Shivamogga: ಪಶುವೈದ್ಯೆಯನ್ನು ಬಲಿಪಡೆದಿದ್ದ ನೀರಾನೆ ಹಂಸಿಣಿ ಸಾವು..

Shivamogga News: ಶಿವಮೊಗ್ಗದಲ್ಲಿ ಪಶುವೈದ್ಯೆಯನ್ನು ಬಲಿಪಡೆದಿದ್ದ ನೀರಾನೆ ಹಂಸಿಣಿ ಇಂದು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ.

ಕೆಲ ದಿನಗಳ ಹಿಂದೆ ಪಶುವೈದ್ಯೆ ಡಾ.ಸಮೀಕ್ಷಾ ಸಾವಿಗೆ ಈ ಹಂಸಿಣಿ ಕಾರಣವಾಗಿತ್ತು. ಇದೇ ಸಿಂಹಿಣಿ ಮಾರ್ಚ್ 18ರಿಂದಲೇ ಆಹಾರ ತ್ಯಜಿಸಿತ್ತು. ನೀರಾನೆ ಉದರದಲ್ಲಿ ಭ್ರೂಣ ಹತ್ಯೆಯಾಗಿ, ಹಂಸಿಣಿ ಸೋಂಕಿಗೀಡಾಗಿತ್ತು. ಗರ್ಭಾಶಯದ ಸೋಂಕು ಇಡೀ ದೇಹ ಪಸರಿಸಿತ್ತು. ಇದಕ್ಕಾಗಿ ಹಂಸಿಣಿಗೆ ಚಿಕಿತ್ಸೆ ಕೂಡ ನೀಡಲಾಗಿತ್ತು.

ಆದರೆ ಚಿಕಿತ್ಸೆಗೆ ಸ್ಪಂದಿಸದ ಹಂಸಿಣಿ, ಆಹಾರ, ಮೆಡಿಸಿನ್ ಎರಡನ್ನೂ ತ್ಯಜಿಸಿತ್ತು. ಇಂದು ನೀರಾನೆ ಸಾವನ್ನಪ್ಪಿದೆ. ಮೃಗಾಲಯದ ಅಧಿಕಾರಿಗಳು ನೀರಾನೆಯ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ವನ್ಯಜೀವಿ ವೈದ್ಯರ ತಂಡ ಮತ್ತು ಶಿವಮ“ಗ್ಗ ಪಶು ವಿಶ್ವವಿದ್ಯಾಲಯ ತಂಡ ಮರಣೋತ್ತರ ಪರೀಕ್ಷೆ ನಡೆಸಲಿದೆ.

About The Author