ನವೆಂಬರ್ 1ರಿಂದ ಹೊಸ ನಿಯಮಗಳು ಜಾರಿಯಾಗುತ್ತಿದ್ದು, ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಜನರ ಹಣಕಾಸು ಮತ್ತು ದೈನಂದಿನ ಜೀವನದ ಮೇಲೆ ಭಾರೀ ಪ್ರಭಾವ ಬೀರಲಿದೆಯಂತೆ.
UIDAI, SEBI ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತರುತ್ತಿರುವ ಬದಲಾವಣೆಗಳು, ಆಧಾರ್ ಕಾರ್ಡ್, ಕ್ರೆಡಿಟ್ ಕಾರ್ಡ್, ಮ್ಯೂಚುಯಲ್ ಫಂಡ್ ಹಾಗೂ ಎಲ್‌ಪಿಜಿ ದರಗಳ ಮೇಲೆ ನೇರ ಪ್ರಭಾವ ಬೀರುವಂತಿವೆ. ಈ ನಿಯಮಗಳನ್ನು ತಿಳಿಯದೆ ಇರುವುದರಿಂದ ಆರ್ಥಿಕ ನಷ್ಟವೂ ಉಂಟಾಗಬಹುದು ಎನ್ನಲಾಗಿದೆ.
ನಂಬರ್ 1 :
UIDAI ಹೊಸ ವ್ಯವಸ್ಥೆಯ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಈಗ ಹೆಸರು, ವಿಳಾಸ, ಜನ್ಮದಿನಾಂಕ ಮುಂತಾದ ಮಾಹಿತಿಗಳನ್ನು ನೇರವಾಗಿ ಆನ್‌ಲೈನ್‌ನಲ್ಲಿ ತಿದ್ದಿಕೊಳ್ಳಬಹುದು. ಅದ್ರಂತೆ, ಬಯೋಮೆಟ್ರಿಕ್ ಮಾಹಿತಿ , ಅಂದರೆ ಬೆರಳಚ್ಚು ಅಥವಾ ಕಣ್ಣು ಸ್ಕ್ಯಾನ್ ಮಾತ್ರ, ನೀಡಬೇಕಾಗುತ್ತದೆ. ಹಾಗೂ ಹೊಸ ನಿಯಮದ ಪ್ರಕಾರ, ಪ್ಯಾನ್, ಪಾಸ್‌ಪೋರ್ಟ್, ರೇಷನ್ ಕಾರ್ಡ್ ಅಥವಾ ಶಾಲಾ ದಾಖಲೆಗಳಂತೆ, ಸರ್ಕಾರಿ ಡೇಟಾಬೇಸ್‌ಗಳೊಂದಿಗೆ ಸ್ವಯಂಚಾಲಿತವಾಗಿ, UIDAI ನಿಮ್ಮ ಮಾಹಿತಿಯನ್ನು ಪರಿಶೀಲನೆ ಮಾಡುತ್ತದೆ. ಇದರಿಂದ ಡಾಕ್ಯುಮೆಂಟ್ ಅಪ್‌ಲೋಡ್ ಮಾಡುವ ತೊಂದರೆಗಳಿಗೂ ಮುಕ್ತಿ ಸಿಗಲಿದೆ.
ನಂಬರ್ 2 :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಪ್ರಕಟಿಸಿದೆ. ನವೆಂಬರ್ 1ರಿಂದ ಅನ್ಸಿಕ್ಯೂರ್ಡ್ ಕಾರ್ಡ್‌ಗಳ ಮೇಲೆ 3.75% ಶುಲ್ಕ ವಿಧಿಸಲಾಗುವುದು. ಜೊತೆಗೆ ಕ್ರೇಡ್, ಚೆಕ್ ಅಥವಾ ಮೊಬಿಕ್ವಿಕ್, ಮೊದಲಾದ ತೃತೀಯ ಪಕ್ಷದ ಆಪ್‌ಗಳ ಮೂಲಕ, ಶಾಲಾ ಅಥವಾ ಕಾಲೇಜು ಶುಲ್ಕ ಪಾವತಿಸಿದರೆ 1% ಹೆಚ್ಚುವರಿ ಚಾರ್ಜ್ ಅನ್ವಯವಾಗುತ್ತದೆ. ಆದರೆ, ಶಾಲೆಯ ಅಧಿಕೃತ ವೆಬ್‌ಸೈಟ್ ಅಥವಾ POS ಯಂತ್ರದ ಮೂಲಕ ಪಾವತಿಸಿದರೆ, ಯಾವುದೇ ಶುಲ್ಕವಿಲ್ಲ. ಇದಲ್ಲದೆ ₹1,000ಕ್ಕಿಂತ ಹೆಚ್ಚು ಮೊತ್ತವನ್ನು ವಾಲೆಟ್‌ನಲ್ಲಿ ಲೋಡ್ ಮಾಡಿದರೆ, 1% ಚಾರ್ಜ್ ವಿಧಿಸಲಾಗುತ್ತದೆ ಮತ್ತು ಕಾರ್ಡ್ ಮೂಲಕ ಚೆಕ್ ಪಾವತಿಸಿದರೆ ₹200 ಶುಲ್ಕ ಕೊಡಬೇಕಾಗುತ್ತದೆ.
ನಂಬರ್ 3 :
ಭಾರತೀಯ ಪಾವತಿ ಮಂಡಳಿ SEBI ಮ್ಯೂಚುಯಲ್ ಫಂಡ್ ಹೂಡಿಕೆಗಳ ಪಾರದರ್ಶಕತೆ ಹೆಚ್ಚಿಸಲು, ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಅದ್ರಂತೆ ಈಗಿನಿಂದ ಯಾವ AMC ಅಧಿಕಾರಿ, ನೌಕರ ಅಥವಾ ಅವರ ಕುಟುಂಬ ಸದಸ್ಯರು, ₹15 ಲಕ್ಷಕ್ಕಿಂತ ಹೆಚ್ಚು ಮೊತ್ತದ ವ್ಯವಹಾರ ಮಾಡಿದರೂ, ಅದನ್ನು ಕಂಪನಿಯ ಕಾನೂನು ಅಧಿಕಾರಿಗೆ ವರದಿ ನೀಡಬೇಕಾಗುತ್ತದೆ. ಈ ಕ್ರಮ ಹೂಡಿಕೆದಾರರ ಹಿತಾಸಕ್ತಿಯನ್ನು ರಕ್ಷಿಸುವುದು ಮತ್ತು ‘ಇನ್ಸೈಡರ್ ಟ್ರೇಡಿಂಗ್’ ತಪ್ಪಿಸುವುದು ಎಂಬ ಉದ್ದೇಶದಿಂದ ಕೈಗೊಳ್ಳಲಾಗಿದೆ.
ನಂಬರ್ 4 :
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಯೂ ನವೆಂಬರ್ 1ರಿಂದ ಪ್ರಮುಖ ಬದಲಾವಣೆಗಳು ಜಾರಿಯಾಗುತ್ತಿವೆ. ಇಂದಿನವರೆಗೂ ಒಂದು ಖಾತೆ ಅಥವಾ ಲಾಕರ್‌ಗೆ ಕೇವಲ ಒಬ್ಬ ನಾಮಿನಿ ಮಾತ್ರ ನೀಡಬಹುದಾಗಿತ್ತು. ಆದರೆ ಈಗಿನಿಂದ ಗ್ರಾಹಕರು ಒಂದೇ ಖಾತೆಗೆ ನಾಲ್ಕು ನಾಮಿನಿಗಳನ್ನು ನೇಮಿಸಬಹುದು. ಇದೇ ಅಲ್ಲದೆ, ಪ್ರತಿಯೊಬ್ಬ ನಾಮಿನಿಗೆ ಯಾವ ಪ್ರಮಾಣದಲ್ಲಿ ಹಂಚಿಕೆ ನೀಡಬೇಕು ಎಂಬುದನ್ನು, ಖಾತೆದಾರರು ತಾವೇ ನಿಗದಿಪಡಿಸಬಹುದು. ಮೊದಲ ನಾಮಿನಿ ಮರಣವಾದರೆ, ಆ ಹಕ್ಕು ಸ್ವಯಂಚಾಲಿತವಾಗಿ ಮುಂದಿನ ನಾಮಿನಿಗೆ ವರ್ಗವಾಗುತ್ತದೆ. ಈ ಕ್ರಮದಿಂದ ಭವಿಷ್ಯದಲ್ಲಿನ ವಿವಾದಗಳ ಸಾಧ್ಯತೆ ಕಡಿಮೆಯಾಗಲಿದೆ.
ನಂಬರ್ 5 :
ಪ್ರತಿ ತಿಂಗಳಂತೆ, ನವೆಂಬರ್ 1ರಂದು ಸಹ LPG, CNG ಮತ್ತು PNG ದರಗಳ ಮರುಪರಿಶೀಲನೆ ನಡೆಯಲಿದೆ. ಜೊತೆಗೆ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳನ್ನು ಆಧರಿಸಿ, ಇವುಗಳನ್ನು ನಿಗದಿಪಡಿಸುತ್ತವೆ. ಆದ್ದರಿಂದ ಈ ಬಾರಿ ಬೆಲೆ ಏರಿಕೆ ಅಥವಾ ಇಳಿಕೆ ಎರಡೂ ಸಾಧ್ಯತೆಗಳಿವೆ. ಬೆಲೆ ಏರಿಕೆ ಸಂಭವಿಸಿದರೆ ಗೃಹ ಬಳಕೆಯ ಖರ್ಚು ಹೆಚ್ಚಾಗಬಹುದು, ಬೆಲೆ ಇಳಿದರೆ ಗ್ರಾಹಕರ ಹೊರೆ ಕಡಿಮೆಯಾಗಲಿದೆ.
ಒಟ್ನಲ್ಲಿ ನಿಮ್ಮ ಖಾತೆಗಳು, ಹೂಡಿಕೆಗಳು ಮತ್ತು ದಾಖಲೆಗಳನ್ನು ಅಗತ್ಯಕ್ಕ ತಕ್ಕ ರೀತಿಯಲ್ಲಿ ನವೀಕರಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

