Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ“ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ ಪದೇ ಪದೇ ಪ್ರೇಮಾನಂದ ಮಹಾರಾಜರನ್ನು ಭೇಟಿಯಾಗಲು ವೃಂದಾವನಕ್ಕೆ ಬರುವ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಅಲ್ಲದೇ ಅನುಷ್ಕಾ ಶರ್ಮಾ ತುಳಸಿ ಮಾಲೆ ಧರಿಸಲು ಶುರು ಮಾಡಿದ್ದಾರೆ. ವಿರಾಟ್ ಜಪ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ಈ ದಂಪತಿ ಕೃಷ್ಣ-ರಾಧೆ ಭಕ್ತಿ ಮಾಡಲು ಆರಂಭಿಸಿದ್ದಾರೆಂದು ಎಲ್ಲರಿಗೂ ತಿಳಿದಿದೆ.

ಸದ್ಯ ವಿಷಯ ಏನಂದ್ರೆ, ವಿರಾಟ್ ಮತ್ತು ಅನುಷ್ಕಾ ವೃಂದಾವನದ ಈ ಆಶ್ರಮಕ್ಕೆ ಬರಲು, 5 ಕೋಟಿ ರೂಪಾಯಿ ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿದೆ. ಆದರೆ ಈ ಸುದ್ದಿ ಸುಳ್ಳು ಎಂದು ವಿರಾಟ್ ಟೀಂ ಸ್ಪಷ್ಟಪಡಿಸಿದೆ.

ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ಅಧ್ಯಕ್ಷ ದಿನೇಶ್ ಶರ್ಮಾ ಎಂಬುವವರು ವಿರಾಟ್ ದಂಪತಿ ಬಗ್ಗೆ ಈ ರೀತಿಯಾಗಿ ಸುಳ್ಳು ಆರೋಪ ಮಾಡಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು. ಸೆಲೆಬ್ರಿಟಿಗಳ ಮೂಲಕ ದೇವಸ್ಥಾನದಲ್ಲಿ ವಾಣಿಜ್ಯ ಲಾಭ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

ಆದರೆ ಈ ಬಗ್ಗೆ ವಿರಾಟ್ ಟೀಂ ಸ್ಪಷ್ಟನೆ ನೀಡಲಾಗಿದ್ದು, ವಿರಾಟ್ ಮತ್ತುಅನುಷ್ಕಾ ಭಕ್ತಿಯಿಂದಲೇ ವೃಂದಾವನಕ್ಕೆ ಬರುತ್ತಾರೆ ವಿನಃ ಹಣಕ್ಕಾಗಿ ಅಲ್ಲ. 2023ರಲ್ಲಿ ಇವರಿಬ್ಬರು ಪ್ರಥಮ ಬಾರಿಗೆ ವೃಂದಾವನಕ್ಕೆ ಬಂದಿದ್ದು, ಅಂದಿನಿಂದ ಮಹಾರಾಜರ ದರ್ಶನಕ್ಕಾಗಿ ದಂಪತಿ ಬರುತ್ತಿದ್ದಾರೆ. ಅವರು ಭಕ್ತಿ, ಶ್ರದ್ಧೆಯಿಂದ ಮಾತ್ರ ಇಲ್ಲಿಗೆ ಬರುತ್ತಿದ್ದಾರೆಂದು ಹೇಳಿದ್ದಾರೆ.

ಅಲ್ಲದೇ ವಿರಾಟ್- ಅನುಷ್ಕಾ ಫ್ಯಾನ್ಸ್ ಮತ್ತು ಕೃಷ್ಣ ಭಕ್ತರೆಲ್ಲ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೋಟಿ- ಕೋಿಟಿ ಗಳಿಸಿ ಬದುಕುವ ಈ ದಂಪತಿ, ಬರೀ 5 ಕೋಟಿಗಾಗಿ ಪದೇ ಪದೇ ಇಲ್ಲಿ ಬರುತ್ತಾರೆಂದರೆ ಇದು ನಂಬುವ ಮಾತೇ..? ಹಾಗಾದ್ರೆ ಕೃಷ್ಣ ಜಪ, ಭಕ್ತಿ, ತುಳಸಿ ಮಾಲೆ ಧಾರಣೆ ಇವೆಲ್ಲವೂ ಹಣಕ್ಕಾಗಿಯೇ ಮಾಡತ್ತಿದ್ದಾರಾ ಎಂದು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಿಡಿಕಾರಿದ್ದಾರೆ.

About The Author