ನಿನ್ ಸೈಜ್ ನೋಡ್ಕೊಂಡಿದ್ದೀಯಾ? ಬಾಯಿಗೆಬಂದಾಗೆ ಕಾಮೆಂಟ್ಸ್!: Prathama Podcast

Sandalwood: ಸಂದರ್ಶನದಲ್ಲಿ ಮಾತನಾಡಿರುವ ನಟಿ ಪ್ರಥಮಾ ಪ್ರಸಾದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರುವ ಕಾಮೆಂಟ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರಥಮಾ ಪ್ರಸಾದ್, ಸೋಶಿಯಲ್‌ ಮೀಡಿಯಾದಲ್ಲ ಬರುವ ಕಾಮೆಂಟ್ಸ್, ಪೋಸ್ಟ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಸೋಶಿಯಲ್ ಮೀಡಿಯಾದಿಂದಲೇ ಫೇಮಸ್ ಆಗಿದ್ದೀನಿ ಅನ್ನೋದನ್ನು ನಾನು ಹೌದು ಅಂತಾನೇ ಹೇಳುತ್ತೇನೆ. ಆದರೆ ಈಕ್ವಲ್ ಆಗಿ ಅದು ಮಾರಕ ಕೂಡ.

ನಮ್ಮ ಮೇಲೆ ಅದೇನು ದ್ವೇಷಾನೋ ತಿಳಿದಿಲ್ಲ. ನಾನು ನನ್ನ ತಾಯಿಯ ಜತೆ ನಾನು ಫೋಟೋ ವೀಡಿಯೋ ಹಾಕಿದಾಗಲೆಲ್ಲ ಕಂಪೇರ್ ಮಾಡಿ, ಕಾಮೆಂಟ್ ಮಾಡುತ್ತಾರೆ. ನೀನೇ ಅವರ ಅಮ್ಮನ ರೀತಿ ಕಾಣುತ್ತೀಯಾ..? ಇದು ವಿನಯಾ ಪ್ರಸಾದ್ ಅಜ್ಜಿನಾ..? ಇದ್ಯಾವುದಿದು ಪ್ರಾಣಿ..? ಹೀಗೆಲ್ಲ ಕಾಮೆಂಟ್ ಮಾಡುತ್ತಾರೆ ಎಂದು ಪ್ರಥಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಪ್ರತಿಮಾ ಪ್ರಸಾದ್ ಮಾಡುವ ಫುಡ್ ವ್ಲಾಗ್‌ಗೆ ಬರುವ ಕಾಮೆಂಟ್ ಬಗ್ಗೆ ಮಾತನಾಡಿದ್ದು, ಅದೆಷ್ಟು ಅನ್ನ ತಿಂತೀಯಾ ನಿನ್ನ ಸೈಜ್ ನೋಡಿಕ“ಂಡಿದ್ಯಾ..? ಅಡುಗೆ ಮಾಡುವ ಕಡಾಯಿ ಯಾಕೆ ಅಷ್ಟು ಕೆಟ್ಟದಾಗಿದೆ..? ಅಂತೆಲ್ಲ ಕಾಮೆಂಟ್ ಮಾಡ್ತಾರೆ ಎಂದು ಪ್ರಥಮಾ ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author