Monday, December 23, 2024

Latest Posts

ಚೇತನ್ ‘ಮಾರ್ಗ’ಕ್ಕೆ ಸಿಕ್ಕಿದೆ ಸೂಪರ್ ಪವರ್..!

- Advertisement -

ಕೊರೋನಾ ಹಾವಳಿ ಕೊಂಚ ಕಡಿಮೆಯಾಗಿ, ಲಾಕ್ ಡೌನ್ ಎಲ್ಲಾ ಮುಗಿದ ಬಳಿಕ ಇದೀಗ ತಾನೇ ಚಿತ್ರರಂಗ ಚೇತರಿಸಿಕೊಳ್ತಿದೆ.. ಸದ್ಯ ಕನ್ನಡದ ಮತ್ತೊಂದು ಹೊಸ ಚಿತ್ರದ ಮುಹೂರ್ತ ನೆರವೇರಿದೆ.. ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್ ಅವರ ನಟನೆಯ ಹೊಸ ಚಿತ್ರವೊಂದು ಸದ್ಯ ಅನೌನ್ಸ್ ಆಗಿದೆ.. ಚೇತನ್ ನಟನೆಯಲ್ಲಿ ಮೂಡಿಬರ್ತಿರುವ ಆ ಹೊಸ ಚಿತ್ರವೇ ಮಾರ್ಗ.. ಈ ಚಿತ್ರದ ಮುಹೂರ್ತ ಇಂದು ಗೌರಿ ಹಬ್ಬದ ವಿಶೇಷ ದಿನ ಪದ್ಮನಾಭನಗರದ ಬನಗಿರಿ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.. ವಿಶೇಷ ಅಂದ್ರೆ ಚೇತನ್ ಅವರ ಮಾರ್ಗ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕ್ಲಾಪ್ ಮಾಡಿದ್ರು.. ಜೊತೆಗೆ ಕೊರೋನಾ ಇರುವ ಇಂತಹ ಪರಿಸ್ಥಿತಿಯಲ್ಲಿ ಹೊಸ ಸಿನಿಮಾಗಳು ಅನೌನ್ಸ್ ಆಗ್ತಿರುವುದು ಬಹಳ ಖುಷಿಯ ವಿಚಾರ.. ಈಗ ಚೇತನ್ ಅವರ ಮಾರ್ಗ ಸಿನಿಮಾ ಕೂಡ ಶುರುವಾಗಿದೆ.. ಇಡೀ ತಂಡಕ್ಕೆ ಒಳ್ಳೆಯದಾಗ್ಲಿ ಅಂತ ಶುಭ ಕೋರಿದ್ರು.. ಅಲ್ಲದೆ ಈ ಸಮಯದಲ್ಲಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಗಾಯಕ ಎಸ್.ಪಿ.ಬಿ ಅವರ ಬಗ್ಗೆಯೂ ಮಾತನಾಡಿದ್ರು ಅಪ್ಪು.. ಅವರೊಬ್ಬ ಗ್ರೇಟ್ ಸಿಂಗರ್.. ಬೆಟ್ಟದ ಹೂ ಸಿನಿಮಾದಲ್ಲಿ ನಾನು ಅವರ ಜೊತೆಗೆ ಹಾಡೊಂದನ್ನ ಹಾಡಿದ್ದೆ.. ಅದನ್ನೆಲ್ಲಾ ಮರೆಯೋಕೆ ಸಾಧ್ಯವಿಲ್ಲ.. ಇತ್ತೀಚೆಗೆ ನನ್ನ ಮಾಯಾಬಜಾರ್ ಚಿತ್ರದ ಹಾಡೊಂದನ್ನೂ ಹಾಡಿದ್ರು.. ಆದಷ್ಟು ಬೇಗ ಅವರು ಗುಣಮಯಖರಾಗಿ ಬರಲಿ ಅಂತ ಹೇಳಿದ್ರು.. ಇದೇ ವೇಳೆ ಹಿಂದಿ ಹೇರಿಕೆ ಬಗ್ಗೆಯೂ ಮಾತನಾಡಿದ ಅಪ್ಪು ನಾವು ಕನ್ನಡಿಗರು ಮೊದಲು ಕನ್ನಡವನ್ನ ಕಲಿಯಬೇಕು, ಎಲ್ಗಲರಿಗೂ ಕಲಿಸಬೇಕು ಅಂತ ಕನ್ನಡ ಭಾಷೆಗೆ ಹೆಚ್ಚು ಮಹತ್ವ ಕೊಡಬೇಕು ಅಂತ ಹೇಳಿದ್ರು..

ಮಾರ್ಗ ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ.. ಈಗಾಗ್ಲೇ ಸಾಕಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಮೋಹನ್ ಅವರು ಈ ಚಿತ್ರದ ಮೂಲಕ ಪರಿಪೂರ್ಣ ನಿರ್ದೇಶಕರಾಗಿ ಗುರುತಿಸಿಕೊಳ್ತಿದ್ದಾರೆ.. ಇನ್ನೂ ಈ ಚಿತ್ರದಲ್ಲಿ ಚೇತನ್ ಗೆ ಇಬ್ಬರು ನಾಯಕಿಯರು.. ದಿಯಾ ಚಿತ್ರದ ಖ್ಯಾತಿಯ ನಟಿ ಖುಷಿ ಹಾಗೂ ಮತ್ತೊಬ್ಬ ನವನಟಿ ನಾಯಕಿಯರಾಗಿ ಅಭಿನಯಿಸ್ತಿದ್ದಾರೆ.. ಮಾರ್ಗ ಚಿತ್ರದಲ್ಲಿ ನಟಿ ಖುಷಿ ಅವರ ಪಾತ್ರದ ಹೆಸರು ನಕ್ಷತ್ರ..ಅನಾಥಾಶ್ರಮದಲ್ಲಿ ಬೆಳೆದಿರುವ ಹೆಲ್ಪಿಂಗ್ ನೇಚರ್ ಇರುವಂತಹ ಹುಡುಗಿಯ ಪಾತ್ರವಂತೆ.. ಇದೇ ಮೊದಲ ಬಾರಿಗೆ ಸ್ಟಾರ್ ನಟರೊಬ್ಬರ ಚಿತ್ರದಲ್ಲಿ ನಟಿಸ್ತಿರುವ ಬಗ್ಗೆ ನಟಿ ಖುಷಿ ಬಹಳ ಸಂತೋಷವನ್ನ ವ್ಯಕ್ತಪಡಿಸಿದ್ದಾರೆ.. ಈ ಸಿನಿಮಾ ಜೊತೆಗೆ ಇನ್ನೂ ಕೆಲ ಚಿತ್ರಗಳಲ್ಲೂ ಖುಷಿ ನಟಿಸ್ತಿದ್ದಾರಂತೆ.. ದಿಯಾ ಸಿನಿಮಾದಲ್ಲಿ ಖುಷಿ ಹಾಗೂ ನಟ ಪೃಥ್ವಿ ಅಂಬಾರ್ ಇಬ್ಬರ ಜೋಡಿ ಸೂಪರ್ ಹಿಟ್ ಆಗಿತ್ತು.. ಹಾಗಾಗಿ ಪೃಥ್ವಿ ಜೊತೆಗೆ ಮತ್ತೊಂದು ಚಿತ್ರದಲ್ಲೂ ಖುಷಿ ನಟಿಸಲಿದ್ದಾರಂತೆ.. ಅದಲ್ಲದೆ ಿನ್ನೂ ಒಂದು ಹೊಸ ಸಿನಿಮಾದಲ್ಲೂ ಅಭಿನಯಿಸಲಿದ್ದಾರಂತೆ..

ತಮ್ಮ ಸಿನಿಮಾ ಮುಹೂರ್ತದ ಬಗ್ಗೆ ಬಹಳ ಸಂತಸದಲ್ಲಿದ್ದ ನಾಯಕ ಚೇತನ್ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನ ಹಂಚಿಕೊಂಡ್ರು.. ನಿರ್ದೇಶಕ ಮೋಹನ್ ನನಗೆ ಸುಮಾರು ಏಳೆಂಟು ವರ್ಷಗಳಿಂದ ಪರಿಚಯದವರೇ.. ಅವರು ಬಹಳ ಪ್ರತಿಭಾನ್ವಿತ.. ಮಾರ್ಗ ಒಂದು ಕಮರ್ಷಿಯಲ್ ಎಂಟರ್ ಟೇನರ್.. ಈ ಚಿತ್ರದಲ್ಲಿ ಪಾತ್ರಕ್ಕೆ ತಕ್ಕ ಹಾಗೆ ಎರಡು ಮೂರು ವಿಭಿನ್ನ ಗೆಟಪ್ ಗಳಲ್ಲೂ ಕಾಣಿಸಿಕೊಂಡಿದ್ದೀನಿ.. ಸಾಕಷ್ಟು ಜನ ಟ್ಯಾಲೆಂಟೆಡ್ ಟೆಕ್ನೀಷಿಯನ್ಸ್ ಈ ಚಿತ್ರದಲ್ಲಿ ವರ್ಕ್ ಮಾಡಿದ್ದಾರೆ, ಅಂತ ಹೇಳಿದ್ರು.. ಅಂದಹಾಗೆ ಚೇತನ್ ಕೇವಲ ನಟರಷ್ಟೇ ಅಲ್ಲ.. ಅಭಿನಯದ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನೂ ಮಾಡ್ತಿರ್ತಾರೆ.. ಅದೇ ರೀತಿ ಲಾಕ್ ಡೌನ್ ಸಮಯದಲ್ಲಿಯೂ ನಟ ಚೇತನ್ ಅವರು ಸಂಕಷ್ಟದಲ್ಲಿದ್ದ ಚಿತ್ರರಂಗದ ಸಾಕಷ್ಟು ಜನ ಕಾರ್ಮಿಕರಿಗೆ ಸಹಾಯ ಮಾಡಿದ್ರು.. ಆ ಬಗ್ಗೆಯೂ ಈ ವೇಳೆ ಮಾತನಾಡಿದ್ರು.. ದಿನಗೂಲಿ ಕಾರರ್ಮಿಕರಿಗೆ 146 ಮನೆಗಳನ್ನ ಕಟ್ಟಿಸಿಕೊಟ್ಟಿದ್ದೇವೆ.. ಅಲ್ಲದೆ ತಮ್ಮ ಫೈರ್ ಸಂಸ್ಥೆಯ ಮೂಲಕ ಐನೂರು ಜನರಿಗೆ ಪ್ರತಿಯೊಬ್ಬರಿಗೂ ಎರಡು ಸಾವಿರ ರೂಪಾಯಿ ಕೊಟ್ಟಿದ್ದೇವೆ ಅಂತ ತಿಳಿಸಿದ್ರು..

ಅನಾರೋಗ್ಯ ಪೀಡಿತ ಗಾಯಕ ಎಸ್.ಪಿ.ಬಿ ಅವರ ಬಗ್ಗೆಯೂ ನಟ ಚೇತನ್ ಮಾತನಾಡಿದ್ರು.. ಅವರು ಹಾಡಿರುವ ಸಾಕಷ್ಟು ಹಾಡುಗಳನ್ನ ನಾನು ಕೇಳಿದ್ದೀನಿ.. ಅವರೊಬ್ಬ ಅದ್ಭುತ ಗಾಯಕ.. ಈ ಕೊರೋನಾ ಟೈಮ್ ನಲ್ಲಿ ಅವರೂ ಸಂಕಷ್ಟಕ್ಕೆ ಸಿಲುಕಿರೋದು ನಿಜಕ್ಕೂ ಬೇಸರದ ವಿಷ್ಯ.. ಆದಷ್ಟು ಬೇಗ ಅವರು ಚೇತರಿಸಿಕೊಳ್ಳಲಿ ಅಂತ ದೇವರಲ್ಲಿ ಪ್ರಾರ್ಥಿಸಿಕೊಳ್ತೇನೆ ಅಂತ ಹೇಳಿದ್ರು.. ಹಿಂದಿ  ಹೇರಿಕೆ ಬಗ್ಗೆ ನಟ ಚೇತನ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ರು.. ಭಾರತ ಹಲವಾರು ಭಾಷೆಗಳಿರುವ ದೇಶ.. ಕಲಿಯೋದಕ್ಕೆ ಆಸಕ್ತಿ ಇದ್ರೆ ಹಿಂದಿ ಭಾಷೆಯನ್ನ ಕಲಿತುಕೊಳ್ಳಿ, ಆದ್ರೆ ಹಿಂದಿ ಭಾಷೆಯ ಹೇರಿಕೆ ಸರಿಯಲ್ಲ ಅಂತ ಹೇಳಿದ್ರು.. ಅಂದಹಾಗೆ ಚೇತನ್ ನಟನೆಯ ಮಾರ್ಗ ಚಿತ್ರವನ್ನ ಗೌತಮ್ ಅನ್ನುವವರು ನಿರ್ಮಾಣ ಮಾಡ್ತಿದ್ದಾರೆ.. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.. ಒಟ್ಟಾರೆ ಚೇತನ್ ಅವರ ಹೊಸ ಚಿತ್ರ ಅನೌನ್ಸ್ ಆಗಿರುವುದು ಅವರ ಅಭಿಮಾನಿಗಳಿಗೆ ಬಹಳ ಸಂತಸ ತಂದಿದೆ..

ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss