Sandalwood News: ಸ್ಯಾಂಡಲ್‌್ವುಡ್‌ನ ನಿರ್ದೇಶಕರಲ್ಲಿ ದಯಾಳ್ ಪದಮ್‌ನಾಭನ್ ಕೂಡ ಪ್ರಸಿದ್ಧರು. ಬಿಗ್‌ಬಾಸ್‌ಗೆ ಬಂದ ಬಳಿಕ ಇವರ ಪ್ರಸಿದ್ಧತೆ ಇನ್ನಷ್ಟು ಹೆಚ್ಚಿತ್ತು. ಕನ್ನಡದಲ್ಲಿ ನಿರ್ದೇಶಕರಾಗಿ ಹೆಸರು ಗಳಿಸಿರುವ ದಯಾಳ್ ತಮಿಳುನಾಡಿನವರು. ಹಾಗಾದ್ರೆ ದಯಾಳ್ ಎಲ್ಲಿ ಜನಿಸಿದ್ದು, ಅವರು ಓದು ಬರಹವೆಲ್ಲ ಎಲ್ಲಿ ಆಗಿದ್ದು..? ಈ ಕುತೂಹಲಕಾರಿ ಮಾಹಿತಿ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ.
ದಯಾಳ್ ತಮಿಳುನಾಡಿನ ವಿಳ್ಳುಪುರಂನಲ್ಲಿ ಜನಿಸಿದ್ದು, ಅಲ್ಲೇ ಅವರ ವಿದ್ಯಾಭ್ಯಾಸವೂ ಆಗಿದ್ದು. ಬಳಿಕ ಚಿದಂಬರಂನ ವಿಶ್ವವಿದ್ಯಾಲಯದಲ್ಲಿ ಪಾಲಿಟೆಕ್ನಿಕ್ ಮಾಡಿದ್ದು. ಬಳಿಕ ಸೆಂಟ್ರಲ್ ಗೌವರ್ನ್‌ಮೆಂಟ್‌ನ ಪರ್ಮ್ನೆಂಟ್ ಎಂಪ್ಲಾಯ್ ಆಗಿ ದಯಾಳ್ ಅವರಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತ್ತು. 2003ರ ತನಕ ದಯಾಳ್ ಈ ಕೆಲಸವನ್ನು ಮಾಡಿದ್ದರು.
ಬಳಿಕ ಸಿನಿಮಾ ರಂಗಕ್ಕೆ ಬರಲು ಮಾದರಿಯಾದವರು ಕರ್ನಾಟಕದವರೇ ಆಗಿದ್ದ ತಮಿಳು ನಟ ಮುರುಳಿ ಅವರು. ಮುರುಳಿ ಅವರ ರೀತಿ ಹೇರ್ ಸ್ಟೈಲ್ ಮಾಡೋದು, ಅವರ ನಟನೆಯ ರೀತಿ ನೀತಿ ಫಾಲೋ ಮಾಡೋದು ಈ ಎಲ್ಲವನ್ನೂ ದಯಾಳ್ ಮಾಡುತ್ತಿದ್ದರು.
ಸ್ಯಾಂಡ್ಲ್‌ವುಡ್‌ದಗೆ ದಯಾಳ್ ಹೀರೋ ಆಗಲು ಎಂಟ್ರಿ ನೀಡಿದ್ದರು. ಆದರೆ ಬರವಣಿಗೆ ದಯಾಳ್ ಕೈ ಹಿಡಿಯಿತು. ಹೀಗೆ ಹಲವರ ಬಳಿ ಕೆಲಸ ಮಾಡಿ, ಇದೀಗ ದಯಾಳ್ ಓರ್ವ ಪ್ರಸಿದ್ಧ ನಿರ್ದೇಶಕರೆನ್ನಿಸಿಕ“ಂಡಿದ್ದಾರೆ. ಅವರ ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.