Big Boss Kannada: ಕೆಲ ದಿನಗಳ ಹಿಂದೆಯಷ್ಟೇ ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ, ರಿಷಾರ ವಸ್ತ್ರಗಳನ್ನು ತಂದು ವಾಶ್‌ರೂಮ್ ಬಳಿ ಇರಿಸಿದ್ದ ಎಂಬ ಕಾರಣಕ್ಕೆ ಮಹಿಳಾ ಆಯೋಗಕ್ಕೆ ಆತನ ವಿರುದ್ಧ ಕೆಲವರು ದೂರು ನೀಡಿದ್ದರು. ಅಲ್ಲದೇ ಮಹಿಳೆಯರ ಮೇಲೆ ಗಿಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಅವರಿಗೆ ಸಮಸ್ಯೆ ಉಂಟುಮಾಡುತ್ತಿದ್ದಾನೆ ಎಂದು ದೂರು ನೀಡಲಾಗಿತ್ತು.
ಇದೀಗ ಗಿಲ್ಲಿ ಫ್ಯಾನ್ಸ್ ಕೂಡ ರಿಷಾ ವಿರುದ್ಧ ದೂರು ನೀಡಿದ್ದಾರೆ. ಗಿಲ್ಲಿ ರಿಷಾ ಅವರ ವಸ್ತ್ರಗಳನ್ನು ತಂದು ವಾಶ್ ರೂಮ್ ಬಳಿ ಇರಿಸಿದ ಬಳಿಕ, ರಿಷಾ ಕೂಡ ಗಿಲ್ಲಿ ಮೇಲೆ ಹಲ್ಲೆ ಮಾಡಿದ್ದರು. ಈ ಕಾರಣಕ್ಕೆ ರಿಷಾ ಗಿಲ್ಲಿ ಮೇಲೆ ಹಲ್ಲೆ ಮಾಡಿದ್ದಾರೆಂದು ಗಿಲ್ಲಿ ಫ್ಯಾನ್ಸ್ ಪೋಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡಿದ್ದಾರೆ.
ರಾಮನಗರ ಜಿಲ್ಲಾ ಸಿಇಎನ್ ಸ್ಟೇಷನ್‌ಗೆ ಹೋಗಿ ದೂರು ನೀಡಿದ್ದು, ಮಧು ಎಂಬುವವರು ಕಂಪ್ಲೇಂಟ್ ದಾಖಲಿಸಿದ್ದಾರೆ. ಗಿಲ್ಲಿ ಮೇಲೆ ಹಲ್ಲೆ ನಡೆದರೂ ರಿಷಾ ಮೇಲೆ ಆಯೋಜಕರು ಯಾವುದೇ ಕ್ರಮ ಕೈಗ“ಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿರುವ ಮಧು ಅವರು ರಿಷಾ ವಿರುದ್ಧ ಕ್ರಮ ತೆಗೆದುಕ“ಳ್ಳುವಂತೆ ದೂರು ನೀಡಿದ್ದಾರೆ.

