ಅವಮಾನ ಮಾಡ್ಲಿ! ರಾಕೆಟ್ ರೆಡಿ ಇದೆ: ಹಚ್ಚೋರು ಬೇಕು ಅಷ್ಟೇ: Rithvik Krupakar Podcast

Sandalwood: ನಟ ರಿತ್ವಿಕ್ ಕೃಪಾಕರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ಅವಮಾನ ಮಾಡಿದ್ದರ ಬಗ್ಗೆ, ಅದೇ ಅವಮಾನವನ್ನು ಸ್ಪೂರ್ತಿಯಾಗಿ ತೆಗೆದುಕ“ಂಡು ಕೆಲಸ ಮಾಡಿದ ರೀತಿಯ ಬಗ್ಗೆ ಮಾತನಾಡಿದ್ದಾರೆ.

ಸಧೃಡ ದೇಹ ಬೆಳೆಸಿ, ಹೀರೋ ಆಗಿರುವ ರಿತ್ವಿಕ್ ಮುಂಚೆ ತುಂಬಾ ದಪ್ಪಗಿದ್ದರು. ಅದಕ್ಕೆ ಹಲವರು ಹೀಯಾಳಿಸುತ್ತಿದ್ದರಂತೆ. ಅದನ್ನೇ ಸ್ಪೂರ್ತಿಯಾಗಿ ತೆಗೆದುಕಂಡಿದ್ದ ರಿತ್ವಿಕ್ ವ್ಯಾಯಾಮ ಮಾಡುವುದರ ಮೂಲಕ ತೂಕ ಇಳಿಸಿಕ`ಂಡರು. 120 ಕೆಜಿ ಇದ್ದಿದ್ದ ರಿತ್ವಿಕ್ 90 ಕೆಜಿಗೆ ಬಂದಿದ್ದಾರೆ. ಅಲ್ಲದೇ, ಸುಂದರ ದೇಹಾಕಾರ ಉಳಿಸಿಕ“ಂಡಿದ್ದಾರೆ.

ರಿತ್ವಿಕ್ ಪ್ರಕಾರ ನಮಗೆ ಅವಮಾನ ಮಾಡುವವರು ಬೇಕು. ಏಕೆಂದರೆ, ಅಂಥವರೇ ನಮ್ಮ ಯಶಸ್ಸಿಗೆ ಕಾರಣರಾಗುತ್ತಾರೆ. ಅವರು ಹೀಯಾಳಿಸಿದಾಗಲೇ, ನಾವು ಅದನ್ನು ಚಾಲೆಂಜಿಂಗ್ ಆಗಿ ತೆಗೆದುಕ“ಂಡು ಯಶಸ್ಸು ಸಾಧಿಸಬಹುದು ಅಂತಾರೆ ರಿತ್ವಿಕ್.

ರಿತ್ವಿಕ್ ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಕೆಲವು ನಿಯಮಗಳನ್ನು ಹಾಕಿಕ“ಂಡಿದ್ದಾರಂತೆ. ಹುಚ್ಚರಂತೆ ಕನಸು ಕಾಣಬೇಕು. ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಯಾರ ಇನ್‌ಫ್ಲುಯೆನ್ಸ್ ಇಲ್ಲದೇ ನಮ್ಮ ಪ್ರಯತ್ನ ನಾವೇ ಮಾಡಬೇಕು. ನಮಗಾಗಿ ಕೆಲವು ಲಕ್ ಅಥವಾ ಸಮಯ ಬರುತ್ತದೆ. ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕು ಅಂತಾರೆ ರಿತ್ವಿಕ್ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author