- Advertisement -
Mandya News: ಮಂಡ್ಯ: ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಮುನ್ನಲೆಗೆ ಬಂದಿದೆ. ದಲಿತರನ್ನು ಸಿಎಂ ಮಾಡಿ ಎಂದು ಮಂಡ್ಯದಲ್ಲಿ ದಲಿತ ಸಂಘಟನೆಗಳು ಜಾನ ಜಾಗೃತಿಗಿಳಿದಿದೆ.
ರಾಜ್ಯದಲ್ಲಿ ಸಿಎಂ ಬದಲಾವಣೆಯಾಗೋದಾದ್ರೆ, ಅದನ್ನು ದಲಿತ ನಾಯಕರಿಗೇ ನೀಡಿ ಎಂದು ಮಂಡ್ಯದಲ್ಲಿ ದಲಿತ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ವೆಂಕಟಸ್ವಾಮಿ ಆಗ್ರಹಿಸಿದ್ದಾರೆ. ಇದೇ ತಿಂಗಳ 21 ಕ್ಕೆ ಸಿ.ಎಂ.ಬದಲಾವಣೆ ಮಾಡಲಾಗ್ತಿದೆ ಎಂಬ ಸುದ್ದಿ ಹರಿದಾಡ್ತಿದೆ. ಹಾಗೊಂದು ವೇಳೆ ಅದು ನಿಜವೇ ಆಗಿದ್ರೆ ದಲಿತರಿಗೆ ಅವಕಾಶ ಮಾಡಿ ಕೊಡಬೇಕು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮುನಿಯಪ್ಪ, ಮಹದೇವಪ್ಪ, ಅಥವಾ ಸತೀಶ್ ಜಾರಕಿ ಹೋಳಿಗೆ ನೀಡಬೇಕು. ದಲಿತರಿಗೆ ಈ ಬಾರಿ ಅವಕಾಶ ನೀಡದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
- Advertisement -

