Thursday, November 13, 2025

Latest Posts

ಚಿನ್ನದ ಬೆಲೆಯಲ್ಲಿ ಸಣ್ಣ ಇಳಿಕೆ, ‘ಬೆಳ್ಳಿ’ ದರದಲ್ಲಿ ಭಾರಿ ಏರಿಕೆ!

- Advertisement -

ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದರೂ, ಇಂದು ಅಲ್ಪ ಪ್ರಮಾಣದ ಇಳಿಕೆ ದಾಖಲಾಗಿದೆ. ಚಿನ್ನದ ಬೆಲೆ ಕಳೆದ 2 ದಿನಗಳಲ್ಲಿ 3820 ರೂಪಾಯಿ ಏರಿಕೆಯಾಗಿದ್ದರೆ, ಇಂದು ಕೇವಲ 330 ರೂಪಾಯಿ ಇಳಿಕೆ ಕಂಡಿದೆ.

ಜಾಗತಿಕ ಆರ್ಥಿಕ ಅನಿಶ್ಚಿತತೆ, ಡಾಲರ್ ಮೌಲ್ಯದ ಏರಿಳಿತ ಮತ್ತು ಮಾರುಕಟ್ಟೆಯ ಚಲನೆಗಳು ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರಿವೆ. ಈ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆ ಗ್ರಾಂಗೆ ₹12,300 ಇದ್ದು, ಈಗ ₹12,551 ಕ್ಕೆ ಏರಿಕೆಯಾಗಿದೆ.ಈ ತಿಂಗಳಲ್ಲಿ ಕನಿಷ್ಠ ಬೆಲೆ ನವೆಂಬರ್ 5ಕ್ಕೆ 12,148 ರೂಗೆ ಇಳಿದಿತ್ತು.

24 ಕ್ಯಾರೆಟ್ ಚಿನ್ನದ ಇಂದಿನ ದರ ಗಮನಿಸೋದಾದ್ರೆ ನವೆಂಬರ್ 12ರಂದು, ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ ₹12,551. ಅಂದರೆ 10 ಗ್ರಾಂಗೆ ₹1,25,510 ಇದೆ. ಇಂದು 24 ಕ್ಯಾರೆಟ್ ಚಿನ್ನದಲ್ಲಿ ಒಟ್ಟು ₹330 ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ ₹11,505, 10 ಗ್ರಾಂಗೆ ₹1,15,050 ಇದೆ. ಇಂದು 22 ಕ್ಯಾರೆಟ್ ಚಿನ್ನದಲ್ಲಿ ₹300 ಇಳಿಕೆ ದಾಖಲಾಗಿದೆ.

ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ ₹12,551, 10 ಗ್ರಾಂಗೆ ₹1,25,510 ಇದೆ. ಈ ದರದಲ್ಲಿ ಜಿಎಸ್‌ಟಿ ಒಳಗೊಂಡಿಲ್ಲ. ಹೀಗಾಗಿ ಮಳಿಗೆಗಳಿಂದ ಮಳಿಗೆಗಳಿಗೆ ದರದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಸಿಗಬಹುದು. ಇನ್ನೊಂದೆಡೆ, ಬೆಳ್ಳಿಯ ಬೆಲೆ ಇಂದು ಏರಿಕೆಯ ಹಾದಿಯಲ್ಲಿದ್ದು, ಗ್ರಾಂಗೆ 2 ರೂಪಾಯಿ ಹೆಚ್ಚಳ ಆಗಿ ₹162 ಆಗಿದೆ. ಬೆಳ್ಳಿಯ ಕೆಜಿಗೆ ದರ ಈಗ ₹1,62,000 ಆಗಿದೆ.

ಚಿನ್ನದ ಬೆಲೆ ಕಳೆದ ದಿನಗಳ ಏರಿಕೆಯ ಬಳಿಕ ಸ್ವಲ್ಪ ಇಳಿಕೆಯಾಗಿದ್ದರೂ, ಒಟ್ಟಾರೆ ಮಾರುಕಟ್ಟೆ ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲೇ ಇದೆ. ಆದರೆ ಬೆಳ್ಳಿಯ ದರದಲ್ಲಿ ನಿರಂತರ ಏರಿಕೆ ಮುಂದುವರಿದಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss