Health Tips: ಜಠರದ ಆರೋಗ್ಯದ ಬಗ್ಗೆ ಡಾ.ಆಂಜೀನಪ್ಪ ಅವರು ವಿವರಿಸಿದ್ದಾರೆ. ನಾವು ರಾತ್ರಿ ಸೇವಿಸಿದ ಆಹಾರವನ್ನು ಜಠರ ರಾತ್ರಿಯಿಡೀ ಅರಿಯುತ್ತಿರುತ್ತದೆ. ಅಂದ್ರೆ ಗ್ರೈಂಡ್ ಮಾಡುತ್ತಿರುತ್ತದೆ.
ಇಂಥ ಭಾಗದಲ್ಲಿ ಸಮಸ್ಯೆ ಆದರೆ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಜಠರದಲ್ಲಿ ಹುಣ್ಣಾದಾಗ ನಾವು ತಿಂದ ಆಹಾರ ಜೀರ್ಣಿಸುವುದಿಲ್ಲ ಅಂತಾರೆ ವೈದ್ಯರು. ಹಾಗಾದ್ರೆ ಇದಕ್ಕೆ ಕಾರಣ ಏನಂದ್ರೆ, ನಾವು ತಿನ್ನುವ ಆಹಾರವನ್ನು ಸರಿಯಾಗಿ ಅಗಿಯದಿರುವುದು. ಅಥವಾ ಜೀರ್ಣವಾಗದೇ ಇರುವಂಥ ಆಹಾರ ಸೇವಿಸುವುದು. ಗಡಿಬಿಡಿಯಲ್ಲಿ ಆಹಾರ ಸೇವಿಸುವುದು. ಇದೆಲ್ಲದರ ಕಾರಣಕ್ಕೆ ನಮ್ಮ ಜಠರದಲ್ಲಿ ಹುಣ್ಣಾಗುತ್ತದೆ ಅಂತಾರೆ ವೈದ್ಯರು.
ಅಲ್ಲದೇ ಮದ್ಯಪಾನ, ಧೂಮಪಾನ ಸೇವನೆ, ಪದೇ ಪದೇ ಪೇನ್ ಕಿಲ್ಲರ್ ಮಾತ್ರೆ ಸೇವನೆ ಕೂಡ ಈ ಸಮಸ್ಯೆಗೆ ಕಾರಣವಾಗಿದೆ. ನಿಮಗೂ ಇಂಥ ಸಮಸ್ಯೆ ಕಾಣಿಸಿದಾಗ, ನೀವು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡಿಯಲೇಬೇಕು. ಇಲ್ಲವಾದಲ್ಲಿ ಇದು ಅಲ್ಸರ್ ಆಗಿ ಪರಿವರ್ತನೆಯಾಗುತ್ತದೆ. ಬಳಿಕ ಅದು ಕ್ಯಾನ್ಸರ್ ಆಗಿಯೂ ಪರಿವರ್ತನೆಯಾಗಬಹುದು. ಅದಕ್ಕಾಗಿ ಯಾವುದೇ ಆರೋಗ್ಯ ಸಮಸ್ಯೆ ನಿರ್ಲಕ್ಷಿಸಬೇಡಿ ಅಂತಾರೆ ವೈದ್ಯರು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

