹೋಗಿ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಅದರ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದು ಚೀನಾದ ಪರ್ವತ ಪ್ರೇಮಿಗಳಿಗೆ ಖ್ಯಾತಿ ಪಡೆದಿದ್ದು, ಅದನ್ನು ಹತ್ತಲು ಕೆಲವು ತಿಂಗಳು ಅಥವಾ ವಾರಗಳ ಕಾಲ ತಯಾರಿ ಅಗತ್ಯವಿದೆ. ಈ ಪ್ರದೇಶದಲ್ಲಿ ಬದಲಾಗುವ ಹವಾಮಾನ ಮತ್ತು ಭಾರಿ ಹಿಮ ಅಪಾಯದಲ್ಲಿ ಇಡಬಹುದು. ಈ ಶಿಖರದವನ್ನ ಹತ್ತೋಕೆ ಅನುಮತಿ ಪಡೆಯುವುದು ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುವುದು ಅತ್ಯವಶ್ಯಕ.
ಹಾಂಗ್ ಮತ್ತು ಅವರ ಗುಂಪು ಅಧಿಕಾರಿಗಳಿಗೆ ನಾಮಾ ಶಿಖರ ಏರುವ ಯೋಜನೆಯ ಬಗ್ಗೆ ಮುಂಚಿತವಾಗಿ ತಿಳಿಸಿರಲಿಲ್ಲ. ಇದರಿಂದಾಗಿ ಘಟನೆಯ ಪರಿಣಾಮವಾಗಿ ಸುರಕ್ಷತಾ ಕ್ರಮಗಳು ಸರಿಯಾಗಿ ಅನುಸರಿಸಲ್ಪಟ್ಟಿರಲಿಲ್ಲ ಎಂದು ವರದಿಯಾಗಿದೆ. ನಾಮಾ ಶಿಖರವನ್ನ ಹತ್ತುವಿಕೆ ಸವಾಲಿನ ವಿಷಯವಾಗಿದ್ದು, ಈ ರೀತಿಯ ಪರ್ವತಾರೋಹಣಕ್ಕೆ ಸೂಕ್ತ ಅನುಮತಿ ಮತ್ತು ತಯಾರಿ ಅತ್ಯಂತ ಮುಖ್ಯ.
ಹಿಮಶಿಖರಗಳ ಆರೋಹಣದ ವೇಳೆ ಜಾಗೃತಿ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ದುಃಖಕರ ಘಟನೆಯು ನಮಗೆ ಪರ್ವತಾರೋಹಣ ಮತ್ತು ಪ್ರವಾಸಗಳಲ್ಲಿ ಜಾಗೃತಿ ಮತ್ತು ಸುರಕ್ಷತಾ ಕ್ರಮಗಳ ಅವಶ್ಯಕತೆಯನ್ನು ಒತ್ತಿ ತೋರಿಸಿದೆ. ಸೆಲ್ಫಿ ಅಥವಾ ಫೋಟೋಗಳು ಜೀವನಕ್ಕಿಂತ ದೊಡ್ಡದಾಗಬಾರದು ಎಂದು ಈ ಘಟನೆ ಸ್ಪಷ್ಟಪಡಿಸಿದೆ.
ವರದಿ : ಲಾವಣ್ಯ ಅನಿಗೋಳ

