Wednesday, November 26, 2025

Latest Posts

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

- Advertisement -

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ“ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ ಇರಬೇಕು. ಇಲ್ಲವಾದರೆ ನೆನಪು ಸಪ್ಪೆ ಸಪ್ಪೆ ಎನ್ನಿಸುತ್ತದೆ.

ಇದೀಗ ಇಲ್ಲೋರ್ವ ಹುಡುಗ ಶಾಲೆಗೆ ಪರಾಟಾವನ್ನು ಸೆಲ್ ಫೋನ್ ಬಾಕ್ಸ್‌ನಲ್ಲಿ ಹಾಕಿ ತಂದಿದ್ದು, ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಬಾಲಕ ಸೆಲ್ ಫೋನ್ ಬಾಕ್ಸ್ ತಂದು ಶಿಕ್ಷಕಿಯ ಮುಂದೆ ತೋರಿಸುತ್ತಾನೆ. ಅದಕ್ಕೆ ಶಿಕ್ಷಕಿ ಇದರಲ್ಲಿ ಏನಿದೆ ಎಂದು ಕೇಳುತ್ತಾರೆ. ಆಗ ಬಾಲಕ ಪರಾಟಾ ಇದೆ ಎನ್ನುತ್ತಾನೆ. ಅದಕ್ಕೆ ಶಿಕ್ಷಕಿ ಓಪನ್ ಮಾಡಿ ತೋರಿಸು ಎನ್ನುತ್ತಾರೆ.

ಆತ ತೋರಿಸುತ್ತಾನೆ. ಇದನ್ನು ಪ್ಯಾಕ್ ಮಾಡಿದ್ಯಾರು ಎಂದು ಶಿಕ್ಷಕಿ ಕೇಳುತ್ತಾರೆ. ನಾನೇ ಪ್ಯಾಕ್ ಮಾಡಿದ್ದೆಂದು ಹೇಳುತ್ತಾನೆ ಆ ಹುಡುಗ. ಇದರಲ್ಯಾಕೆ ತಂದಿದಿಯಾ ಇದೇನು ಲಂಚ್ ಬಾಕ್ಸ್‌ ಅಂತಾ ಕೇಳಿದಾಗ, ಬಾಲಕ ಸುಮ್ಮನಾಗುತ್ತಾನೆ. ಇನ್ನು ಇದಕ್ಕೆ ಬಂದ ಕಮೆಂಟ್ಸ್ ಅಂತೂ ಫನ್ನಿಯಾಗಿದೆ.

ಆ್ಯಪಲ್ ಫೋನ್‌ ಬಾಕ್ಸ್‌ನಲ್ಲಿ ತಿಂಡಿ ತಂದಿದ್ದಕ್ಕೆ, ಆ್ಯಪಲ್ ಪರಾಟಾ, ಐ ಪರಾಟಾ ಹೀಗೆ ಫನ್ನಿಯಾಗಿ ಹೇಳಿದ್ದಾರೆ. ಆದರೆ ಕೆಲವರು, ಇಂಥ ನೋವನ್ನು ನಾನೂ ಅನುಭವಿಸಿದ್ದೇನೆ. ಬಾಕ್ಸ್ ಹಾಳಾಗಿರಬಹುದು. ಅಮ್ಮ ಬೈದಿರಬಹುದು. ಅದಕ್ಕೆ ಆ ಬಾಲಕ ಇದರಲ್ಲಿ ತಿಂಡಿ ತಂದಿರಬಹುದು ಎಂದು ಕೆಲವರು ಕರುಣೆಯ ಮಾತನಾಡಿದ್ದಾರೆ. ವೀಡಿಯೋ ಇಲ್ಲಿದೆ ನೋಡಿ..

- Advertisement -

Latest Posts

Don't Miss