Tuesday, October 14, 2025

Latest Posts

Spiritual: ವಿಷ್ಣು ಪುರಾಣದಲ್ಲಿ ಕಲಿಯುಗದ ಜನರ ಬಗ್ಗೆ ಆಗಲೇ ಈ ಸಿಕ್ರೇಟ್‌ ಹೇಳಲಾಗಿದೆ.

- Advertisement -

Spiritual: ವಿಷ್ಣು ಪುರಾಣದಲ್ಲಿ ಕಲಿಯುಗದಲ್ಲಿ ಮನುಷ್ಯ ಹೇಗಿರುತ್ತಾನೆ ಅಂತಾ ಹೇಳಲಾಗಿದೆ. ಆ ಕಾಲದಲ್ಲೇ ನಮ್ಮ ಜ್ಞಾನಿಗಳು, ಕಲಿಯುಗದ ಜನರು ಹೇಗಿರುತ್ತಾರೆ ಅಂತಾ ಹೇಳಿದ್ದಾರೆ. ಹಾಗಾದ್ರೆ ಅವರು ಹೇಳಿದ್ದೆಲ್ಲ ನಿಜ ಆಗಿದೆಯಾ..? ಅವರು ಹೇಳಿದ್ದಾದರೂ ಏನು ಅಂತಾ ತಿಳಿಯೋಣ ಬನ್ನಿ.

ಹಣಕ್ಕೆ ಹೆಚ್ಚಿನ ಬೆಲೆ: ಕಲಿಯುಗದಲ್ಲಿ ಹಣಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಆಗಲೇ ವಿಷ್ಣು ಪುರಾಣದಲ್ಲಿ ಹೇಳಲಾಗಿತ್ತು. ಇದೀಗ ಕಲಿಯುಗದಲ್ಲಿ ಆ ಮಾತು ಸತ್ಯವಾಗುತ್ತಿದೆ. ಹಣಕ್ಕಿರುವ ಬೆಲೆ, ಮನುಷ್ಯತ್ವ, ಗುಣಕ್ಕಿಲ್ಲ.

ಹಣ ಗಳಿಸುವುದೇ ಮನುಷ್ಯನ ಮುಖ್ಯ ಧ್ಯೇಯ: ಹಣ ಮಾಡಬೇಕು, ಐಷಾರಾಮಿ ಬದುಕು ಬದುಕಬೇಕು. ಪ್ರಪಂಚ ಸುತ್ತಬೇಕು ಇತ್ಯಾದಿ ವಿಷಯಗಳೇ ಇಂದಿನ ಜನರ ಧ್ಯೇಯವಾಗಿದೆ. ಇದಕ್ಕೆಲ್ಲ ಕಾರಣ ತೋರಿಕೆಯ ಜೀವನ. ಇದನ್ನು ಕೂಡ ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.

ಆಡಳಿತಕ್ಕಿಂತ ಆಡಳಿತಗಾರನ ಶ್ರೀಮಂತಿಕೆಗೆ ಬೆಲೆ: ಬಡವ ಚುನಾವಣೆಗೆ ನಿಲ್ಲುತ್ತಾನೆ. ಉತ್ತಮ ಆಡಳಿತ ನೀಡುತ್ತಾನೆ ಎಂದರೆ, ಅವನನ್ನು ಯಾರೂ ಆಯ್ಕೆ ಮಾಡುವುದಿಲ್ಲ. ಅದೇ ಶ್ರೀಮಂತ ವ್ಯಕ್ತಿಗೆ ಅದೆಷ್ಟು ಬೇಗ ಟಿಕೇಟ್ ಸಿಗುತ್ತದೆ. ಏಕೆಂದರೆ, ಆಡಳಿತ ಮಾಡುವವನ ಗುಣಕ್ಕಿಂತ ಅವನ ಬಳಿ ಇರುವ ಹಣಕ್ಕೆ ಹೆಚ್ಚು ಬೆಲೆ.

ಹಣದಿಂದ ಅಹಂಕಾರ: ಯಾರ ಬಳಿ ಹಣ ಇರುತ್ತದೆಯೋ ಅವರಿಗೆ ಅಹಂಕಾರವೂ ಹೆಚ್ಚಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಎಲ್ಲರೂ ಹಾಗಿರಲು ಸಾಧ್ಯವಿಲ್ಲ ಅನ್ನೋದನ್ನೂ ನಂಬಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಜನರ ಜೇಬು ಸ್ವಲ್ಪ ತುಂಬಿದರೂ, ಮನಸ್ಸಿನಲ್ಲೇ ತಾನೇ ರಾಜನೆಂಬ ಭಾವನೆ ಬರುತ್ತಿರುವುದಂತೂ ಸತ್ಯ.

- Advertisement -

Latest Posts

Don't Miss