Spiritual: ಆಷಾಢ ಮುಗಿದ ಬಳಿಕ ಶ್ರಾವಣ ಶುರುವಾಗಲಿದೆ. ಶ್ರಾವಣ ಅಂದ್ರೆ ಹಬ್ಬಗಳ ಮಾಸ. ನಾಗಪಂಚಮಿ ಶುರುವಾಗಿ, ವರ ಮಹಾಲಕ್ಷ್ಮೀ ಹಬ್ಬ, ಕೃಷ್ಣಾಷ್ಟಮಿ ಹೀಗೆ ಎಲ್ಲ ಹಬ್ಬಗಳು ಶ್ರಾವಣ ಮಾಸದಲ್ಲಿ ಬರುತ್ತದೆ. ಶ್ರಾವಣ ಮಾಸದ ಬಗೆಗಿನ ವಿಶೇಷತೆ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ.
ಯಾಾವ ಕಾಲದಲ್ಲೇ ಆಗಲಿ ನಾವು ನಮ್ಮ ಮನೆ ದೇವರಿಗೆ ಪೂಜಿಸುವುದಕ್ಕಿಂತ ಹೆಚ್ಚು ಶ್ರಾವಣ ಮಾಸದಲ್ಲಿ ಮನೆ ದೇವರಿಗೆ ಪೂಜೆ ಮಾಡುವುದು ಅತೀ ಉತ್ತಮ ಅಂತಾರೆ ಶ್ರೀನಿವಾಸ ಗುರೂಜಿ. ಅಲ್ಲದೇ, ಶ್ರೀವಿಷ್ಣು, ಶ್ರೀನಿವಾಸನ ಆರಾಧಾನ ಶ್ರಾವಣ ಮಾಸದಲ್ಲಿ ಉತ್ತಮ ಅಂತಾ ಹೇಳಲಾಗಿದೆ. ಶ್ರಾವಣ ಸೋಮವಾರ ಶಿವನನ್ನು ಆರಾಧಿಸಿದರೆ, ಎಲ್ಲ ಕೆಲಸಗಳಲ್ಲೂ ಫಲ ಸಿಗಲಿದೆ ಅನ್ನೋ ನಂಬಿಕೆ ಇದೆ.
ಇನ್ನು ಶ್ರಾವಣ ಮಾಸದಲ್ಲಿ ಗೃಹಪ್ರವೇಶ ಮಾಡಬಹುದು. ಆದರೆ ದೇವರ ಪೂಜೆಗೆ ಹೆಚ್ಚಿನ ಮಹತ್ತವಿದೆ. ಹಾಗಾಗಿ ಈ ತಿಂಗಳಲ್ಲಿ ಹರಿಸೇವೆ ಮಾಡಿಸುತ್ತಾರೆ. ಸ್ರಾವಣ ಶನಿವಾರದಂದು ಶನಿ ಆರಾಧನೆ ಮಾಡಿದ್ದಲ್ಲಿ, ಶನಿಯ ಆಶೀರ್ವಾದ ಹೆಚ್ಚಾಗುತ್ತದೆ. ಶನಿ ಮಹಾತ್ಮೆ ಕಥೆ, ಹನುಮಾನ ಚಾಲೀಸಾ ಕೇಳುವುದರಿಂದ ಗ್ರಹಗತಿಗಳ ದೋಷದಿಂದ ಮುಕ್ತರಾಾಗುತ್ತೀರಿ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




