Sunday, October 26, 2025

Latest Posts

ಚಿನ್ನದ ಹೂಡಿಕೆದಾರರಿಗೆ ಡೇಂಜರ್‌ ಅಲರ್ಟ್

- Advertisement -

ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದ ಚಿನ್ನದ ಬೆಲೆ, ದಿಢೀರ್ ಆಗಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಚಿನ್ನದ ಬೆಲೆ ಹೆಚ್ಚಿದ್ದ ವೇಳೆ ಹೂಡಿಕೆದಾರರು ಭರ್ಜರಿ ಲಾಭ ಮಾಡಿಕೊಂಡಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿಯುವಂತೆ ಮಾಡಿದೆ. ಜೊತೆಗೆ ಯುಎಸ್‌ ಡಾಲರ್‌ ಮತ್ತು ಭವಿಷ್ಯದ ವ್ಯಾಪಾರ ಮಾತುಕತೆಗಳ ವಿಚಾರವು ಭಾರೀ ಒತ್ತಡ ಉಂಟು ಮಾಡಿದೆ.

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಡಿಸೆಂಬರ್‌ ಡೆಲಿವರಿಗಾಗಿ ಚಿನ್ನದ 10 ಗ್ರಾಂ ಬೆಲೆ 1,22,995 ರೂಪಾಯಿಗೆ ಇಳಿದಿದ್ದು, ಶೇಕಡಾ 0.89ರಷ್ಟು ಕುಸಿತವಾಗಿದೆ. ಫೆಬ್ರವರಿ 2026ರ ಫ್ಯೂಚರ್ಸ್‌ 10 ಗ್ರಾಂ ಬೆಲೆ 1,24,200 ರೂಪಾಯಿಗೆ ತಲುಪಿದೆ. ಬೆಳ್ಳಿ ಫ್ಯೂಚರ್ಸ್‌ ಕೂಡ ತೀವ್ರ ಕುಸಿತವನ್ನು ಅನುಭವಿಸಿದೆ. ಡಿಸೆಂಬರ್‌ ಡೆಲವರಿ ಬೆಲೆ 1,45,829 ರೂಪಾಯಿಗೆ ಕುಸಿದಿದ್ದು, 2026ರ ಮಾರ್ಚ್‌ ಬೆಲೆ 1,47,878 ರೂಪಾಯಿಗೆ ತಲುಪಿದೆ.

ಫ್ಯೂಚರ್ಸ್‌ ಡೆಲವರಿ ಎಂದರೆ, ನಿಗದಿತ ತಿಂಗಳಲ್ಲಿ ವಹಿವಾಟು ಮಾಡಬೇಕೆಂಬ ಒಪ್ಪಂದವೇ ಆಗಿದೆ. ಉದಾಹರಣೆಗೆ ನಾವು ಡಿಸೆಂಬರ್‌ ಫ್ಯೂಚರ್ಸ್‌ 10 ಗ್ರಾಂ ಚಿನ್ನ ಖರೀದಿಸಿದ್ರೆ, ಒಪ್ಪಂದದಂತೆ ಚಿನ್ನವನ್ನು ಡಿಸೆಂಬರ್‌ನಲ್ಲೇ ಪಡೆಯಬೇಕಾಗುತ್ತದೆ.

ಚಿನ್ನದ ಮೇಲೆ ಜಾಗತಿಕ ರಾಜಕೀಯ ಮತ್ತು ವ್ಯಾಪಾರ ಒಪ್ಪಂದಗಳು ಮಹತ್ವ ಪೂರ್ಣ ಪರಿಣಾಮ ಬೀರುತ್ತದೆ. ಇನ್ನು ಮುಂದಿನ ವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸಭೆ ಇದ್ದು, ಮಾರುಕಟ್ಟೆಯ ಮೇಲೆ ಭಾರೀ ಪ್ರಭಾವ ಬೀರಬಹುದಾಗಿದೆ. ಯಶಸ್ವಿ ಒಪ್ಪಂದ ಚಿನ್ನದ ಬೆಲೆಯಲ್ಲಿ ಏರಿಳಿತಕ್ಕೆ ಕಾರಣ ಆಗಲೂಬಹುದು.

ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರಿಗೆ ಚಿನ್ನದ ಬೆಲೆ ಇಳಿಕೆ ಎಚ್ಚರಿಕೆಯನ್ನೂ ನೀಡುತ್ತಿದೆ. ಅಮೆರಿಕಾ-ರಷ್ಯಾ ಸಂಬಂಧಗಳು, ಯುರೋಪ್‌-ಉಕ್ರೇನ್‌ ಪರಿಸ್ಥಿತಿ, ಭೌಗೋಳಿಕ ರಾಜಕೀಯ ಅಪಾಯಗಳು ಕೂಡ, ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತವೆ. ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಮುಂದಿನ ವರ್ಷದಲ್ಲಿ ಬಡ್ಡಿ ದರಗಳನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆಯು, ಹೂಡಿಕೆದಾರರನ್ನು ಚಿನ್ನ ಖರೀದಿಸಲು ಪ್ರೇರೇಪಿಸುತ್ತದೆ.

- Advertisement -

Latest Posts

Don't Miss