Tumakuru: ತುಮಕೂರಿನಲ್ಲಿ ಕಾಂಗ್ರೆಸ್ ವೈಟ್ ವಾಶ್ ಆದ್ರೂ ಆಗಬಹುದು ಎಂಬ ಮಾರ್ಮಿಕ ನುಡಿ ನುಡಿದ ರಾಜಣ್ಣ

Tumakuru News: ತುಮಕೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ತುಮಕೂರಿನಲ್ಲಿಂದು ಮಾತನಾಡಿದ್ದು, ಸ್ವಪಕ್ಷಕ್ಕೆ ಟಾಂಗ್ ನೀಡಿದ್ದಾರೆ.

ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಗ್ರಾ.ಪಂ.ನಲ್ಲಿ ತಾಲ್ಲೂಕು ಆಡಳಿತ ಹಾಗೂ ಗ್ರಾ.ಪಂ.ವತಿಯಿಂದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು,  2004 ರಲ್ಲಿ ನನಗೆ ಕಾಂಗ್ರೆಸ್ ಪಕ್ಷ ಕೈ ಕೊಟ್ಟಿದ್ದರಿಂದ ಬೇಸತ್ತು ಜೆಡಿಎಸ್ ನಿಂದ ಗೆದ್ದು ಶಾಸಕನಾಗಿದ್ದೆ. ಈ ವೇಳೆ ಇಡೀ ಜಿಲ್ಲೆಯಲ್ಲೇ ಕಾಂಗ್ರೆಸ್ ಪಕ್ಷವನ್ನು ವೈಟ್ ವಾಶ್ ಮಾಡಲಾಗಿತ್ತು. ಈಗ ಮತ್ತೆ ಅಂತಹ ಸಂದರ್ಭ ಬಂದರು ಬರಬಹುದು. ಮುಂದಿನ ದಿನದಲ್ಲಿ ಜೆಲ್ಲೆಯಲ್ಲಿ ಕಾಂಗ್ರೆಸ್ ಖಾಲಿಯಾದರು ಆಶ್ಚರ್ಯವಿಲ್ಲ ಎಂದು, ಮಾರ್ಮಿಕವಾಗಿ ಪಕ್ಷದ ಬಗ್ಗೆ ಕೆಎನ್ ರಾಜಣ್ಣ ಟಾಂಗ್ ನೀಡಿದ್ದಾರೆ.

ಮಧುಗಿರಿಯಲ್ಲಿ 2004 ರಲ್ಲಿ ಕಾಂಗ್ರೇಸ್ ನನ್ನು ಹೊರಗೆ ಹಾಕಿತ್ತು ಇದರಿಂದ ನಾನು ಜೆಡಿಎಸ್ ಸೇರ್ಪಡೆಯಾಗಿದ್ದೆ. ಒಳ್ಳೆಯ ರಾಜಕಾರಣಿಗಳಿಗೆ ಕೆಲಸ ಮಾಡುವವರಿಗೆ ಅಸಮಾನತೆ ತಂದರೆ ಅಂತಹ ಪಕ್ಷಗಳಿಗೆ ಉಳಿಗಾಲವಿರುತ್ತದೆಯೇ..? ಅಂದು ಜಿಲ್ಲೆಯಲ್ಲೆ ಕಾಂಗ್ರೆಸ್ ಬಾವುಟ ಹಿಡಿಯದಂತೆ ಮಾಡಿದ್ದೆ. ನನ್ನ ಕ್ಷೇತ್ರದ ಕಾರ್ಯಕರ್ತರು ನಡೆಸಿದ ಬೈಕ್ ರ್’್ಯಾಲಿ ಯಲ್ಲಿ ಯಾರೊಬ್ಬರು ಸಹ ಕಾಂಗ್ರೆಸ್ ಬಾವುಟ ಹಿಡಿದಿಲ್ಲ. ಮುಂದಿನ ದಿನಗಳಲ್ಲಿ ನೋಡೋಣಾ ಯಾವ ಬಾವುಟ ಹಿಡಿಯೋಣ ಎಂದರು. ಅಂತಹ ಸಂಧರ್ಭ ಬಂದರು ಬರಬಹುದು ಎಂದು ಭವಿಷ್ಯ ನುಡಿದರು ಎಂದು ರಾಜಣ್ಣ ಹೇಳಿದ್ದಾರೆ.

ಇನ್ನು ಬೇರೆ ಪಕ್ಷದಿಂದಲೂ ನನ್ನನ್ನು ಜನ ಗೆಲ್ಲಿಸಿದ್ದಾರೆ ಎನ್ನುವ ಮೂಲಕ ರಾಜಣ್ಣ ಕಾಂಗ್ರೆಸ್ ಪಕ್ಷದಿಂದ ಆಚೆ ಬರುವ ನಿರ್ಧಾರ ಮಾಡಿದ್ರಾ ಅನ್ನೋ ಪ್ರಶ್ನೆ ಮೂಡಿದೆ.  ದೇವೆಗೌಡರು ಎದೆ ಬಡಿದುಕೊಂಡು ನಾಟಕ ಆಡಿದ್ರು. ನಾಟಕ ಅರಿತ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅಭೂತಪೂರ್ವ 5000 ಮತಗಳ ಅಂತರದಿಂದ ಗೆಲುವು ಕೊಟ್ಟಿದ್ದಾರೆ. ಗುಡಿಸಲು ಮುಕ್ತ ಮಧುಗಿರಿ ಮಾಡುವುದಾಗಿ ಅಂದು ಭರವಸೆ ಕೊಟ್ಟಿದ್ದೆ. ಇಂದು ಅದು ಈಡೇರಿದೆ . ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ರಾಜಣ್ಣ ಹೇಳಿದ್ದಾರೆ. ಒಟ್ಟಾರೆ ರಾಜಣ್ಣನವರ ಹೇಳಿಕೆ ನವಂಬರ್ ಕ್ರಾಂತಿಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ ಎಂದರು ಆಶ್ಚರ್ಯವಿಲ್ಲ.

About The Author