- Advertisement -
ತ್ರಿವಿಧ ದಾಸೋಹಿ ಖ್ಯಾತಿಯ ಕೊಪ್ಪಳ ಗವಿಮಠದ ಅಭಿನವ ಗವಿಸಿದೇಶ್ವರ ಮಹಾ ಸ್ವಾಮಿಗಳು, ಮಹಾ ಮೌನ ಅನುಷ್ಠಾನ ಕೈಗೊಂಡಿದ್ದಾರೆ. ವಾರದ 6 ದಿನ ಮೌನವ್ರತ ಮಾಡ್ತಿದ್ದು, ಪ್ರತಿ ಸೋಮವಾರ ಮಾತ್ರ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ಪ್ರಾರಂಭ ಆಗಿದ್ದು, ಶ್ರೀಗಳ ಮೌನಕ್ಕೆ ಕಾರಣ ಎನ್ನಲಾಗುತ್ತಿದೆ.
ಬಿಎಸ್‌ಪಿಎಲ್ ಕಾರ್ಖಾನೆಯ ವಿಸ್ತರಣೆಗೆ ವಿರೋಧಿಸಿ, 2025ರ ಫೆಬ್ರವರಿ 24ರಂದು ನಡೆದ ಬೃಹತ್ ಪ್ರತಿಭಟನೆಯಲ್ಲಿ ಶ್ರೀಗಳು ಭಾಗಿಯಾಗಿದ್ದರು. ಶ್ರೀಗಳು ಮತ್ತು ಸಾರ್ವಜನಿಕ ವಲಯದ ಭಾರೀ ವಿರೋಧದ ನಡುವೆಯೂ, ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿದೆ. ಈ ವಿಷಯ ಶ್ರೀಗಳ ಮನಸಿಗೆ ಬೇಸರವಾಗಿ ಮೌನಕ್ಕೆ ಜಾರಿದ್ದಾರೆ ಎನ್ನಲಾಗುತ್ತಿದೆ. ಅಭಿನವ ಗವಿಸಿದೇಶ್ವರ ಮಹಾ ಸ್ವಾಮಿಗಳು ಮೌನಚಾರಣೆ ಮಾಡುತ್ತಿರೋದ್ರಿಂದ, ಶ್ರೀಗಳ ದರ್ಶನ ಸಿಗದೇ ಭಕ್ತರು ನಿರಾಸೆಯಿಂದ ವಾಪಸ್ ತೆರಳುತ್ತಿದ್ದಾರೆ.
- Advertisement -

