Monday, November 17, 2025

Latest Posts

ಗೃಹಲಕ್ಷ್ಮೀಯರಿಗೆ ದೀಪಾವಳಿ ಹಬ್ಬಕ್ಕೆ ₹6000

- Advertisement -

ರಾಜ್ಯದ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಕಾಂಗ್ರೆಸ್‌ ಸರ್ಕಾರ ಭರ್ಜರಿ ಗಿಫ್ಟ್‌ ಕೊಟ್ಟಿದೆ. ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡ್ತಿದ್ದ ಸರ್ಕಾರ, ಈ ಬಾರಿ 3 ತಿಂಗಳು ಒಟ್ಟಿಗೆ ಸೇರಿಸಿ 6 ಸಾವಿರ ರೂಪಾಯಿ ರಿಲೀಸ್‌ ಮಾಡಲಿದೆಯಂತೆ.

ಕಳೆದ ಕೆಲ ತಿಂಗಳಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ ಅಂತಾ, ಫಲಾನುಭವಿಗಳು ಆಕ್ರೋಶ ಹೊರಹಾಕ್ತಿದ್ರು. ಈಗ ಎಲ್ಲರ ಕೋಪ ತಣ್ಣಗಾಗಿಸಲು, ಗೃಹಲಕ್ಷ್ಮೀಯರ ಅಕೌಂಟ್‌ಗೆ ಒಂದೇ ಬಾರಿಗೆ 6 ಸಾವಿರ ರೂಪಾಯಿ ಜಮೆ ಆಗಲಿದೆಯಂತೆ.

ಈ ಬಗ್ಗೆ ಗೃಹಲಕ್ಷ್ಮೀ ಯೋಜನೆ ಹಣ ವಿಳಂಬಕ್ಕೆ ಸಂಬಂಧಿಸಿದಂತೆ ಮಾತನಾಡಿರುವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ದೀಪಾವಳಿ ಹಬ್ಬಕ್ಕೆ ಮಹಿಳೆಯರ ಖಾತೆಗೆ ₹6,000 ಹಣ ಜಮಾ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕೆಲವು ತಾಂತ್ರಿಕ ದೋಷದಿಂದಾಗಿ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಂದಾಯ ವಿಳಂಬವಾಗಿತ್ತು. ಇದೀಗ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮೂರು ತಿಂಗಳು ಸೇರಿಸಿ, ಮಹಿಳೆಯರ ಖಾತೆಗೆ ಒಟ್ಟಿಗೆ ₹6,000 ಗೃಹಲಕ್ಷ್ಮಿ ಹಣ ಹಾಕಲಾಗುವುದು. ದೀಪಾವಳಿ ಹಬ್ಬ ಮುಗಿಯುವುದರೊಳಗೆ ಮಹಿಳೆಯಾರ ಖಾತೆಗೆ ಹಣ ಸೇರಲಿದೆ ಎಂದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

- Advertisement -

Latest Posts

Don't Miss