ರಾಜಕೀಯಕ್ಕೆ ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹವಾಲ್ ರಾಜಕೀಯಕಿಯಕ್ಕೆ ಎಂಟ್ರಿ ಕೊಡಲಿದ್ದಾರೆ ಅಂತ ಸುದ್ದಿ ಹರಿದಾಡುತ್ತಿದೆ. ಈ ಎಲ್ಲ ಊಹಾಪೋಹಗಳಿಗೆ ಅವರೇ ಉತ್ತರ ಕೊಟ್ಟಿದ್ದಾರೆ. ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹವಾಲ್ ಮಾತನಾಡಿದ್ದಾರೆ. ಅವರು ರಾಜಕೀಯಕ್ಕೆ ಈಗ ತಕ್ಷಣ ಪ್ರವೇಶಿಸುವೆ ಎನ್ನುವ ಸೂಚನೆ ನೀಡಿಲ್ಲ.
ಪ್ರಧಾನಿ ನರೇಂದ್ರ ಮೋದಿ ನನ್ನ ನೆಚ್ಚಿನ ನಾಯಕ. ನಾನು ರಾಜಕೀಯದಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ. ಯಾವತ್ತಾದರೂ ಆಸಕ್ತಿ ಬಂದರೆ ನೋಡೋಣ ಎಂದಿದ್ದಾರೆ. ನಾನು ನರೇಂದ್ರ ಮೋದಿಯವರ ಚಿಂತನೆ ತುಂಬಾ ಇಷ್ಟಪಡುತ್ತೇನೆ. ಕೆಲವೊಮ್ಮೆ ಅವರ ಕಾರ್ಯಕ್ರಮಗಳಿಗೆ ಹೋಗಿ ಬೆಂಬಲಿಸುತ್ತೇನೆ. ರಾಜಕೀಯ ಸುಲಭ ಎಂದು ಯೋಚಿಸುವುದಾಗಿಲ್ಲ, ಆದರೆ ನಿಜವಾದ ದೃಷ್ಟಿಯಲ್ಲಿ ಅದು ತುಂಬಾ ಸವಾಲಿನ ಸಂಗತಿ.
ಸೈನಾ ತಮ್ಮ ಬ್ಯಾಡ್ಮಿಂಟನ್ ಜೀವನದ ಬಗ್ಗೆ ಹೃತ್ಪೂರ್ವಕವಾಗಿ ಹೇಳಿದ್ದಾರೆ. ಕಳೆದ 25 ವರ್ಷಗಳಿಂದ ನಾನು ಮನೆ, ಸ್ನೇಹಿತರು, ಆಹಾರ ಎಲ್ಲವನ್ನು ಬಿಟ್ಟು ಕ್ರೀಡಾ ಕ್ಷೇತ್ರದಲ್ಲಿ ತ್ಯಾಗ ಮಾಡಿದ್ದೇನೆ. ತುಂಬಾ ಒತ್ತಡದ ಜೀವನ ನಡೆಸಿದ್ದೇನೆ. ದೈಹಿಕ ಕ್ಷಮತೆಯ ಕಾರಣದಿಂದ ನಾನು ಬ್ಯಾಡ್ಮಿಂಟನ್ ತೊರೆದಿದ್ದೇನೆ. ಆಟವಾಡಲು ಆಸಕ್ತಿ ಇದ್ದರೂ ದೇಹ ಸ್ಪಂದಿಸುವುದಿಲ್ಲ. ಈ ಕಾರಣಕ್ಕೆ ನಾನು ವೃತ್ತಿಪರ ಆಟಗಾರ್ತಿಯಾಗಿ ಚಟುವಟಿಕೆಯಿಂದ ಹೊರ ಬಂದಿದ್ದೇನೆ.
ಕೋಚಿಂಗ್ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ನನಗೆ ಕೋಚಿಂಗ್ ನೀಡುವ ಆಸಕ್ತಿ ಇಲ್ಲ. ಹೈದರಾಬಾದ್‌ನಲ್ಲಿ ಅತ್ಯುತ್ತಮ ಬ್ಯಾಡ್ಮಿಂಟನ್ ಅಕಾಡೆಮಿ ಇದೆ. ಕೋಚಿಂಗ್ ತುಂಬಾ ಕಷ್ಟದ ಕೆಲಸ. ಆಟವಾಡುವುದಕ್ಕಿಂತಲೂ ಹೆಚ್ಚು ಪರಿಶ್ರಮ ಬೇಕು. ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡುವುದರಲ್ಲಿ ನನಗೆ ಸಂತೋಷ.
ಬ್ಯಾಡ್ಮಿಂಟನ್ ಮಾತ್ರವಲ್ಲದೆ ಎಲ್ಲ ಬಗೆಯ ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣ ಬಿಟ್ಟು ಮೈದಾನದಲ್ಲಿ ಭಾಗವಹಿಸಬೇಕು. ಸೈನಾ ತಮ್ಮ ಅಭಿಪ್ರಾಯದಲ್ಲಿ ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸವನ್ನು ಮುಂದುವರೆಸುವುದರ ಮೇಲೆ ಹೆಚ್ಚು ಗಮನ ನೀಡುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ