Political News: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಬಗ್ಗೆ ಬಿಜೆಪಿ ನಾಯಕ ಮುನಿರತ್ನ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮದ ಜ“ತೆ ಮಾತನಾಡಿರುವ ಅವರು, ಪಶ್ಚಿಮ ಬಂಗಾಳಕ್ಕೆ ಇನ್ನು ಮುಂದೆ ಉತ್ತಮ ದಿನಗಳು ಬರಲಿವೆ ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ದೇಶಕ್ಕೆ ಕೆಟ್ಟ ಪರಿಸ್ಥಿತಿ ತರಲು ಮುಂದಾಗಿದ್ದ ಪಕ್ಷ. ಅದನ್ನು ಕಿತ್ತಾಕಿರುವುದು ಉತ್ತಮ ವಿಷಯ. ಅದನ್ನು ಹಾಗೆ ಬಿಟ್ಟಿದಿದ್ದರೆ, ಇನ್ನು 5ರಿಂದ 10 ವರ್ಷದಲ್ಲಿ ಇಡೀ ಭಾರತಕ್ಕೆ ಅದು ಹಬ್ಬಿಕ“ಳ್ಳುತ್ತಿತ್ತು. ಆದರೆ ಜನ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ, ಪಶ್ಚಿಮ ಬಂಗಾಳವನ್ನು ಕ್ಲೀನ್ ಮಾಡಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ.
ಅಲ್ಲದೇ ದೇಶದ ಆಚೆ ಇರುವ ಶತ್ರುಗಳನ್ನು ನಾವು ಮಟ್ಟ ಹಾಕಬಹುದು. ಆದರೆ ದೇಶದಲ್ಲೇ ಇರುವವರನ್ನು ಏನೂ ಮಾಡಲಾಗುವುದಿಲ್ಲ. ಅದು ತುಂಬಾ ಕಷ್ಟದ ಕೆಲಸ. ಅಂಥ ಕೆಲವಸವನ್ನು ನರೇಂದ್ರ ಮೋದಿ, ಅಮಿತ್ ಶಾ ಸೇರಿ ಮಾಡಿದ್ದಾರೆ. ಮುಂದೆ ಪಶ್ಚಿಮ ಬಂಗಾಳಕ್ಕೆ ಉತ್ತಮ ದಿನಗಳು ಬರುತ್ತದೆ ಎಂದು ಮುನಿರತ್ನ ಹೇಳಿದ್ದಾರೆ.




