IPL 2026ಗೆ ಸಜ್ಜಾದ ಫ್ರಾಂಚೈಸಿಗಳು : ಸೀಸನ್-19ರ ಹರಾಜಿಗೆ ಡೇಟ್‌ ಫಿಕ್ಸ್

ಐಪಿಎಲ್ 2026 ಸೀಸನ್‌ಗಾಗಿ ಎಲ್ಲಾ ಫ್ರಾಂಚೈಸಿಗಳು ಈಗ ರಿಟೆನ್ಶನ್ ಮತ್ತು ರಿಲೀಸ್ ಪಟ್ಟಿಯನ್ನು ತಯಾರಿಸುವಲ್ಲಿ ತೊಡಗಿವೆ. ನವೆಂಬರ್ 15ರೊಳಗೆ ತಂಡಗಳು ತಮ್ಮ retained ಪ್ಲೇಯರ್‌ಗಳ ಪಟ್ಟಿಯನ್ನು ಸಲ್ಲಿಸಬೇಕು. ಈ ಬಳಿಕ ಐಪಿಎಲ್ ಹರಾಜು ಡಿಸೆಂಬರ್ 15ರಂದು ನಡೆಯುವ ಸಾಧ್ಯತೆ ಇದೆ.

ಈ ಬಾರಿ ಹರಾಜು ವಿದೇಶದಲ್ಲಿ ಅಲ್ಲ, ಭಾರತದಲ್ಲೇ ನಡೆಯುವ ಸಾಧ್ಯತೆ ಹೆಚ್ಚು. ಕಳೆದ ಎರಡು ವರ್ಷಗಳಲ್ಲಿ 2023ರ ಹರಾಜು ದುಬೈಯಲ್ಲಿ, 2024ರಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿತ್ತು. ಆದರೆ ಈ ಬಾರಿ ಮಿನಿ ಹರಾಜು ಭಾರತದಲ್ಲೇ ಅಂತಿಮಗೊಳ್ಳಬಹುದು ಎಂದು ವರದಿಗಳು ಸೂಚಿಸುತ್ತಿವೆ.

ಇನ್ನೊಂದೆಡೆ, ಮಹಿಳಾ ಪ್ರೀಮಿಯರ್ ಲೀಗ್ 2026ರ ಹರಾಜು ನವೆಂಬರ್ 27ರಂದು ದಿಲ್ಲಿಯಲ್ಲಿ ನಡೆಯಲಿದೆ. ಇದು WPLನ ಮೊದಲ ಮೆಗಾ ಹರಾಜಾಗಿದ್ದು, ಘಟಾನುಘಟಿ ಆಟಗಾರ್ತಿಯರು ಈ ಬಾರಿ ಪಾಲ್ಗೊಳ್ಳಲಿದ್ದಾರೆ.

ಆದರೆ ಈಗಾಗಲೇ ಯಾವುದೇ ಆಟಗಾರರ ವಿನಿಮಯ ಅಧಿಕೃತವಾಗಿಲ್ಲ. ಸಂಜು ಸ್ಯಾಮ್ಸನ್ ವರ್ಗಾವಣೆ, ಕೆಎಲ್ ರಾಹುಲ್ ಟ್ರೇಡ್‌ ಕುರಿತ ಸುದ್ದಿಗಳು ಕೇವಲ ಊಹಾಪೋಹಗಳಷ್ಟೇ. ಆದರೆ, ಎಲ್ಲರ ಗಮನ ಸೆಳೆದಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಕೆಂದರೆ ಈ ಬಾರಿ ತಂಡವೇ ಮಾರಾಟಕ್ಕಿದೆ. ಯಾರು ಹೊಸ ಮಾಲೀಕರಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author