Tuesday, October 14, 2025

Latest Posts

ವಿಐಪಿಗಳಿಗೆ ಬಳಕೆಯಾಗಬೇಕಿದ್ದ ಸರ್ಕಾರಿ ವಾಹನ ಪತಿಯ ಕೆಲಸಕ್ಕೆ ಬಳಕೆ: ಜಿಲ್ಲಾಧಿಕಾರಿ ಶುಭ ವಿರುದ್ಧ ಚಾಲಕನ ಆರೋಪ

- Advertisement -

Tumakuru News: ಜಿಲ್ಲೆಯ ವಿಐಪಿಗಳಿಗೆ ಬಳಕೆಯಾಗಬೇಕಿದ್ದ ಸರ್ಕಾರಿ ವಾಹನವನ್ನ ತಮ್ಮ ಪತಿ ಕೆಲಸಕ್ಕೆ ಹೋಗಿ ಬರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬಳಸಿದ್ದಾರೆ ಎಂದು ಕಾರು ಚಾಲಕ ಹರೀಶ್ ಆರೋಪ ಮಾಡಿದರು.

ಅವರು ತುಮಕೂರು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರ ಆರ್ ಟಿ ಐ ಕಾರ್ಯಕರ್ತರ ಗಮನಕ್ಕೆ ಬಂದಾಗ ನಿಯಮಾನುಸಾರ ಲಾಗ್ ಬುಕ್ ಕೇಳಿದ್ದಾರೆ. ಹೀಗಾಗಿ ನಾನೇ ಹೇಳಿದ್ದೇನೆ ಎಂದು ಅವರು ಕಳೆದ 9 ತಿಂಗಳಿನಿಂದ ನನಗೆ ವೇತನ ಕೊಡದೆ ತಡೆ ಹಿಡಿಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೀಗ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ನನ್ನನ್ನ ಕೆಲಸಕ್ಕೆ ಬರಬೇಡ ಎಂದು ಹೇಳುತ್ತಿದ್ದಾರೆ. ನನ್ನ ತಂದೆ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಔಷಧೋಪಚಾರಕ್ಕೆ ಹಣದ ಅವಶ್ಯಕತೆ ಇದೆ ಆದರೆ 9 ತಿಂಗಳಿನಿಂದ ನನಗೆ ಸಂಬಳವೂ ಕೊಡದೆ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಆರೋಪಿಸಿದರು.

- Advertisement -

Latest Posts

Don't Miss