Mandya News: ಮಂಡ್ಯ: ಕೆಲವರು ಪ್ರಾಣಿಗಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಮನೆ ಮಕ್ಕಳ ಹಾಗೆ ನೋಡಿಕ“ಳ್ಳುತ್ತಾರೆ. ಹೆಚ್ಚಾಗಿ ನಾಯಿ, ಬೆಕ್ಕುಗಳಿಗೆ ಈ ಪ್ರೀತಿ ಸಿಗುತ್ತದೆ. ಆದರೆ ಮಂಡ್ಯದಲ್ಲಿ ಹಸುವಿಗೆ ಈ ಪ್ರೀತಿ ಸಿಕ್ಕಿತ್ತು. ಯುವ ರೈತ ಹೇಮಂತ್ ಆ ಹಸುಗಳಿಗೆ ಸೀಮಂತ ಕೂಡ ಮಾಡಿಸಿದ್ದರು. ಮಂಡ್ಯದಲ್ಲಿ ಸೀಮಂತ ಮಾಡಿಸಿಕ“ಂಡಿದ್ದ 2 ಹಳ್ಳಿಕಾರ್ ಹಸುಗಳು 2 ಗಂಡು ಕರುಗಳಿಗೆ ಜನ್ಮ ನೀಡಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ ಯುವ ರೈತ ಹೇಮಂತ್ ಎಂಬಾತ ಕಳೆದ ತಿಂಗಳಷ್ಟೇ ತನ್ನ ಎರಡು ಹಳ್ಳಿಕಾರ್ ಜೋಡಿ ಹಸುಗಳಿಗೆ ಸೀಮಂತ ಮಾಡಿಸಿದ್ದ. ಇದೀಗ ಆ ಎರಡೂ ಹಸುಗಳು ಗಂಡು ಕರುಗಳಿಗೆ ಜನ್ಮ ನೀಡಿದೆ.
ಹೀಗಾಗಿ ಯುವ ರೈತ ಹೇಮಂತ್ ತನ್ನ ಕರುಗಳ ಜತೆ ಈ ಸಂಭ್ರಮ ಹಂಚಿಕ“ಂಡಿದ್ದಾನೆ. ಈ ರೈತ ಹಳ್ಳಿಕಾರ್ ತಳಿಯ ರಾಸುಗಳ ಉಳಿವಿಗೆ ಮುಂದಾಗಿದ್ದಾನೆ.




