Tuesday, October 14, 2025

Latest Posts

ಅಬ್ಬಾ… ಗಗನಕ್ಕೇರಿದ ಚಿನ್ನ : ಗೋಲ್ಡ್‌ ಪ್ರಿಯರಿಗೆ ಶಾಕ್!

- Advertisement -

ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ ದಾಖಲಾಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 300 ರೂ. ಹೆಚ್ಚಾಗಿ 11,795 ರೂ. ಆಗಿದ್ದು, 24 ಕ್ಯಾರಟ್ 1 ಗ್ರಾಂ ಚಿನ್ನದ ದರವು 328 ರೂ. ಏರಿಕೆ ಕಂಡು 12,868 ರೂ. ತಲುಪಿದೆ. 22 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 94,360 ರೂ. ಆಗಿದ್ದರೆ, 10 ಗ್ರಾಂಗೆ 1,17,950 ರೂ. ಮತ್ತು 100 ಗ್ರಾಂಗೆ 11,79,500 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್ 8 ಗ್ರಾಂ ಚಿನ್ನಕ್ಕೆ 1,02,944 ರೂ., 10 ಗ್ರಾಂಗೆ 1,28,680 ರೂ. ಹಾಗೂ 100 ಗ್ರಾಂಗೆ 12,86,800 ರೂ. ಇದೆ.

ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿಯೂ ಏರಿಕೆ ಕಂಡುಬಂದಿದೆ. ಪ್ರತಿ ಗ್ರಾಂಗೆ 189 ರೂ., 8 ಗ್ರಾಂಗೆ 1,512 ರೂ., 10 ಗ್ರಾಂಗೆ 1,890 ರೂ. ಹಾಗೂ 1 ಕೆ.ಜಿಗೆ 1,89,000 ರೂ. ನಿಗದಿಯಾಗಿದೆ. ಶತಮಾನಗಳಿಂದ ಚಿನ್ನವು ಭಾರತದ ಸಂಸ್ಕೃತಿ ಮತ್ತು ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇದು ಆಭರಣವಾಗಿಯೂ, ಹೂಡಿಕೆಯ ಸಾಧನವಾಗಿಯೂ ಬಳಸಲಾಗುತ್ತದೆ. ಭಾರತದಲ್ಲಿ ಚಿನ್ನದ ದರ ಪ್ರತಿದಿನವೂ ಏರಿಳಿತ ಕಾಣುವುದು ಸಾಮಾನ್ಯ. ಇದಕ್ಕೆ ಹಲವು ಅಂಶಗಳು ಕಾರಣವಾಗುತ್ತವೆ.

ಜಾಗತಿಕ ಚಿನ್ನದ ಮಾರುಕಟ್ಟೆಯ ಬದಲಾವಣೆಗಳು ಭಾರತದಲ್ಲಿನ ಚಿನ್ನದ ದರವನ್ನು ನೇರವಾಗಿ ಪ್ರಭಾವಿಸುತ್ತವೆ. ಭೌಗೋಳಿಕ ರಾಜಕೀಯ ಘಟನೆಗಳು, ಆರ್ಥಿಕ ಪರಿಸ್ಥಿತಿಗಳು ಮತ್ತು ಕರೆನ್ಸಿ ಏರಿಳಿತಗಳು ಚಿನ್ನದ ಬೆಲೆ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾದಾಗ ಹೂಡಿಕೆದಾರರು ಚಿನ್ನದತ್ತ ಮುಖ ಮಾಡುವುದರಿಂದ ಬೆಲೆ ಏರಿಕೆಯಾಗುತ್ತದೆ.

ಇದಲ್ಲದೆ, ಭಾರತದಲ್ಲಿ ಚಿನ್ನವು ಸಂಸ್ಕೃತಿಯ ಸಂಕೇತವಾಗಿರುವುದರಿಂದ ಹಬ್ಬ-ಹರಿದಿನಗಳು ಮತ್ತು ಮದುವೆ ಋತುವಿನಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ದರ ಏರಿಳಿತಗಳು ಕಂಡುಬರುತ್ತವೆ. ಪೂರೈಕೆಯಲ್ಲಿನ ವ್ಯತ್ಯಯಗಳು, ಆಮದು ಸುಂಕದ ಬದಲಾವಣೆಗಳು ಮತ್ತು ಸರ್ಕಾರದ ನೀತಿಗಳು ಸಹ ಚಿನ್ನದ ದರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ.

ಚಿನ್ನದ ಬೆಲೆ ಯುಎಸ್ ಡಾಲರ್‌ನಲ್ಲಿ ನಿಗದಿಯಾಗುವುದರಿಂದ ಭಾರತೀಯ ರೂಪಾಯಿ ಮತ್ತು ಡಾಲರ್ ವಿನಿಮಯ ದರದ ಬದಲಾವಣೆಗಳು ಸಹ ಪ್ರಮುಖ ಪಾತ್ರವಹಿಸುತ್ತವೆ. ರೂಪಾಯಿ ಮೌಲ್ಯ ಕುಸಿದಾಗ ಭಾರತದಲ್ಲಿ ಚಿನ್ನದ ಬೆಲೆ ಏರಿಕೆ ಕಾಣುತ್ತದೆ. ಜೊತೆಗೆ ಹೂಡಿಕೆದಾರರ ಚಟುವಟಿಕೆ, ವ್ಯಾಪಾರ ಪ್ರಮಾಣಗಳು ಮತ್ತು ಇತರ ಹಣಕಾಸು ಮಾರುಕಟ್ಟೆಯ ಪ್ರವೃತ್ತಿಗಳು ಸಹ ಚಿನ್ನದ ಬೆಲೆಯನ್ನು ನಿರ್ಧರಿಸುವ ಅಂಶಗಳಾಗಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss