ಕನ್ನಡ ಬಿಗ್ ಬಾಸ್ ಸೀಸನ್ 12 ಈಗ ಎಲ್ಲೆಡೆ ಮನೆ ಮಾತಾಗಿದೆ. ಸೋಷಿಯಲ್ ಮೀಡಿಯಾದ ಟ್ರೋಲ್ ಪೇಜ್‌ಗಳಲ್ಲಿ ಬಿಗ್ ಬಾಸ್ ಶಾರ್ಟ್ ವೀಡಿಯೊಗಳು ಸದ್ದು ಮಾಡುತ್ತಿವೆ. ಈ ಸೀಸನ್‌ನಲ್ಲಿ ಹಲವು ಅಚ್ಚರಿ ಘಟನೆಗಳು ಎದುರಾಗಲಿವೆ ಎಂದು ಬಿಗ್ ಬಾಸ್ ತಂಡ ಮೊದಲೇ ಸೂಚಿಸಿದ್ದರು. ಅದರಂತೆ, ಈ ವಾರ ಪ್ರೇಕ್ಷಕರಿಗೆ ಸರ್ಪ್ರೈಸ್ ಮಿಡ್ ವೀಕ್ ಎಲಿಮಿನೇಷನ್ ಸಿಕ್ಕಿದೆ. ಈ ಬಾರಿ ಒಂದಲ್ಲ, ಇಬ್ಬರು ಸ್ಪರ್ಧಿಗಳು ಹೊರಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾರು ಔಟ್ ಆಗಬಹುದು ಎಂಬ ಬಗ್ಗೆ ಊಹಾಪೋಹಗಳು ಜೋರಾಗಿವೆ.
ಸಾಮಾನ್ಯವಾಗಿ ಬಿಗ್ ಬಾಸ್‌ನಲ್ಲಿ ವಾರಾಂತ್ಯದಲ್ಲಿ ಪ್ರೇಕ್ಷಕರ ವೋಟ್ ಆಧರಿಸಿ ಎಲಿಮಿನೇಷನ್ ನಡೆಯುತ್ತದೆ. ಆದರೆ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ಸಂಪೂರ್ಣ ವಿಭಿನ್ನವಾಗಿದೆ. ಈ ಬಾರಿ ಜನರ ವೋಟ್ ಅಲ್ಲ, ಮನೆಯವರ ಮತದಾನ ಆಧಾರದಲ್ಲಿ ಎಲಿಮಿನೇಷನ್ ನಡೆಯಲಿದೆ. ಕಲರ್ಸ್ ಕನ್ನಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಇದರ ಕ್ಲೂ ಸಿಕ್ಕಿದೆ. ಪ್ರೋಮೋ ಪ್ರಕಾರ, 17 ಸ್ಪರ್ಧಿಗಳ ಫೋಟೋಗಳನ್ನು ಒಂದೊಂದು ಹಲಗೆಗಳ ಮೇಲೆ ಇರಿಸಲಾಗಿದೆ. ಮನೆ ಮಂದಿ ತಾವು ಹೊರಹಾಕಲು ಬಯಸುವ ಸ್ಪರ್ಧಿಯ ಹಲಗೆಯನ್ನು ಮುಂದೆ ಇಡುವ ಮೂಲಕ ಮತದಾನ ಮಾಡುತ್ತಾರೆ.
ಕೊನೆಗೆ ಯಾರ ಹಲಗೆ ‘ಎಕ್ಸಿಟ್ ಡೋರ್’ ಬಳಿ ತಲುಪುತ್ತದೆ, ಅವರು ಮನೆಯಿಂದ ಹೊರಬೀಳುತ್ತಾರೆ ಎಂದು ತಿಳಿಸಲಾಗಿದೆ. ಎಲ್ಲರೂ ನಿದ್ರೆಯಲ್ಲಿರುವ ಸಮಯದಲ್ಲಿ ಬಿಗ್ ಬಾಸ್ ಸೈರನ್ ಬಾರಿಸಿ ಸ್ಪರ್ಧಿಗಳನ್ನು ಎಚ್ಚರಿಸಿ, ಈ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗುತ್ತದೆ. ಅಂದರೆ ಸಂಪೂರ್ಣ ಶಾಕ್ ಎಲಿಮೆಂಟ್. ಇದೇ ವೇಳೆ, ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಈ ಬಾರಿ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಸತೀಶ್ ಮತ್ತು ಮಂಜು ಭಾಷಿಣಿ ಮನೆಯಿಂದ ಔಟ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ