Thursday, November 13, 2025

Latest Posts

Chanakya Neeti: ಪತ್ನಿಗೆ ಈ ವಸ್ತುಗಳನ್ನು ನೀಡಿದ್ರೆ ಪತಿ ನೆಮ್ಮದಿಯಿಂದ ಇರುತ್ತಾನೆ ಅಂತಾರೆ ಚಾಣಕ್ಯರು

- Advertisement -

Chanakya Neeti: ಚಾಣಕ್ಯರು ಜೀವನಕ್ಕೆ ಬೇಕಾದ ಹಲವು ವಿಷಯಗಳನ್ನು ಹೇಳಿದ್ದಾರೆ. ಆರ್ಥಿಕ ಪರಿಸ್ಥಿತಿ, ಸಂಸಾರ, ಸಮಾಜ, ವಿದ್ಯೆ, ಹೀಗೆ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಪತಿಯಾದವನು ಜೀವನದಲ್ಲಿ ಆರ್ಥಿಕ ಯಶಸ್ಸು ಸಾಧಿಸಬೇಕು ಎಂದರೆ, ಪತ್ನಿಯನ್ನು ಗೌರವಿಸಬೇಕು. ಆಕೆಯ ಕಾಳಜಿ ಮಾಡಬೇಕು. ಅಲ್ಲದೇ ಆಕೆಗೆ ಕೆಲ ವಸ್ತುಗಳನ್ನು ನೀಡಬೇಕು. ಹಾಗಾದ್ರೆ ಯಾವುದು ಆ ವಸ್ತುಗಳು ಅಂತಾ ತಿಳಿಯೋಣ ಬನ್ನಿ..

ಪ್ರೀತಿ: ಪತ್ನಿಗೆ ನೀವು ನೀಡಬೇಕಾದ ಪ್ರಪ್ರಥಮ ಉಡುಗ“ರೆ ಎಂದರೆ, ಅದು ಪ್ರೀತಿ. ನೀವು ನಿಮ್ಮ ಪತ್ನಿಗೆ ಏನೇ ಬೆಲೆ ಬಾಳುವ ಗಿಫ್ಟ್ ನೀಡಿದರೂ, ಅದು ಪ್ರೀತಿಗೆ ಸಮವಾಗುವುದಿಲ್ಲ. ಹಾಗಾಗಿ ನೀವು ಆಕೆಯನ್ನು ಪ್ರೀತಿಯಿಂದ ನೋಡಿಕ“ಂಡರೆ, ಮನೆಯಲ್ಲಿ ಸದಾ ಕಾಲ ನೆಮ್ಮದಿ ಇರುತ್ತದೆ.

ಗೌರವ: ಎರಡನೇಯದಾಗಿ ಪತ್ನಿಯನ್ನು ಸದಾ ಗೌರವಿಸಿ. ಕಂಡವರ ಎದುರು ಪತ್ನಿಯ ಬಗ್ಗೆ ಕೀಳಾಗಿ ಮಾತನಾಡುವುದು. ಆಕೆಯ ವ್ಯಕ್ತಿತ್ವದ ಬಗ್ಗೆ ತಮಾಷೆ ಮಾಡುವುದೆಲ್ಲ ಮಾಡಿದರೆ, ಆಕೆಯೂ ನಿಮಗೆ ಕಡಿಮೆ ಗೌರವವನ್ನೇ ನೀಡುತ್ತಾಳೆ. ಅಲ್ಲಿಗೆ ನಿಮ್ಮ ನಿಮ್ಮದಿ ಅರ್ಧಭಾಗ ಹಾಳಾದಂತೆ. ಹಾಗಾಗಿ ಗೌರವ ನೀಡಿ, ಗೌರವ ಪಡೆಯಿರಿ.

ದೈಹಿಕ ಸುಖ: ಪ್ರೀತಿ, ಗೌರವದ ಜತೆಗೆ ಆಕೆಗೆ ನೀವು ದೈಹಿಕ ಸುಖ ನೀಡುವುದು ಮುಖ್ಯ. ಪುರುಷನಿಗೆ ಹೇಗೆ ದೈಹಿಕ ಸುಖದ ಅಗತ್ಯವಿದೆಯೋ, ಅದೇ ರೀತಿ ಮಹಿಳೆಗೂ ದೈಹಿಕ ಸುಖದ ಅಗತ್ಯವಿರುತ್ತದೆ. ಮತ್ತು ಆಕೆ ಬಯಸಿದ್ದು ಸಿಗದದ್ದಾಗಲೇ, ಆಕೆ ಪರಪುರುಷನ ಬಳಿ ಆಕರ್ಷಿತಳಾಗೋದು.

ರಕ್ಷಣೆ: ನೀವು ಸದಾಕಾಲ ನಿಮ್ಮ ಪತ್ನಿಯ ರಕ್ಷಕರಾಗಿರಬೇಕು. ಬರೀ ಸಮಾಜದಲ್ಲಿ ಮಾತ್ರವಲ್ಲ. ಕೆಲವು ಸಲ ಮನೆಯಲ್ಲಿಯೇ ಆಕೆ ಪರಕೀಯಳಾಗಿರುತ್ತಾಳೆ. ಬೇರೆ ಮನೆಯಿಂದ ಬಂದವಳು ಎಂಬ ಕಾರಣಕ್ಕೆ, ಆಕೆಯನ್ನು ಕೆಲವು ಬಾರಿ ಕೀಳಾಗಿ ನೋಡಲಾಗುತ್ತದೆ. ಆ ಸಮಯದಲ್ಲಿ ಪತಿಯೇ ಆಕೆಯ ರಕ್ಷಕನಾಗಿ ನಿಲ್ಲಬೇಕು.

ಹಣ: ನಿಮ್ಮ ಮನೆಯಲ್ಲಿ ನಿಮಗಿಂತ ನಿಮ್ಮ ಪತ್ನಿಗೆ ಹೆಚ್ಚು ಹಣ ಬಳಸುವ ಬುದ್ಧಿವಂತಿಕೆ ಇದ್ದರೆ, ನೀವು ಹಣವನ್ನು ನಿಮ್ಮ ಪತ್ನಿಗೆ ನೀಡಬೇಕು. ಆಕೆ ಅವಶ್ಯಕತೆ ಇದ್ದರೆ ಮಾತ್ರ ಖರ್ಚು ಮಾಡುತ್ತಾಳೆ. ಮತ್ತು ಕಷ್ಟಕಾಲಕ್ಕಾಗಿ ಹಣ ಉಳಿಸುತ್ತಾಳೆ. ಉಳಿದ ಹಣದಲ್ಲಿ ಸ್ವಲ್ಪ ಹಣ ದಾನಕ್ಕಾಗಿ ಮತ್ತು ಸ್ವಲ್ಪ ಹಣ ಹೂಡಿಕೆ ಮಾಡಲು ಬಳಸಿ. ಏಕೆಂದರೆ ಇದ್ದಲ್ಲೇ ಇರುವ ಹಣ ನಿಂತ ನೀರಿನಂತೆ. ಹಾಗಾಗಿ ಹಣವನ್ನು ಉತ್ತಮ ರೀತಿಯಲ್ಲಿ ಬಳಸಬೇಕು.

- Advertisement -

Latest Posts

Don't Miss