ಭಾರತಕ್ಕೆ ಬರಲಿದ್ದಾರೆ ಡೊನಾಲ್ಡ್‌ ಟ್ರಂಪ್!

ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗಮಿಸುವ ಸಾಧ್ಯತೆ ಇದೆ. ಶೀಘ್ರದಲ್ಲೇ ಭಾರತದೊಂದಿಗೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುವುದಾಗಿ ಟ್ರಂಪ್‌ ಹೇಳಿದ್ದರು. ಇದೀಗ ಭಾರತದ ಭೇಟಿ ಬಗ್ಗೆ ಟ್ರಂಪ್‌ ಅವರೇ ಸುಳಿವು ನೀಡಿದ್ದಾರೆ. ಜೊತೆಗೆ ಪ್ರಧಾನಿ ನರೇದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ವ್ಯಕ್ತಿ. ಅವರು ನನ್ನ ಸ್ನೇಹಿತ. ನಾವು ಮಾತನಾಡುತ್ತೇವೆ. ನಾನು ಅಲ್ಲಿಗೆ ಹೋಗಬೇಕೆಂದು ಬಯಸುತ್ತಾರೆ. ನಾನು ಹೋಗುತ್ತೇನೆ. ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಬಲಪಡಿಸಲು, ಭಾರತಕ್ಕೆ ಭೇಟಿ ನೀಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷ ಭಾರತಕ್ಕೆ ಹೋಗುವ ಯೋಜನೆಯಿದೆಯೇ ಎಂಬ ಪ್ರಶ್ನೆಗೆ ಆಗಬಹುದು, ಹೌದು” ಎಂದು ಉತ್ತರಿಸಿದ್ದಾರೆ.

ಬಹುತೇಕ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಬಗ್ಗೆ ಹೇಳಿದ್ದಾರೆ. ಇದು ಭಾರತ-ಅಮೆರಿಕ ಸಂಬಂಧಗಳಲ್ಲಿ ಹೊಸ ಉತ್ಸಾಹವನ್ನು ತಂದಿದೆ. ನವೆಂಬರ್ 6ರಂದು ಶ್ವೇತಭವನದಲ್ಲಿ ತೂಕ ಇಳಿಸುವ ಔಷಧಿಗಳ ಬೆಲೆ ಕಡಿಮೆ ಮಾಡುವ ಯೋಜನೆಗೆ, ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಟ್ರಂಪ್ ಮಾತನಾಡಿದ್ರು. ಆ ವೇಳೆ ಮೋದಿಯವರೊಂದಿಗಿನ ಮಾತುಕತೆಗಳು ಸಕಾರಾತ್ಮಕವಾಗಿ ಪ್ರಗತಿಯಲ್ಲಿವೆ. ರಷ್ಯಾದಿಂದ ತೈಲ ಖರೀದಿಯನ್ನು ಹೆಚ್ಚು ನಿಲ್ಲಿಸಿದ್ದಾರೆ ಅಂತಾ ಹೇಳಿದ್ದಾರೆ.

ಒಟ್ನಲ್ಲಿ ಟ್ರಂಪ್‌ ಹೇಳಿಕೆಗಳು ಭಾರತ-ಅಮೆರಿಕ ಸಂಬಂಧಗಳನ್ನು ಬಲಪಡಿಸುತ್ತಿವೆ. ರಷ್ಯಾ ತೈಲ ಸುಂಕದ ಹೊರತಾಗಿಯೂ, ಇಂಧನ ಮತ್ತು ವ್ಯಾಪಾರದಲ್ಲಿ ಸಹಕಾರ ಹೆಚ್ಚುತ್ತಿದೆ. ಮೋದಿ-ಟ್ರಂಪ್ ಸ್ನೇಹವು ಇದರ ಕೇಂದ್ರಬಿಂದು. ಮುಂದಿನ ಭೇಟಿ ಈ ಸಂಬಂಧಗಳಿಗೆ ಹೊಸ ದಿಕ್ಕು ನೀಡಬಹುದು ಎನ್ನಲಾಗ್ತಿದೆ.

About The Author