Sandalwood: ವಿನಯ ಪ್ರಸಾದ್ ಗೆ ಮನ್ನಣೆ ಸಿಕ್ಕಿದ್ಯಾ?: Prathama Prasad Podcast

Sandalwood: ಸಂದರ್ಶನದಲ್ಲಿ ಮಾತನಾಡಿರುವ ನಟಿ ಪ್ರಥಮಾ ಪ್ರಸಾದ್ ಅವರು ತಮ್ಮ ಸ್ಕಿನ್ ಕೇರ್ ಬಗ್ಗೆ, ಮೇಕಪ್ ಬಗ್ಗೆ ಸಣ್ಣ ಟಿಪ್ಸ್ ನೀಡಿದ್ದಾರೆ.

ಕಡಲೆಹಿಟ್ಟು, ಅರಿಶಿನ ಮತ್ತು ಹಾಲು ಇವನ್ನು ಮಿಕ್ಸ್ ಮಾಡಿ ಪ್ರಥಮಾ ಫೇಸ್‌ಮಾಸ್ಕ್ ಹಾಕುತ್ತಾರಂತೆ. ಹೆಚ್ಚು ಪಾರ್ಲರ್‌ಗೆ ಹೋಗುವುದಿಲ್ಲ. ಇನ್ನು ಮೇಕಪ್ ವಿಷಯಕ್ಕೆ ಬಂದ್ರೆ, ಭರತನಾಟ್ಯ ಕಲಿಯುವಾಗಲೇ, ಅವರಿಗೆ ಮೇಕಪ್ ಮಾಡಿಕ“ಳ್ಳುವುದನ್ನು ಹೇಳಿಕ“ಡಲಾಗಿತ್ತು. ಹಾಗಾಗಿ ಮುಂಚೆಯಿಂದಲೂ ಪ್ರಥಮಾಗೆ ಮೇಕಪ್ ಮಾಡಿಕ“ಳ್ಳುವುದು ನೆಚ್ಚಿನ ಕೆಲಸವಂತೆ. ಶೂಟಿಂಗ್ ಸಮಯದಲ್ಲೂ ಸಹ ಪ್ರಥಮಾ ಅವರೇ ಮೇಕಪ್ ಮಾಡಿಕ“ಳ್ಳುತ್ತಿದ್ದರಂತೆ.

ಇನ್ನು ವಿಲನ್ ಪಾತ್ರದ ಬಗ್ಗೆ ಮಾತನಾಡಿರುವ ಪ್ರಥಮಾ, ನನಗೆ ವಿಲನ್ ಪಾತ್ರ ಸಿಕ್ಕರೆ ಖುಷಿ ಖುಷಿಯಾಗಿ ನಿರ್ವಹಿಸುತ್ತೇನೆ. ಆದರೆ ಅಮ್ಮ ಇಲ್ಲಿವರೆಗೂ ವಿಲನ್ ಪಾತ್ರ ಮಾಡಿಲ್ಲ, ಮಾಡುವುದೂ ಇಲ್ಲ. ಅವರಿಗೆ ಅಂಥ ಡೈಲಾಗ್‌ಗಳನ್ನು ಹೇಳಲು ಇಷ್ಟವಾಗುವುದಿಲ್ಲ. ಹಾಗಾಗಿಯೇ ಅವರು ಅಮಿತಾಬಚ್ಚನ್ ಸಿನಿಮಾವನ್ನು ನಿರಾಕರಿಸಿದ್ದರು ಎಂದು ಪ್ರಥಮಾ ಹೇಳಿದ್ದಾರೆ.

ಅಲ್ಲದೇ ಅಮ್ಮನ ಜತೆ ಪಾತ್ರ ಮಾಡಬೇಕು ಅನ್ನೋ ಆಸೆ ಬಗ್ಗೆ ಮಾತನಾಡಿರುವ ಪ್ರಥಮಾ, ನಾನು ಅಮ್ಮನಿಗೆ ಸಿಗುವ ಕಥೆಯ ಬಗ್ಗೆ ಚರ್ಚಿಸುತ್ತೇನೆ. ನಾವಿಬ್ಬರೂ ಕಥೆಯ ಬಗ್ಗೆ ಚರ್ಚಿಸಿ, ನಟಿಸಬೇಕಾ ಬೇಡವಾ ಅಂತಾ ನಿರ್ಧರಿಸುತ್ತೇವೆ ಅಂತಾರೆ ಪ್ರಥಮಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author