Political news: ಬಿಜೆಪಿಯ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯಾಗದಿದ್ದಲ್ಲಿ, ಜೆಸಿಬಿ ಪಕ್ಷ ತಂದು ಯೋಗಿ ಆದಿತ್ಯನಾಥ್ ರೀತಿ ನಡೆಯಬೇಕಾಗುತ್ತದೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ಯೋಗಿ ಯೋಗಿನೇ, ಮೋದಿ ಮೋದಿನೇ, ಯಡಿಯೂರಪ್ಪ ಯಡಿಯೂರಪ್ಪನೇ. ಇಲ್ಲಿ ಯಾರೂ ಯೋಗಿ ಆಗಲು ಸಾಧ್ಯವಿಲ್ಲ. ಅಂಥವರನ್ನೆಲ್ಲ ಪಕ್ಷದಿಂದ ತೆಗೆದು ಹಾಕಲಾಗಿದೆ. ಅಂಥವರ ಬಗ್ಗೆ ನಾನು ಮಾತನಾಡಲ್ಲ ಅಂದಿದ್ದಾರೆ.
ಅಲ್ಲದೇ, ನೀವು ಪದೇ ಪದೇ ಹಿಂದೂ ಫೈರ್ ಬ್ರ್ಯಾಂಡ್ ಎನ್ನುತ್ತೀರಲ್ಲ. ಹಾಗಾದ್ರೆ ನೀವು ಜೆಡಿಎಸ್‌ಗೆ ಯಾಕೆ ಹೋಗಿದ್ರಿ ಎಂದು ಯತ್ನಾಳ್‌ಗೆ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ. ಜೆಡಿಎಸ್‌ಗೆ ಹೋಗಿ ಕಬಾಬ್, ಬಿರಿಯಾನಿ ತಿಂದು ಬರುವಾಗ ಹಿಂದೂತ್ವದ ತತ್ವ ಸಿದ್ಧಾಂತ ಎಲ್ಲಿ ಹೋಗಿತ್ತು..? ಆವಾಗೇನು ಪೈಗಂಬರ್ ಆಗಿದ್ಯಾ..? ಟಿಪ್ಪು ಆಗಿದ್ಯಾ..? ಎಂದು ಪ್ರಶ್ನಿಸಿದ್ದಾರೆ.




