Bengaluru: ಇಂದಿನಿಂದ 5 ದಿನಗಳ ಕಾಲ ಬಸವನಗುಡಿ ಕಳ್ಳೇಕಾಯಿ ಪರೀಷೆ ನಡೆಯುತ್ತಿದ್ದು, ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದ್ದಾರೆ.
ಬಸವನಗುಡಿ ದೇವಸ್ಥಾನದ ಆವರಣದಲ್ಲಿ ತುಲಾಭಾರ ಮತ್ತು ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು. ಇನ್ನು ಈ ಬಾರಿ ಪರೀಷೆಯ ವಿಶೇಷ ಏನಂದ್ರೆ, ಇದು ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮವಾಗಲಿದೆ.
ಈ ಬಗ್ಗೆ ಮಾತನಾಡಿರುವ ಸಚಿವ ರಾಾಮಲಿಂಗಾರೆಡ್ಡಿ, ಕಳ್ಳೇಕಾಯಿ ಪರೀಷೆಗೆ 500 ವರ್ಷಗಳ ಇತಿಹಾಸವಿದೆ. ಇಂಥ ಕಾರ್ಯಕ್ರಮವನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ನಿರ್ಧರಿಸಿದ್ದೇವೆ. ಪ್ಲಾಸ್ಟಿಕ್ ಬಳಕೆ ಮಾಡುವವರ ಅಂಗಡಿ ಮುಚ್ಚಲಾಗುತ್ತದೆ. ಅಲ್ಲದೇ ಹಣವಿಲ್ಲದೇ, ಅಂಗಡಿ ಇಡಲು ಅವಕಾಶ ಮಾಡಿಕ“ಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ದಕ್ಷಿಣ ಬೆಂಗಳೂರು ಸಂಸದರಾಗಿರುವ ತೇಜಸ್ವಿ ಸೂರ್ಯ, ಈ ಸಲ ಮೊದಲ ಬಾರಿಗೆ 5 ದಿನಗಳ ವರೆಗೆ ಪರಿಷೆಯನ್ನು ಆಯೋಜಿಸಲಾಗಿದ್ದು, ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿಸಲಾಗಿದ್ದು ವಿಶೇಷ. ಬೆಂಗಳೂರು ಅಂತರಾಷ್ಟ್ರೀಯ ನಗರವಾಗಿ ಹೊರಹೊಮ್ಮುತಿದ್ದರೂ, ಪಾರಂಪರಿಕ ಹಿನ್ನೆಲೆಯ ಪರಿಷೆಯು, ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನಾಕರ್ಷಣೆಯ ಕೇಂದ್ರವಾಗಿ ಹಾಗೂ ಗ್ರಾಮೀಣ ಸೊಗಡನ್ನು ಉಳಿಸಿಕೊಳ್ಳುವುದರ ಜೊತೆಜೊತೆಗೆ ಹಿಂದಿನ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುತ್ತಿರುವುದು ಗಮನಾರ್ಹಎಂದಿದ್ದಾರೆ.

