ಮುಂದಿನ ದಿನಗಳಲ್ಲಿ ಸಿಎಂ ಬದಲಾವಣೆಯಾದ್ರೆ ಮುಂದಿನ ಕೆಪಿಸಿಸಿ ಅಧ್ಯಕ್ಷರು ಯಾರಾಗ್ತಾರೆ ಎಂಬ ಚರ್ಚೆಗಳು ಈಗಲೇ ಶುರುವಾಗಿದೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಡಿ.ಕೆ. ಸುರೇಶ್, ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಏಕೆ ಹೇಳ್ತೀರಾ? ನಾನು ಆ ರೇಸ್‌ನಲ್ಲಿ ಇಲ್ಲ. ಈ ಎಲ್ಲಾ ವಿಚಾರವನ್ನು ನಮ್ಮ ಹೈಕಮಾಂಡ್ ನಾಯಕರು ನೋಡ್ತಾರೆ. ಏಕೆ ಅಷ್ಟು ಅರ್ಜೆಂಟ್ ಎಂದು ಮರು ಪ್ರಶ್ನಿಸಿದ್ದಾರೆ. ನವೆಂಬರ್ ಕ್ರಾಂತಿ ಎಲ್ಲಾ ಊಹಾಪೋಹ. ಪಕ್ಷದ ಮುಂದೆ ಯಾವುದೂ ಇಲ್ಲ.
ಸಿದ್ದರಾಮಯ್ಯ ಅವರಿಗೆ ಇನ್ನೂ ವಯಸ್ಸಾಗಿಲ್ಲ. ಸದ್ಯಕ್ಕೆ ನಾಯಕತ್ವ ಗಟ್ಟಿಯಾಗಿದೆ. ಎಲ್ಲಾ ನಾಯಕರು ಸೇರಿದ್ರೆ ಕಾಂಗ್ರೆಸ್ ಪಕ್ಷ. ಸತೀಶ್ ಜಾರಕಿಹೊಳಿ, ಮಹದೇವಪ್ಪ, ಎಂ.ಬಿ. ಪಾಟೀಲ್ ಎಲ್ಲರೂ ಸೇರಿ ಕಟ್ಟಿರೋ ಪಕ್ಷ ಇದು. ಸಿದ್ದರಾಮಯ್ಯ ಅವರೇ ಎಷ್ಟು ದಿನ ಇರ್ತಾರೋ, ಅಲ್ಲಿಯವರೆಗೂ ಅವರೇ ಸಿಎಂ ಆಗಿರುತ್ತಾರೆ. ಹೀಗಂತ ಡಿ.ಕೆ. ಸುರೇಶ್ ಹೇಳಿದ್ರು.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್ ಅವರು, ಅವರಿಗೇಕೆ ಪ್ರಚಾರ ಕೊಡ್ತೀರಿ? ಒಂದೇ ಒಂದು ವಿಚಾರವಾಗಿ ಕೇಂದ್ರದಲ್ಲಿ ಧ್ವನಿ ಎತ್ತಿದ್ದಾರಾ?. ರಾಜ್ಯಕ್ಕೆ 10 ವರ್ಷದಲ್ಲಿ ಏನಾದ್ರೂ ತಂದಿದ್ದಾರಾ?. ಇಲ್ಲಿ ಟನಲ್ ರೋಡ್ ಬಗ್ಗೆ ಮಾತ್ರ ಮಾತನಾಡ್ತಾರೆ.
ನಮ್ಮ ರಾಜ್ಯಕ್ಕೆ ತೇಜಸ್ವಿ ಸೂರ್ಯ ಅವರು ಒಂದೇ ಒಂದು ಯೋಜನೆಯನ್ನಾದ್ರೂ ತಂದಿದ್ದಾರಾ? ಪ್ರಧಾನಿಯವರ ಮುಂದೆ ಮಾತನಾಡೋಕೆ ಹೇಳಿ. ಮೆಟ್ರೋಗೆ ಕೇಂದ್ರ ಕೊಡೋದು 10% ಮಾತ್ರ. ಒಳಿದ 90% ರಾಜ್ಯ ಸರ್ಕಾರವೇ ಹಣ ನೀಡಬೇಕು. ಭೂಸ್ವಾಧೀನಕ್ಕೂ ರಾಜ್ಯವೇ ಪರಿಹಾರ ನೀಡಬೇಕು. ಆದರೆ ಹೆಸರು ಮಾತ್ರ ಕೇಂದ್ರಕ್ಕೆ ತೋರಿಸ್ತಾರೆ.
ಗುಜರಾತ್‌ಗೆ 20% ಕೇಂದ್ರ ಕೊಡುತ್ತೆ. ಉಳಿದ ರಾಜ್ಯಗಳಿಗೆ ಕೇವಲ 10% ಮಾತ್ರ ಕೊಡೋದು. ನಮಗೇಕೆ ಅನ್ಯಾಯ ಅಂತ ಪ್ರಶ್ನೆ ಮಾಡೋಕೇಳಿ. ಅಲ್ಲಿ ಮಾತನಾಡೋಕೆ ಗಟ್ಟಿ ಧ್ವನಿ ಇಲ್ಲ. ಇಲ್ಲಿ ಮಾತ್ರ ಮಾತನಾಡ್ತಾರೆ. ಎಲ್ಲವೂ ಗುಜರಾತ್‌ಗೆ ಹೋಗ್ತಿದೆ. ಒಲಂಪಿಕ್ ನಡೆಸೋಕೆ ಸಿದ್ಧತೆ ಮಾಡ್ತಿದ್ದಾರೆ. ಅಹಮದಾಬಾದ್ ಗುರಿಯಾಗಿಟ್ಟೇ ಮಾಡ್ತಿದ್ದಾರೆ. ಕ್ರೀಡಾಂಗಣ ಚಟುವಟಿಕೆಗೆ 500 ಎಕರೆ ಮೀಸಲಿಟ್ಟಿದ್ದಾರೆ.
4 ಲಕ್ಷ ಕೋಟಿ ನಾವು ಆದಾಯ ಕೊಡ್ತೇವೆ. ನಮ್ಮ ರಾಜ್ಯದಲ್ಲೇಕೆ ಮಾಡಬಾರದು? ದಕ್ಷಿಣ ಭಾರತಕ್ಕೆ ಅನ್ಯಾಯ ಅಂತ ಇದಕ್ಕೇ ಹೇಳೋದು ಎಂದು ಡಿ.ಕೆ. ಸುರೇಶ್ ಗುಡುಗಿದ್ದಾರೆ.


