Mandya News: ಮಂಡ್ಯ: ಗುಲಾಮರ ರಾಜ ನಮ್ಮ ಶಾಸಕ ನರೇಂದ್ರಸ್ವಾಮಿ ಎಂದು ಮಳವಳ್ಳಿ ಶಾಸಕರಾಗಿರುವ ನರೇಂದ್ರ ಸ್ವಾಮಿ ವಿರುದ್ಧ ಸ್ವಪಕ್ಷದ ಮುಖಂಡರೇ ವಾಗ್ದಾಳಿ ನಡೆಸಿದ್ದಾರೆ.
ಮಳವಳ್ಳಿಯ ಕಾಂಗ್ರೆಸ್ ಮುಖಂಡ ಶಿವಕುಮಾರ್ ಅವರು ನರೇಂದ್ರ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕ ನರೇಂದ್ರಸ್ವಾಮಿಯ ಅಧಿಕಾರ ದಾಹ, ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆಂದು, ಅವರ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರನ್ನು ಬೆಳಸದೆ ತಾನೇ ಬೆಳೆಯುವ ಮನಸ್ಥಿತಿಯ ಶಾಸಕರು ಎಂದು ವಾಗ್ದಾಳಿ ನಡೆಸಿದ್ದಾರೆ.
ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಅವರು ನಮ್ಮಣ್ಣಂಗೆ 4 ಸ್ಥಾನ ಸಿಕ್ಕಿದೆ. ಆದರೆ ಈಗ 5ನೇ ಸ್ಥಾನಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಮಂತ್ರಿನೂ ಆಗಲಿ, ಉಪಮುಖ್ಯಮಂತ್ರಿನೂ ಆಗಲಿ, ಮುಖ್ಯಮಂತ್ರಿನೂ ಆಗಲಿ. ಕಾರ್ಯಕರ್ತರು ಸಾಯಲಿ, ತಲೆಕೆಡಿಸಿಕ“ಳ್ಳಬೇಡ ಅಣ್ಣ ನೀನು. ಕಾರ್ಯಕರ್ತರನ್ನು ಗುಲಾಮರಂತೆ ನೋಡಬೇಕು. ನೀನು ರಾಜನಂತಿರಬೇಕು.
ನನ್ನನ್ನು ಜೆಡಿಎಸ್ ಮತ್ತು ಬಿಜೆಪಿಯವರು ಎಂದಿಗೂ ದೂರ ಮಾಡಲಿಲ್ಲ. ನನಗೆಲ್ಲ ಆಶೀರ್ವದಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರು ನನ್ನ ವಿರುದ್ಧವಿದ್ದಾರೆ. ಅಂಥವರಿಗಾಗಿ ನೀನು ನನ್ನನ್ನು ದೂರವಿರಿಸಿದೆ., ಪರ್ವಾಗಿಲ್ಲ ಅಣ್ಣ. ನಮ್ಮಣ್ಣ ಚೆನ್ನಾಗಿರಬೇಕು. 4ನೇ ಹುದ್ದೆನೇ ಸಿಗಬೇಕು. ನಿನಗೆ ಮಂತ್ರಿ ಹುದ್ದೆ ಸಿಗಬೇಕು ಅಂದ್ರೆ ಏನು ಮಾಡಬೇಕು ಹೇಳಣ್ಣ. ಸೀಮೆಎಣ್ಣೆ ಹಾಕಿ ಸಾಯಬೇಕಾ ಹೇಳು ಅಣ್ಣ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.




