Friday, September 20, 2024

Latest Posts

ಮುಟ್ಟಾದಾಗ ಇಂಥ ವಸ್ತುಗಳನ್ನ ಮುಟ್ಟಲೇಬೇಡಿ..!

- Advertisement -

ಹಿಂದೂ ಪದ್ಧತಿ ಪ್ರಕಾರ ಮುಟ್ಟಾದಾಗ ಕೆಲ ಕೆಲಸಗಳನ್ನ ಮಾಡಬಾರದು. ಕೆಲ ವಸ್ತುಗಳನ್ನ ಮುಟ್ಟಬಾರದು. ಇದರಿಂದ ದೋಷ ಉಂಟಾಗುತ್ತದೆ ಎನ್ನಲಾಗಿದೆ. ಹಾಗಾದ್ರೆ ಯಾವ ವಸ್ತುಗಳನ್ನ ಮುಟ್ಟಾದಾಗ ಮುಟ್ಟಬಾರದು ಅನ್ನೋ ಬಗ್ಗೆ ತಿಳಿಯೋಣ.

Karnataka TV Contact

ಮುಟ್ಟಾದಾಗ ಕೆಲ ವಸ್ತುಗಳನ್ನ ಮುಟ್ಟಿದ್ದಲ್ಲಿ, ಕೆಲ ಹುಳುಗಳು ಮನೆಗೆ ಬಂದು ಏನೋ ತಪ್ಪಾಗಿದೆ ಎಂಬ ಸೂಚನೆ ನೀಡುತ್ತದೆ. ಕೆಲವರ ಮನೆಯಲ್ಲಿ ಅಡುಗೆ ಕೋಣೆಗೆ ಅಥವಾ ದೇವರ ಕೋಣೆಗೆ ಮುಟ್ಟಾದವರು ಹೋಗಿಬಿಟ್ರೆ, ಮನೆಯ ಒಂದು ಮೂಲೆಯಲ್ಲಿ ಇರುವೆಗಳ ಗುಂಪು ಕಾಣಿಸಿಕೊಳ್ಳುತ್ತದೆ. ಅಥವಾ, ಚೇಳು ಬರುತ್ತದೆ.

ಮೊದಲನೇಯದಾಗಿ, ತುಳಸಿ ಗಿಡವನ್ನ ಮುಟ್ಟಾದ ಸಮಯದಲ್ಲಿ ಮುಟ್ಟಬಾರದು. ಮುಟ್ಟಾದ ಸಮಯದಲ್ಲಿ ತುಳಸಿ ಗಿಡ ಮುಟ್ಟಿದ್ರೆ, ಕೆಲ ದಿನಗಳಲ್ಲೇ ತುಳಸಿ ಗಿಡ ಬಾಡಿ ಹೋಗುತ್ತದೆ. ಹೀಗಾದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಆದ್ದರಿಂದ ಮುಟ್ಟಾದ ಸಂದರ್ಭದಲ್ಲಿ ತುಳಸಿ ಗಿಡ ಮುಟ್ಟಬೇಡಿ.

ಎರಡನೇಯದಾಗಿ ಮುಟ್ಟಾದಾಗ ಗೋವನ್ನ ಮುಟ್ಟುವಂತಿಲ್ಲ. ಹಿಂದೂಗಳಲ್ಲಿ ಗೋವನ್ನ ದೇವರೆಂದು ಪೂಜಿಸಲಾಗುತ್ತದೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ವಾಸವಾಗಿರುವ ಕಾರಣ, ಅದೊಂದು ಪವಿತ್ರ ಜೀವವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮುಟ್ಟಾದಾಗ ಗೋವನ್ನು ಪೂಜಿಸುವಂತಿಲ್ಲ.

ಇನ್ನು ದೈವಾಂಶ ಹೊಂದಿರುವ ಅರಳಿ ಮರವನ್ನ ಮುಟ್ಟಾದಾಗ ಮುಟ್ಟಬಾರದು. ಪವಿತ್ರವಾದ ಅರಳಿ ಮರಕ್ಕೆ ಹಬ್ಬ ಹರಿದಿನಗಳಲ್ಲಿ ಮುತ್ತೈದೇಯರು ಪೂಜೆ ಸಲ್ಲಿಸುತ್ತಾರೆ. ಅಲ್ಲದೇ, ಅರಳಿಮರ ಶಿವ ಪಾರ್ವತಿಯರ ಸ್ಥಾನ ಎನ್ನಲಾಗುತ್ತದೆ. ಹೀಗಾಗಿ ಅರಳಿಮರವನ್ನ ಮುಟ್ಟಾದಾಗ ಮುಟ್ಟುವಂತಿಲ್ಲ.

ಮುಟ್ಟಾದಾಗ ಕೆಲವರು ಮದುವೆ ಮುಂಜಿಯನ್ನ ಅಟೆಂಡ್ ಮಾಡ್ತಾರೆ. ಆದ್ರೆ ಹೀಗೆ ಮಾಡಿದ್ರೂ ಕೂಡ, ಅಲ್ಲಿ ನಡೆಯುವ ಪೂಜೆ ಹೋಮ ಹವನದಲ್ಲಿ ಭಾಗಿಯಾಗಕೂಡದು. ಇದರಿಂದ ನಿಮಗೂ ದೋಷ ತಟ್ಟುವುದಲ್ಲದೇ, ಮದುವೆಯಾದವರ ಜೀವನವೂ ಕೂಡ ಸರಿಯಾಗಿರುವುದಿಲ್ಲ.

ಇನ್ನು ಐದನೇಯದಾಗಿ ಎಲ್ಲರಿಗೂ ಗೊತ್ತಿರುವ ಹಾಗೆ, ಮುಟ್ಟಾದಾಗ ದೇವರ ಕೋಣೆಗೆ ಹೋಗಬಾರದು, ದೇವಸ್ಥಾನಕ್ಕೆ ಹೋಗಬಾರದು, ದೀಪ ಹಚ್ಚಬಾರದು, ದೇವರಿಗೆ ಸಂಬಂಧಿಸಿದ ವಸ್ತು ಮತ್ತು ಬಟ್ಟೆಗಳನ್ನ ಮುಟ್ಟಬಾರದು.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911

- Advertisement -

Latest Posts

Don't Miss